ಸೇಡಂ: ಶಾರ್ಟ್ ಸಕ್ಯೂರ್ಟ್ನಿಂದ ಕಬ್ಬಿನ ಬೆಳೆಗೆ ಬೆಂಕಿ ತಗುಲಿ ಸುಮಾರು 13ಎಕರೆ ಪ್ರದೇಶದ ಕಬ್ಬು ಸುಟ್ಟು ಕರಕಲಾದ ಟನೆ ಯಡಗಾ ಗ್ರಾಮದಲ್ಲಿ ಬುಧವಾರ ನಡೆದಿದೆ. ರೈತರಾದ ಪಾರ್ವತಿ ತಾಡಪಳ್ಳಿ ಅವರ ಸರ್ವೇ ನಂ.146ರ ನಾಲ್ಕು ಎಕರೆ, ಗೌಡಪ್ಪ ತಾಡಪಳ್ಳಿ ಅವರ ಸರ್ವೇ ನಂ.147ರ ಮೂರು ಎಕರೆ ಹಾಗೂ ಪಂಡಿತರಾವ ಗೌಣೋರ ಅವರ ಸರ್ವೇ ನಂ. 145/1ರ ಆರು ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಜೆಸ್ಕಾಂ ಅಧಿಕಾರಿಗಳ ರ್ನಿಲಕ್ಷದಿಂದ ಅಳಿದುಳಿದ ಬೆಳೆಯೂ ಹಾಳಾಗಿದೆ. ಮಾಜಿ ಶಾಸಕ ರಾಜಕುಮಾರ ಪಾಟೀಲ್ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ, ರೈತರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ವಿದ್ಯುತ್ ಶಾರ್ಟ್ ಸಕ್ಯೂರ್ಟ್ಗೆ ಕಾರಣರಾದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ರ್ನಿಲಕ್ಷ$್ಯದ ಹೊಣೆಗಾರಿಕೆ ನಿಗದಿಪಡಿಸಿ ಪ್ರಕರಣ ದಾಖಲಿಸಬೇಕು. ಅಲ್ಲದೆ ಹಾನಿಗೊಳಗಾದ ರೈತರಿಗೆ ಜೆಸ್ಕಾಂ ಹಾಗೂ ಸರ್ಕಾರದಿಂದ ಪ್ರತಿ ಎಕರೆಗೆ 2 ಲಕ್ಷ ರೂ.ನಂತೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ನಾಗಪ್ಪ ಕೊಳ್ಳಿ, ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ, ಓಂಪ್ರಕಾಶ ಪಾಟೀಲ್, ಸಿದ್ದಪ್ಪಗೌಡ ಮುಗನೂರ, ಬಸಟೆಪ್ಪ ಸಾಲೊಳ್ಳಿ, ಶಿವಶರಣಪ್ಪ ತಾಡಪಳ್ಳಿ, ಶಾಮ ನಾಗೊಂಡ, ಶರಣಪ್ಪ ದಿಗ್ಗಾಂವ್, ಸಿದ್ದು ಹೂಗಾರ, ವಾಸುದೇವ ಮಾದೇನೂರ, ನಾಗಪ್ಪ ಪೂಜಾರಿ, ಮಲ್ಲಿಕಾರ್ಜುನ ಬಡಿಗೇರ, ಶರಣಪ್ಪ ಗೌಣೋರ, ಗುಡುಸಾಬ, ಸುನೀಲ ಹಳ್ಳಿ, ಸಾಗರ ಕಲಕಂಭ, ರಸೀದ್ ಇತರರಿದ್ದರು.