ಕಲಬುರಗಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ನಡೆಸಲಾಯಿತು.
- ಟನ್ ಕಬ್ಬಿಗೆ 3300 ರೂ. ಬೆಲೆ ನಿಗದಿಗೆ ಆಗ್ರಹ
- 3165 ರೂ. ಕೊಡಿಸುತ್ತೇನೆ ಎಂದಿದ್ದ ಜಿಲ್ಲಾಡಳಿತ 2900ಕ್ಕೆ ಒಪ್ಪಿಗೆಗೆ ಕಿಡಿ
- 3300 ರೂ. ಕೊಡದಿದ್ದರೆ ಕಬ್ಬು ನುರಿಸಲು ಬಿಡಲ್ಲ ಎಂಬ ಎಚ್ಚರಿಕೆ
ಕಲಬುರಗಿ: ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸೂಕ್ತ ದರ ಕೊಡಿಸುವಲ್ಲಿ ಜಿಲ್ಲಾಡಳಿತ ವಿಲವಾಗಿದೆ. ರಾಜ್ಯ ಸರ್ಕಾರ 3300 ರೂ. ದರ ಘೋಷಿಸಿದ್ದರೂ ಸಹ ಜಿಲ್ಲೆಯಲ್ಲಿ ಕೇವಲ 3000 ರೂ. ನೀಡಲು ಒಪ್ಪಿಗೆ ನೀಡಿರುವ ಜಿಲ್ಲಾಡಳಿತದ ನಿರ್ಧಾರವನ್ನು ಖಂಡಿಸಿ ನಗರದಲ್ಲಿ ಕಬ್ಬು ಬೆಳೆಗಾರರ ರೈತ ಸಂಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ, ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆಗಾವಿ, ಬಾಗಲಕೋಟೆಯಲ್ಲಿ ಟನ್ ಕಬ್ಬಿಗೆ 3300 ರೂ. ನೀಡಲಾಗುತ್ತಿದೆ. ಅದೇ ಮಣ್ಣು, ಅದೇ ನೀರು ಇರುವ ಕಲಬುರಗಿಯಲ್ಲಿ ಏಕೆ 3000 ಸಾವಿರ ರೂ. ಎಂದು ಪ್ರಶ್ನಿಸಿರುವ ರೈತರು ಕೂಡಲೇ ಜಿಲ್ಲೆಯಲ್ಲೂ 3300 ರೂ. ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.
ಇಳುವರಿ ಮೋಸ ತಡೆಯಬೇಕು, ಕಟಾವಿನ ವೇಳೆ ರೈತರ ಮೋಸ ತಡೆಯಬೇಕು, 15 ದಿನಕ್ಕೊಮ್ಮೆ ಹಣ ಜಮಾ ಮಾಡಬೇಕು, ತಿಂಗಳಿಗೊಮ್ಮೆ ರೈತರ ಸಭೆ ಕರೆದು, ಸಮಸ್ಯೆ ಪರಿಶೀಲನೆ ನಡೆಸಬೇಕು, ಜೇಷ್ಠತೆ ಆಧಾರದಲ್ಲಿ ಕಬ್ಬು ಕಟಾವಿಗೆ ಅನುಮತಿ ಕೊಡಬೇಕು, ಸಕ್ಕರೆ ಇಳುವರಿ ಲ್ಯಾಬ್ ಸರಿಯಾಗಿ ಮಾಡಬೇಕು, ಮೋಲಾಸಸ್, ಕಾಕಂಬಿಕ, ಎಥೆನಾಲ್, ಡಿಸ್ಟಲರಿ, ಬಯೋ ಕಾಂಪೋಸ್ಟ್, ಪಶು ಆಹಾರ, ಬಗಾಸಸ್, ಕಬ್ಬಿನ ಉಪ ಉತ್ಪನ್ನಗಳ ಲಾಭದಲ್ಲಿ ರೈತರಿಗೆ ಶೇ.50 ಪಾಲು ಕೊಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಜಗದೀಶ ಪಾಟೀಲ್, ರಮೇಶ ಹೂಗಾರ, ಭೀಮಾಶಂಕರ ಮಾಡಿಯಾಳ, ಮಲ್ಲಿಕಾರ್ಜುನ ಪಾಟೀಲ್, ಧರ್ಮರಾಜ ಸಾಹು, ನಾಗೇಂದ್ರಪ್ಪ ಥಂಬೆ, ಮಲ್ಲಿನಾಥ ಮೇಳಕುಂದಾ, ರಾಜು ಶೆಟ್ಟಿ, ಸಿದ್ದರಾಮ ದಣ್ಣೂರ, ಅಶೋಕ ಹೂಗಾರ, ಶರಣಗೌಡ ಪಾಟೀಲ್, ಮೌಲಾ ಮುಲ್ಲಾ, ಮಹಾಂತೇಶ ಜಮಾದಾರ, ರಮೇಶ ರಾಗಿ, ಸಿದ್ದು ಎಸ್.ಎಲ್., ಕರೆಪ್ಪ ಕರಗೊಂಡ, ಮಂಜುಳಾ ಭಜಂತ್ರಿ, ಶರಣಗೌಡ ಪಾಟೀಲ್, ಶಿವರಾಜ ಪಾಟೀಲ್ ಗೊಣಗಿ, ವೀರಣ್ಣ ಗಂಗಾಣಿ, ಶಾಂತವೀರಪ್ಪ ಹೆಬ್ಬಾಳ, ಶಾಂತವೀರ ಪಾಟೀಲ್ ಇತರರಿದ್ದರು.
ಸಚಿವರ ವಿರುದ್ಧ ಆಕ್ರೋಶ
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆ ಕಬ್ಬು ಬೆಳೆಗಾರರನ್ನು ವಿಶ್ವಾಸಕ್ಕೆ ಪಡೆಯದೇ ಏಕಪಯವಾಗಿ ಕಾರ್ಖಾನೆಗಳೊಂದಿಗೆ ಮಾತುಕತೆ ನಡೆಸಿ, ಮಹಾ ಮೋಸ ಮಾಡಿದ್ದಾರೆ. ರೈತರಿಗೆ ಟನ್ ಕಬ್ಬಿಗೆ 3300 ರೂ. ಘೋಷಿಸುವುದು ಬಿಟ್ಟು, ಪತ್ರಿಕಾಗೋಷ್ಠಿ ನಡೆಸಿ 2900 ರೂ. ಘೋಷಣೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಸಚಿವರು ಒಂದು ಬಾರಿಯಾದರೂ ರೈತರ ಧ್ವನಿ ಆಲಿಸಲಿ. ಅಧಿಕಾರಿಗಳ ಮಾತು ಕೇಳುವುದು ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೈಮುಚ್ಕಿ ಮಾಡೋರೆ ಹೆಚ್ಯಾಗಾರ
ಸಕ್ಕರೆ ಕಾರ್ಖಾನೆಗಳ ದರ ನಿಗದಿ ವ್ಯವಹಾರದಲ್ಲಿ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಖಾನೆಗಳ ಜತೆಗೆ ಕೂಡಿಕೊಂಡು ಕೈ ಮುಚ್ಕಿ (ಒಳ ಒಪ್ಪಂದ) ವ್ಯವಹಾರ ನಡೆಸಿದ್ದಾರೆ. ಅದೇನೋ ಕಂಪನಿಯ ಂಡ್ ರ್ಬತಾದಂತೆ ಅದಕ್ಕೆ ಆಸೀ ಬಿದ್ದು, ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಕಬ್ಬು ಬೆಳೆಗಾರ ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ದಿನಕ್ಕೊಂದು ಹೇಳಿಕೆ ನೀಡದೇ ತಕ್ಷಣ ಟನ್ ಕಬ್ಬಿಗೆ 3300 ರೂ. ದರ ನಿಗದಿ ಮಾಡಬೇಕು. ಹೀಗೆ ಆದರೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ.
ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾಧ್ಯಕ್ಷ ಪ್ರಾಂತ ರೈತ ಸಂಘ
ಟನ್ ಕಬ್ಬಿಗೆ 3300 ರೂ. ಬೇಡಿಕೆ ಇದೆ. ಕಾರ್ಖಾನೆಗಳು ಸಕ್ಕರೆ ಮಾತ್ರವಲ್ಲ ಉಪ ಉತ್ಪನ್ನಗಳಲ್ಲಿ ಭಾರಿ ಲಾಭ ಗಳಿಸುತ್ತವೆ. ಅದರಲ್ಲಿ ಶೇ.50 ಲಾಭ ಕೊಡಬೇಕು ಎಂಬ ನಿಯಮವೇ ಇದ್ದರೂ ಜಿಲ್ಲಾಡಳಿತ ಖ್ಯಾರೇ ಎನ್ನದೇ ಏಕಪಯ ನಿರ್ಧಾರ ತೆಗೆದುಕೊಂಡಿದೆ. ಸರಿಯಾದ ದರ ಕೊಡಿಸಬೇಕು.