ವಿಬಿ&ಜಿ ರಾಮ್​ ಜಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ವೇತನ ಬಿಡುಗಡೆ ಮಾಡಬೇಕು, ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಂಕೂರ ಕ್ರಾಸ್​ ಬಳಿ ಕರ್ನಾಟಕ ಪ್ರಾಂತ ರೈತ ಸಂದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಶರಣಬಸಪ್ಪ ಮಮಶೆಟ್ಟಿ, ೇಮಲಿಂಗ ನರೋಣಾ, ಸಿದ್ದಮ್ಮ ದೇವನ್​, ಸಾವಿತ್ರಿ ಮಾಲಗತ್ತಿ ಇತರರಿದ್ದರು. 
ಕಲಬುರಗಿ

ಗುಳೆ ತಡೆಯಿರಿ, ಬಾಕಿ ಹಣ ಪಾವತಿಸಿ

ಶಹಾಬಾದ್​: ಭೀಕರ ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಪರಿಹಾರ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಭಂಕೂರ ಕ್ರಾಸ್​ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಭೀಕರ ಬರದಿಂದ ರೈತರು, ಕೂಲಿ ಕಾರ್ಮಿಕರು ಉದ್ಯೋಗ ಅರಿಸಿ ಗುಳೆ ಹೋಗುತ್ತಿದ್ದು, ಕೂಡಲೇ ಇದನ್ನು ತಡೆಯಬೇಕು. ಸೂಕ್ತ ಆರ್ಥಿಕ ಭದ್ರತೆ ಒದಗಿಸಬೇಕು. ವಿಬಿ-ಜಿ ರಾಮ್​ ಜಿ ಕೂಲಿ ಕಾರ್ಮಿಕರ ಬಾಕಿ ಇರುವ ಸಂಪೂರ್ಣ ವೇತನ ಬಿಡುಗಡೆ ಮಾಡಬೇಕು. ಯಾವುದೇ ಕಡಿತವಿಲ್ಲದೆ 382 ರೂ. ಕೂಲಿ ಪಾವತಿಸಬೇಕು. ಅಕ್ರಮ ಮದ್ಯ ಮಾರಾಟ ತಡೆಯಬೇಕು. ಭಂಕೂರಿನಲ್ಲಿ ಹದಗೆಟ್ಟ ರಸ್ತೆ ದುರಸ್ತಿ ಮಾಡಬೇಕು. ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕು. ಮಹಿಳಾ ಶೌಚಗೃಹ ನಿರ್ಮಿಸಬೇಕು. ಪಡಿತರ ವಿತರಣೆ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇ-ಕೆವೈಸಿ ತಾಂತ್ರಿಕ ತೊಂದರೆ ನಿವಾರಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್​ ನೀಲಪ್ರಭ ಬಬಲಾದ ಅವರಿಗೆ ಮನವಿಪತ್ರ ಸಲ್ಲಿಸಿದರು. ಪ್ರಮುಖರಾದ ಕ್ಷೇಮಲಿಂಗ ನರೋಣಾ, ನಾಗೇಂದ್ರ ಕಂಠಿ, ಸಿದ್ದಮ್ಮ ದೇವನ್​, ಅರುಣ ಮ್ಯಾಗೇರಿ, ಸಾವಿತ್ರಿ ಮಾಲಗತ್ತಿ, ಆರತಿ, ಗೀತಾ ದಂಡೋತಿ, ಭಾಗ್ಯನಾಥ ನಂದಿಹಳ್ಳಿ, ಈರಮ್ಮ ಇತರರಿದ್ದರು.