ಕಲಬುರಗಿ: ಕಲ್ಯಾಣ ಮಂಟಪವೊಂದರಲ್ಲಿ ಮಗಳ ಮದುವೆ ಮಾಡಲು ಮನೆಗೆ ಬೀಗ ಹಾಕಿ ಹೋದಾಗ, ಬೀಗ ಮುರಿದು 7.51 ಲಕ್ಷ ರೂ. ಮೌಲ್ಯದ ಕಳ್ಳತನ ಮಾಡಿದ ಟನೆ ನಗರದ ಸಿದ್ಧರಾಮೇಶ್ವರ ಕಾಲನಿಯಲ್ಲಿ ನಡೆದಿದೆ. ಸಿದ್ಧಾರೂಢ ಬೆಳಮಗಿ ಅವರ ಮನೆಯಲ್ಲಿ ಕಳ್ಳತನವಾಗಿದೆ.
ಮದುವೆ ದಿನವೇ ಕಳವು: ಜೂ.22ರಂದು ಮಗಳ ಮದುವೆಯನ್ನು ಮಾಡಲು ಬೆಳಗ್ಗೆ 6ಗಂಟೆ ಸುಮಾರಿಗೆ ಕಲ್ಯಾಣ ಮಂಟಪಕ್ಕೆ ಇಡೀ ಕುಟುಂಬದವರು ಮನೆಗೆ ಕೀಲಿ ಹಾಕಿ ತೆರಳಿದ್ದಾರೆ. ದೇವರ ಅಕ್ಷತೆ ಬಿದ್ದ ನಂತರ ಸಿದ್ಧಾರೂಢ ಅವರು ಮಗಳಿಗೆ ಮಾಡಿದ್ದ ಮಂಗಳ ಸೂತ್ರ ತರಲು ಮನೆಗೆ ಬಂದಿದ್ದು, ಈ ವೇಳೆ ಕೀಲಿ ಮುರಿದಿದ್ದು, ನೋಡಿದ್ದಾರೆ. ಪರಿಶೀಲಿಸಿದಾಗ ಮನೆಯಲ್ಲಿದ್ದ ಮಂಗಳಸೂತ್ರ, ಸುತ್ತುಂಗುರ, ನೆಕಲೆಸ್, ಬೆಳ್ಳಿ ಆರತಿ, ತಟ್ಟೆ, ಬೆಳ್ಳಿ ಹೂಜಿ, ಲಕ್ಷಿ$್ಮ ಮೂರ್ತಿ, 35 ಸಾವಿರ ರೂ. ನಗದು ಸೇರಿ ಒಟ್ಟು 7.51 ಲಕ್ಷ ರೂ. ಮೌಲ್ಯದ ಸ್ವತ್ತು ಕಳವು ಮಾಡಿದ್ದು, ತಿಳಿದಿದೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.