ಬರ ಕಾಮಗಾರಿ ಆರಂಭಿಸಬೇಕು, ವಿಬಿ&ಜಿ ರಾಮ್​ ಜಿ ಯೋಜನೆಯ ಬಾಕಿ ವೇತನ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಚಿಂಚೋಳಿ ಪ್ರಜಾಸೌಧ ಎದುರು ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂದಿಂದ ಪ್ರತಿಭಟನೆ ನಡೆಸಲಾಯಿತು. ಭೀಮಶೆಟ್ಟಿ ಯಂಪಳ್ಳಿ, ಮಲ್ಲಮ್ಮ ಕೋಡ್ಲಿ, ಜಗದೇವಿ ಚಂದನಕೇರಾ, ಹಣಮಂತ ದೇಶಪಾಂಡೆ, ಚಂದ್ರಕಾಂತ ಮುಸ್ತಾರಿ, ಪ್ರಭು ಪ್ಯಾರಸಬಾದಿ ಇತರರಿದ್ದರು. 
ಕಲಬುರಗಿ

ಬರ ಕಾಮಗಾರಿ ಆರಂಭಿಸಿ ಬಾಕಿ ವೇತನ ಕೊಡಿ

ಚಿಂಚೋಳಿ: ತಾಲೂಕಿನಲ್ಲಿ ಮಳೆಯಿಲ್ಲದೆ ರೈತರು ಮತ್ತು ಕೂಲಿಕಾರರು ಸಂಕಷ್ಟದಲ್ಲಿದ್ದಾರೆ. ಉದ್ಯೋಗವಿಲ್ಲದೆ ಗ್ರಾಮೀಣ ಭಾಗದ ಜನರು ವಲಸೆ ಹೋಗುವಂತಾಗಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮರ್ಪಕವಾಗಿ ಬರ ಕಾಮಗಾರಿ ಆರಂಭಿಸಬೇಕು ಎಂದು ಜಿಲ್ಲಾ ಕೂಲಿಕಾರ್ಮಿಕರ ಸಂದ ಅಧ್ಯ ಭೀಮಶೆಟ್ಟಿ ಯಂಪಳ್ಳಿ ಆಗ್ರಹಿಸಿದರು

ಪ್ರಜಾಸೌಧದ ಮುಂದೆ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ತಿಂಗಳುಗಟ್ಟಲೆ ಕೆಲಸ ಮಾಡಿದರೂ ವಿಬಿ-ಜಿ ರಾಮ್​ ಜಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ವೇತನ ಸಿಗುತ್ತಿಲ್ಲ. ಇದರಿಂದ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಕೂಡಲೇ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಬಾಕಿ ಉಳಿದಿರುವ ವೇತನ ಕಾರ್ಮಿಕರ ಖಾತೆಗೆ ಜಮೆ ಮಾಡಬೇಕು. ಎಲ್ಲರಿಗೂ ನಿರಂತರ ಉದ್ಯೋಗ ಒದಗಿಸಬೇಕು. ಭೂಮಿ ಪಟ್ಟಾ ಕಲ್ಪಿಸಬೇಕು. ಮನೆಗಳ ಬಾಕಿ ಹಣ ಪಾವತಿಸಬೇಕು. ವಿವಿಧ ಮಾಸಾಶನ ಸಮರ್ಪಕವಾಗಿ ನೀಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು.

ಪ್ರಮುಖರಾದ ಮಲ್ಲಮ್ಮ ಕೋಡ್ಲಿ, ಜಗದೇವಿ ಚಂದನಕೇರಾ, ಹಣಮಂತ ದೇಶಪಾಂಡೆ, ಚಂದ್ರಕಾಂತ ಮುಸ್ತಾರಿ, ಪ್ರಭು ಪ್ಯಾರಸಬಾದಿ, ಸೌಭಾಗ್ಯಮ್ಮ ಮಠಪತಿ, ಭೀಮಶಾ ಕೊಂಡಂಪಳ್ಳಿ, ಖಾಜಮಿಯ್ಯ ಇನಾಮದಾರ, ತುಳಜಪ್ಪ ರುಸ್ತಂಪುರ, ಮಹಾಂತೇಶ ರುಸ್ತಂಪುರ, ನರಸಮ್ಮ ಹೇಳೂರ, ವೀರಶೆಟ್ಟಿ, ಬಸವರಾಜ ಇತರರಿದ್ದರು.