ಕಲಬುರಗಿ: ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಸೃಷ್ಟಿ ಪಾಟೀಲ್ 598 (99.66) ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ನಗರದ ಗಾಜಿಪುರ ನಿವಾಸಿ, ಮಲ್ಲಿನಾಥ ಪಾಟೀಲ್, ಸವಿತಾ ದಂಪತಿಯ ಪುತ್ರಿಯಾಗಿರುವ ಸೃಷ್ಟಿ ಪಾಟೀಲ್ ಸಾಧನೆಯನ್ನು ಮೆರೆದಿದ್ದಾರೆ. ತಂದೆ ನಗರದಲ್ಲಿ ಹೊಟೇಲ್ ಮಾಡಿಕೊಂಡಿದ್ದಾರೆ. ವಿಜಿ ಮಹಿಳಾ ಕಾಲೇಜಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದು, ಹಿಂದುಳಿದ ಜಿಲ್ಲೆಯಿಂದಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.
ನಗರದ ಚೇತನ್ ಯೂಥ್ ೋರಂ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಶೇ.95.04 ಅಂಕ ಪಡೆದಿದ್ದರು. ಸ್ಪರ್ಧಾತ್ಮಕ ಪರೀೆ ಬರೆಯುವ ಗುರಿಯೊಂದಿಗೆ ಕಲಾ ವಿಭಾಗವನ್ನು ಆಯ್ಕೆಮಾಡಿಕೊಂಡಿದ್ದರು. ಕಾಲೇಜಿನಲ್ಲಿ ಉಪನ್ಯಾಸಕರು ಹೇಳಿದ್ದನ್ನು ಅಧ್ಯಯನ ಮಾಡಿ, ಪುನರ್ ಮನನ ಮಾಡಿಕೊಂಡಿದ್ದೆ. ಮೊಬೈಲ್ನಿಂದ ದೂರ ಇದ್ದೆ. ತರಗತಿ ನಂತರ ಗ್ರಂಥಾಲಯದಲ್ಲಿ ಗುಂಪು ಅಧ್ಯಯನ ಮಾಡಿದ್ದು ಅನುಕೂಲವಾಗಿದೆ. ಕಾಲೇಜಿನಲ್ಲಿ ವಾರ, ತಿಂಗಳಿಗೊಮ್ಮೆ ತೆಗೆದುಕೊಳ್ಳುತ್ತಿದ್ದ ಕಿರು ಪರೀೆಗಳು ಅಧ್ಯಯನಕ್ಕೆ ಬಲ ನೀಡಿದ್ದವು ಎಂದು ಸೃಷ್ಟಿ ಪಾಟೀಲ್ ಹೇಳಿದರು.
ಕಾಲೇಜಿನ ಉಪನ್ಯಾಸಕರು ಹೇಳಿದ್ದನ್ನು ಗಮನವಿಟ್ಟು ಕೇಳುತ್ತಿದ್ದೆ. ಯುಪಿಎಸ್ಸಿ, ಕೆಪಿಎಸ್ಸಿ ಪರೀೆ ಗುರಿಯೊಂದಿಗೆ ಅಧ್ಯಯನ ಮಾಡುತ್ತಿದ್ದೇನೆ. ಲಿತಾಂಶ ಖುಷಿ ನೀಡಿದೆ. ಮೊಬೈಲ್ನಿಂದ ದೂರವಿದ್ದು, ಪಾಠ ಕೇಳಿ, ಪುನರ್ ಮನನ ಮಾಡಿದ್ದರಿಂದ ಉತ್ತಮ ಲಿತಾಂಶ ಬಂದಿದೆ.
> ಸೃಷ್ಟಿ ಪಾಟೀಲ್, ರಾಜ್ಯ ಟಾಪರ್
ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜು ಕಲಬುರಗಿ