- ಶರಣಗೌಡ ಪಾಟೀಲ್ ಹೇಳಿಕೆ
- ಸಾಂಬಶಿವಯೋಗಿ ಮಠದಲ್ಲಿ ಆಯೋಜನೆ
ಕಲಬುರಗಿ: ಜೇವರ್ಗಿ ರಸ್ತೆಯಲ್ಲಿರುವ ಕೇಸರಿ ಬೆಟ್ಟದ ತಪೋನಿಧಿ ಸಾಂಬ ಶಿವಯೋಗಿ ಸಂಸ್ಥಾನ ಮಠದಲ್ಲಿ ಮೇ 20ರಿಂದ 29ರವರೆಗೆ ಉಚಿತ "ಶ್ರೀ ರುದ್ರ ಪಠಣ ಶಿಬಿರ' ಹಮ್ಮಿಕೊಳ್ಳಲಾಗಿದೆ ಎಂದು ಸಾಂಬ ಸೇನಾ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ್ ನಿಂರ್ಬಗಾ ತಿಳಿಸಿದರು.
ಸಾಂಸರಿಕ ಜಂಜಾಟದಲ್ಲಿ ಮಾನಸಿಕ ಒತ್ತಡಕ್ಕೆ ಮಹಿಳೆಯರು ಒಳಗಾಗುತ್ತಿದ್ದು, ಮಹಿಳೆಯರಿಗಾಗಿ ವಿಶೇಷ "ಶ್ರೀ ರುದ್ರ ಪಠಣ ಶಿಬಿರ' ಹಮ್ಮಿಕೊಳ್ಳಲಾಗಿದೆ. 10 ದಿನ ಯೋಗ, ಧ್ಯಾನ ಸೇರಿ ಹಲವು ಕಾರ್ಯಕ್ರಮಗಳು ಇರುತ್ತವೆ. ಮಹಿಳೆಯರಿಗೆ ವಸತಿ, ಊಟದ ವ್ಯವಸ್ಥೆ ಇರಲಿದೆ. 100ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಠದ ಭಕ್ತೆ ಶಿವಾಕ್ಷಿ ಯಾಚೆ ಮಾತನಾಡಿ, ಮಹಿಳೆಯರು ಶ್ರೀರುದ್ರ ಪಠಣದಿಂದ ಮಾನಸಿಕ ಒತ್ತಡ ಮತ್ತು ಅಶಾಂತಿ ಕಳೆದುಕೊಳ್ಳಲಿದ್ದಾರೆ. ಮನಸ್ಸಿಗೆ ನೆಮ್ಮದಿ, ಶಾಂತಿ ಹಾಗೂ ಆತ್ಮವಿಶ್ವಾಸ ಹೆಚ್ಚಲಿದೆ. ಆರೋಗ್ಯದಲ್ಲೂ ಬದಲಾವಣೆ ಆಗಲಿದೆ. ದೇಹದ ಸಮಸ್ತ ನರನಾಡಿಗಳು ಕೂಡ ಶ್ರೀರುದ್ರ ಪಠಣದಿಂದ ಶುದ್ಧವಾಗಲಿವೆ ಎಂದು ಹೇಳಿದರು.
ಸೇನಾ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಾಮ್ರಾಟ ಮಾತನಾಡಿ, ಮಹಿಳೆಯರು ವಸತಿ ಬೇಡವೆಂದರು ಬೆಳಗ್ಗೆ ಬಂದು ಸಂಜೆ ವಾಪಸ್ ತೆರಳಬಹುದಾಗಿದೆ. ಮಹಿಳೆಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಮಗ್ನತೆ ನೀಡುವ ಜತೆಗೆ ಮನಸ್ಸಿ ಶಾಂತಿ ಕಲ್ಪಿಸುವ ಶಿಬಿರ ಇದಾಗಿದೆ. ಮಾಹಿತಿ ಮತ್ತು ನೋಂದಣಿಗೆ ಶ್ರೀಮಠಕ್ಕೆ ಭೇಟಿ ನೀಡಬೇಕು. ಮೇ 20ರ ಸಂಜೆವರೆಗೆ ನೋಂದಣಿಗೆ ಅವಕಾಶ ಇದೆ ಎಂದು ಹೇಳಿದರು.
ಮಠದ ಶಿವರುದ್ರಯ್ಯ ಮಠಪತಿ, ಸಾವಿತ್ರಿ ಹಿರೇಮಠ, ಕಲ್ಯಾಣಿ ಕಾನಳ್ಳಿ ಇದ್ದರು.