ಕಲಬುರಗಿ ಕೆಕೆಸಿಸಿಐ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರಿಗೆ ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶರಣು ಪಪ್ಪಾ, ಶಶಿಕಾಂತ ಪಾಟೀಲ್, ಡಾ.ಭಾಗ್ಯಶ್ರೀ ಪಾಟೀಲ್, ಶಿವರಾಜ ಇಂಗಿನಶೆಟ್ಟಿ, ಸರ್ವಮಂಗಳಾ ಪಾಟೀಲ್, ನಳಿನಿ ಮಹಾಗಾಂವಕರ್ ಇತರರಿದ್ದರು.
- ಸ್ತ್ರೀರೋಗ ತಜ್ಞೆ ಡಾ.ಭಾಗ್ಯಶ್ರೀ ಪಾಟೀಲ್ ಹೇಳಿಕೆ
- ಕೆಕೆಸಿಸಿಐ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಕಲಬುರಗಿ: ಮಹಿಳೆಯರ ಸುತ್ತಲೂ ಆವರಿಸಿರುವ ಕತ್ತಲಲ್ಲೂ ಬೆಳಕಿನ ಕಿರಣ ಗುರುತಿಸಿ, ಆ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಿರೋಗ ತಜ್ಞೆ ಡಾ.ಭಾಗ್ಯಶ್ರೀ ಎಸ್.ಪಾಟೀಲ್ ಹೇಳಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಉಬುಂಟು ಮತ್ತು ಕೆ-ಲ್ಯಾಂಪ್ ಸಹಯೋಗದೊಂದಿಗೆ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜೀವನದಲ್ಲಾದ ಪ್ರೇರಣೆ ಮತ್ತು ಅನುಭವ, ಕರ್ತವ್ಯ ಅರಿತು ಮುಂದೆ ಸಾಗಬೇಕು. ತಮ್ಮ ಮೇಲಿರುವ ಜವಾಬ್ದಾರಿ ನಿಭಾಯಿಸುತ್ತಾ ಆರೊಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿರುವ ಈ ಕಾರ್ಯ ಪ್ರಶಂಸನಾರ್ಹ ಎಂದರು.
ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶಿವರಾಜ್ ಇಂಗಿನಶೆಟ್ಟಿ ಸ್ವಾಗತಿಸಿದರು. ನಂತರ ವಿವಿಧ ೇತ್ರಗಳಲ್ಲಿ ಅಮೋ ಸಾಧನೆ ಮಾಡಿದ ಮಹಿಳೆಯರಿಗೆ ಮಹಿಳಾ ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಎಸ್ಎಂಇ ಕ್ಷೇತ್ರ ಶೈಲಜಾ ಬೆಕನಾಲ್, ಶಿಕ್ಷಣ ಕ್ಷೇತ್ರ ಡಾ. ಲಕ್ಷ್ಮೀ ಪಾಟೀಲ ಮಾಕಾ, ಸಮಾಜ ಸೇವೆ ಕ್ಷೇತ್ರ ಶೋಭಾರಾಣಿ, ಆರೋಗ್ಯ ಕ್ಷೇತ್ರ ಮೋಹಿನಿ ಎಂ.ಎಸ್, ಕಲೆ ಮತ್ತು ಸಂಸತಿ ಕ್ಷೇ ಶಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿರೋಗ ತಜ್ಞೆ ಭಾಗ್ಯಶ್ರೀ ಪಾಟೀಲ್, ಕೊ ಫೌಂಡರ್ ಉಬುಂಟು ಕನ್ಸೋರ್ಟಿಯಂ ಸರ್ವಮಂಗಳಾ ಪಾಟೀಲ್, ಕೆ&ಲ್ಯಾಂಪ್ ಎಂಡಿ ನಳಿನಿ ಮಹಾಗಾಂವಕರ್ ಅವರನ್ನು ಸಂಸ್ಥೆಯ ವತಿಯಿಂದ ಸತ್ಕರಿಸಲಾಯಿತು.
ಸರ್ವಮಂಗಳಾ ಪಾಟೀಲ ಮತ್ತು ನಳಿನಿ ಮಹಾಗಾಂವಕರ್ ಮಾತನಾಡಿದರು. ಪ್ರಶಸ್ತಿ ಪುರಸತರು ತಮ್ಮ ಅನಿಸಿಕೆ ಹಂಚಿಕೊಂಡರು. ಶರಣಬಸವ ವಿವಿ ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಮಾತನಾಡಿ, ಕೆಕೆಸಿಸಿಐ ಸಂಸ್ಥೆಯು ವಿವಿಧ ೇತ್ರದ ಸಾಧಕರನ್ನು ಆಯ್ಕೆ ಮಾಡಿ, ಪ್ರಶಸ್ತಿ ನೀಡಿ ಗೌರವಿಸಿದ್ದು ಅಭಿನಂದನೀಯ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದ್ದಾರೆ. ಒಬ್ಬ ಮಹಿಳೆಯು ಸಮಾಜ ಹಾಗೂ ಒಂದು ೇತ್ರದಲ್ಲಿ ಮುಂದುವರಿಯಲು ತಂದೆ, ತಾಯಿ ಸೇರಿ ಕುಟುಂಬದ ಸದಸ್ಯರ ಸಮ್ಮತಿ ಮುಖ್ಯ. ಸಾಹಸ, ಆತ್ಮ ವಿಶ್ವಾಸ, ಛಲ ಸಾಧಿಸುವ ಗುರಿಯೂ ಅಷ್ಟೇ ಮುಖ್ಯ. ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ರೋಬೋಟ್ ಆದೇಶಿಸಿದ ಕೆಲಸ ಮಾಡಬಹುದೇ ಹೊರತು ತಾಯಿಯ ಪಾತ್ರ ಮಾಡಲು ಸಾಧ್ಯವಿಲ್ಲ ಎಂದರು.
ಪ್ರಶಸ್ತಿ ಪುರಸತ ಮೋಹಿನಿ ಎಂ.ಎಸ್ ಅನಿಸಿಕೆ ಹಂಚಿಕೊಂಡು, ತಮ್ಮ ಇಡೀ ಜೀವನದಲ್ಲಿ ಸೇವಾ ಮನೋಭಾವದಿಂದ ಮುನ್ನಡೆದಿದ್ದು, ವಿಶೇಷವಾಗಿ ಕೋವಿಡ್&19 ಸಮಯ ಸ್ಮರಿಸಿದರು. ಶೋಭಾರಾಣಿ ಮಾತನಾಡಿದರು. ಕೆಕೆಸಿಸಿಐ ಮಹಿಳಾ ಉದ್ಯಮಶೀಲತಾ ಅಭಿವೃದ್ದಿ ಉಪ ಸಮಿತಿ ಅಧ್ಯಕ್ಷೆ ನಮ್ರತಾ ಫಟಾಟೆ ವಂದಿಸಿದರು. ಸುಜಾತ ಡಿ ಪಾಟೀಲ ನಿರೂಪಿಸಿದರು.