ಕಲಬುರಗಿ ಎನ್​ವಿ ಸಂಸ್ಥೆಯ ಮೈದಾನದಲ್ಲಿ ಶನಿವಾರ ನಡೆದ ನವಲೆ ಇರಾನಿ ಕ್ರಿಕೆಟ್​ ಪಂದ್ಯಾಟಕ್ಕೆ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ರಾಹುಲ್​ ಪಾಂಡ್ವೆ ಬ್ಯಾಟ್​ ಬೀಸುವ ಮೂಲಕ ಚಾಲನೆ ನೀಡಿದರು. ಪ್ರಹ್ಲಾದ್​ ಪೂಜಾರಿ, ಡಾ.ಸುರೇಂದ್ರ ಸಿದ್ದಾಪೂರಕರ್​, ಡಾ.ಗಿರೀಶ ಗಲಗಲಿ, ಅನಂತ ಗುಡಿ, ಜೈಭೀಮ ದರ್ಗಿ, ಸುಂದರ ಕುಲಕರ್ಣಿ, ಸುಹಾಸ ಖಣಗೆ ಇತರರಿದ್ದರು. 
ಕಲಬುರಗಿ

ಕ್ರೀಡಾ ಮನೋಭಾವ ಅಗತ್ಯ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ನವಲೆ ಇರಾನಿ ಕ್ರಿಕೆಟ್​ ಪಂದ್ಯಾವಳಿಗೆ ರಾಹುಲ್​ ಪಾಂಡ್ವೆ ಚಾಲನೆ
ಕಲಬುರಗಿ: ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಪ್ರತಿಯೊಬ್ಬ ಆಟಗಾರ ಕ್ರೀಡಾ ಮನೋಭಾವನೆ ಹೊಂದುವುದು ಅಗತ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ರಾಹುಲ್​ ತುಕಾರಾಮ್​ ಪಾಂಡ್ವೆ ಹೇಳಿದರು.
ನಗರದ ನೂತನ ವಿದ್ಯಾಲಯ ಸಂಸ್ಥೆಯು ಮಾಜಿ ವಿದ್ಯಾರ್ಥಿಗಳ ಸಂದ ಸಹಯೋಗದಲ್ಲಿ ಸಂಸ್ಥೆಯ ವಿಶಾಲ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ನವಿಲೆ ಇರಾನಿ ಕ್ರಿಕೆಟ್​ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಎನ್​ವಿ ಸಂಸ್ಥೆ ತುಂಬಾ ನೂರು ವರ್ಷ ಪೂರೈಸಿ ದಾಪುಗಾಲು ಇರಿಸಿದೆ. ಈ ಹಳೆಯ ಸಂಸ್ಥೆಯು ಇಂದಿಗೂ ಕ್ರೀಡೆ, ಸಂಸತಿಕ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ. ವಿಶೇಷವಾಗಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಹೀಗಾಗಿ ನಿತ್ಯ ಪಾಠದೊಂದಿಗೆ ಆಟೋಟಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಡಾ.ಗೌತಮ ಜಹಾಗೀರದಾರ್​, ಕಾರ್ಯದರ್ಶಿ ಅಭಿಜಿತ್​ ದೇಶಮುಖ ಮಾತನಾಡಿದರು. ಪ್ರಹ್ಲಾದ್​ ಪೂಜಾರಿ, ಡಾ.ಸುರೇಂದ್ರ ಸಿದ್ದಾಪೂರಕರ್​, ಸಂಸ್ಥೆಯ ಮಾಜಿ ವಿದ್ಯಾರ್ಥಿಗಳ ಸಂದ ಅಧ್ಯಕ್ಷ ಡಾ.ಗಿರೀಶ ಗಲಗಲಿ, ಅನಂತ ಗುಡಿ, ಜೈಭೀಮ ದರ್ಗಿ, ಸುಂದರ ಕುಲಕರ್ಣಿ, ಸುಹಾಸ ಖಣಗೆ, ಸುರೇಂದ್ರ ಜಾಜಿ, ಪಾಂಡುರಂಗ ದೇಶಮುಖ, ಡಾ.ಸದಾಶಿವ ಜಿಡಗೇಕರ್​, ರಾಮ ಶಾನಭೋಗ್​ ಇತರರಿದ್ದರು.
ಜೇವರ್ಗಿ ಕ್ರಿಕೆಟ್​ ಕ್ಲಬ್​ ಮತ್ತು ಕೆಕೆಸಿಸಿಐ ತಂಡದ ಮಧ್ಯೆ ನಡೆದ ಪಂದ್ಯದಲ್ಲಿ ಜೇವರ್ಗಿ ತಂಡ ಗೆಲುವು ಸಾಧಿಸಿದರೆ, ದಕ್ಷಿಣ ಸೊಲ್ಲಾಪುರ ಆಪ್ಟೆ ತಂಡ ಮತ್ತು ಬಾಗಲಕೋಟೆ ಕ್ರಿಕೆಟ್​ ಕ್ಲಬ್​ ಮಧ್ಯೆ ನಡೆದ ಪಂದ್ಯದಲ್ಲಿ ಸೊಲ್ಲಾಪುರ ತಂಡ ಜಯಭೇರಿ ಬಾರಿಸಿದೆ.
"

ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಈ ಕ್ರಿಕೆಟ್​ ಟೂರ್ನಿ ಆಯೋಜಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ನಮ್ಮ ಸಂಸ್ಥೆ ಕ್ರೀಡೆ, ಅದರಲ್ಲೂ ಕ್ರಿಕೆಟ್​ಗೆ ಪ್ರಾಧಾನ್ಯತೆ ನೀಡುತ್ತಿದೆ. ಹಿಂದುಳಿದ ಭಾಗದ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಮುಂದೆ ಬರಬೇಕು ಎಂಬುದು ಇದರ ಉದ್ದೇಶ.

ಡಾ.ಗೌತಮ ಜಹಗೀರ್​ದಾರ್​,

ಅಧ್ಯಕ್ಷ, ಎನ್​ವಿ ಸಂಸ್ಥೆ, ಕಲಬುರಗಿ.