ಕಲಬುರಗಿ: ಹಾರಕೂಡ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರ 64ನೇ ಜನ್ಮದಿನ ಸಮಾರಂಭ ದೆಹಲಿಯಲ್ಲಿ ನ.21ರಂದು ಆಚರಿಸಲಾಗುವುದು. ಭಕ್ತರ ಪಾಲ್ಗೊಳ್ಳುವಿಕೆಗೆ ಅನುಕೂಲವಾಗುವಂತೆ ಬೀದರ್ನಿಂದ ದೆಹಲಿವರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗುವುದು ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ನವರಾತ್ರಿ ನಿಮಿತ್ತ ಹಾರಕೂಡ ಮಠಕ್ಕೆ ಬುಧವಾರ ಭೇಟಿ ನೀಡಿ ಶ್ರೀಗಳ ದರ್ಶನಾಶೀರ್ವಾದ ಪಡೆದ ಅವರು, ನವದೆಹಲಿಯ ಜನಪಥ ರಸ್ತೆಯ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ನಲ್ಲಿ ಶ್ರೀಗಳ ಜನ್ಮದಿನ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು. ದೇಶದಿಂದ ಸುಮಾರು ಸಾವಿರಕ್ಕೂ ಹೆಚ್ಚು ಭಕ್ತರು ಮತ್ತು ಅಭಿಮಾನಿಗಳು ಪಾಲ್ಗೊಳ್ಳುವ ನೀರಿೆ ಇದೆ ಎಂದಿದ್ದಾರೆ ಎಂದರು.
ಭಕ್ತರ ಅನುಕೂಲಕ್ಕಾಗಿ ಬೀದರ್ನಿಂದ ನ.19ರಂದು ವಿಶೇಷ ರೈಲು ನವದೆಹಲಿಗೆ ಹೊರಡಲಿದ್ದು, ನ.20ರಂದು ರಾತ್ರಿ ದೆಹಲಿ ತಲುಪಲಿದೆ. ದೆಹಲಿಯಿಂದ ನ.21ರ ರಾತ್ರಿ ಅಥವಾ 22ರ ಬೆಳಗ್ಗೆ ವಾಪಸ್ ಬೀದರ್ಗೆ ಹೊರಡಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. 500 ಜನರಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು. ಇನ್ನು ಅಗತ್ಯ ಉಳ್ಳವರಿಗೆ ರಿಯಾಯಿತಿ ದರದಲ್ಲಿ ವಸತಿ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯರ 54ನೇ ಜನ್ಮದಿನ ಚಿಂಚೋಳಿಯಲ್ಲಿ ಆಚರಿಸುವ ಅವಕಾಶ ಸಿಕ್ಕಿತ್ತು. ಇದೀಗ 10 ವರ್ಷಗಳ ನಂತರ 64ನೇ ಜನ್ಮದಿನ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಆಚರಿಸಲು ಅವಕಾಶ ಸಿಕ್ಕಿರುವುದು ದೊಡ್ಡ ಭಾಗ್ಯ. ಕಾರ್ಯಕ್ರಮ ಯಶಸ್ವಿಗೆ ಭರದಿಂದ ಸಿದ್ಧತೆ ನಡೆದಿದೆ.> ಡಾ.ಉಮೇಶ ಜಾಧವ್, ಮಾಜಿ ಸಂಸದ