ಕಾಳಗಿ ಪಪಂ ಕಚೇರಿಯಲ್ಲಿ ಶ್ರೀ ನೀಲಕಂಠ ಮರಿದೇವರ ಸಾನ್ನಿಧ್ಯದಲ್ಲಿ ಅಧ್ಯಕ್ಷೆ ಸಾಲಿಯಾ ಬೇಗಂ, ಉಪಾಧ್ಯಕ್ಷ ಶರಣು ಬೇಲೂರ ಸೋಮವಾರ ಅಧಿಕಾರ ಸ್ವೀಕರಿಸಿದರು. ಸಿದ್ದರಾಮೇಶ್ವರ ಶಾಖಾಪುರ, ಡಾ.ರೇಣುಕಾ ಕಾಬಾ, ಗುರುರಾಜ ಮದ್ದರೂ, ಬಸವರಾಜ ಮಡಿವಾಳ, ಜಿತೇಂದ್ರ ಚವ್ಹಾಣ್​ ಇತರರಿದ್ದರು. 
ಕಲಬುರಗಿ

ಕಾಳಗಿ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

ಕಾಳಗಿ: ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಅಧ್ಯಕ್ಷೆ ಸಾಲಿಯಾಬೇಗಂ ಬಿಜಾಪುರ, ಉಪಾಧ್ಯ ಶರಣು ಬೇಲೂರ ಸೋಮವಾರ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಇರ್ವರು, ಪಟ್ಟಣದ ಸಮಗ್ರ ಅಭಿವೃದ್ಧಿ ಶ್ರಮಿಸುತ್ತೇವೆ. ಎಲ್ಲರ ಸಲಹೆ& ಸೂಚನೆಯಂತೆ ಮಾದರಿ ಪಟ್ಟಣ ನಿರ್ಮಾಣಕ್ಕೆ ಮುಂದಾಗುತ್ತೇವೆ. ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಹಿರೇಮಠದ ಉತ್ತರಾಧಿಕಾರಿ ಶ್ರೀ ನೀಲಕಂಠ ಮರಿದೇವರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ್​, ಮುಖ್ಯಾಧಿಕಾರಿ ಸಿದ್ದರಾಮೇಶ್ವರ ಶಾಖಾಪುರ, ಸಮುದಾಯ ಸಂಟಕ ಅಧಿಕಾರಿ ಡಾ.ರೇಣುಕಾ ಕಾಬಾ, ಸಹಾಯಕ ಅಭಿಯಂತ ಆಕಾಶ ರಾಠೋಡ್​, ಪಪಂ ಸದಸ್ಯರಾದ ಗುರುರಾಜ ಮದ್ದರೂ, ಬಸವರಾಜ ಮಡಿವಾಳ, ಜಿತೇಂದ್ರ ಚವ್ಹಾಣ್​, ಅಂಬವ್ವ ರಾಜಾಪುರ, ಲಲಿತಾಬಾಯಿ ಕಮಲಾಪುರ, ಚಂದ್ರಕಲಾ ಚವ್ಹಾಣ್​, ಪಾರ್ವತಿ ವಿಠ್ಠಲ್​, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ರಾವೇಂದ್ರ ಗುತ್ತೇದಾರ್​, ಪ್ರಮುಖರಾದ ನೀಲಕಂಠ ಗುತ್ತೇದಾರ್​, ಶಿವಶರಣಪ್ಪ ಕಮಲಾಪೂರ, ಗುಡುಸಾಬ್​ ಕಮಲಾಪುರ, ವೇದಪ್ರಕಾಶ ಮೊಟಗಿ, ಅಸ್ಲಾಂಬೇಗ್​ ಬಿಜಾಪುರ, ಸಂತೋಷ ಪತಂಗೆ, ಅನೀಲಕುಮಾರ ಮಾಲಿಪಾಟೀಲ್​, ರವಿದಾಸ ಪತಂಗೆ, ಮುನೀರ್​ಬೇಗ ಬಿಜಾಪುರ, ಮಹೇಶ ಗುತ್ತೇದಾರ್​, ದತ್ತು ಗುತ್ತೇದಾರ್​, ಸತೀಶ ಕಮಲಾಪುರ, ಮಹೆಬೂಬ್​ಬೇಗ್​ ಇತರರಿದ್ದರು.