ಚಿಂಚೋಳಿ: ಕಬ್ಬನ್ನು ಖರೀದಿಸದೆ ಸಿದ್ಧಸಿರಿ ಎಥೆನಾಲ್ ಕಂಪನಿ ಕ್ಷೇತ್ರದ ರೈತರ ವಂಚಿಸುತ್ತಿದ್ದು, ಇದರಿಂದ ಕಬ್ಬು ಹೊಲದಲ್ಲೆ ಒಣಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ಸ್ಥಳಿಯ ಶಾಸಕರು ಸುಳ್ಳು ಹೇಳುವುದು ಬಿಟ್ಟು ರೈತರ ನೆರವಿಗೆ ಧಾವಿಸಬೇಕು ಎಂದು ಕಾಂಗ್ರೆಸ್ ಯುವ ಘಟಕದ ತಾಲೂಕು ಅಧ್ಯಕ್ಷ ಸಂಜು ಎಸ್. ರಾಣಾಪುರ ಒತ್ತಾಯಿಸಿದರು.
ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಪ್ಲಾಂಟ್ ಕಂಪನಿಯೂ ಸ್ಥಳಿಯ ರೈತರ ಕಬ್ಬು ನುರಿಸಲು ಮುಂದಾಗದಿರುವುದನ್ನು ಖಂಡಿಸಿ ಕಾಂಗ್ರೆಸ್ ಯುವ ಘಟಕದಿಂದ ಬಸವೇಶ್ವರ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಸಂಕಷ್ಟದಲ್ಲಿರುವ ರೈತರ ಕಬ್ಬನ್ನು ತಕ್ಷಣವೇ ಖರೀದಿಸಬೇಕು. ಬಿಜೆಪಿ ಮುಖಂಡರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಆದೇಶ ಹಿಂಪಡೆಯಲು ಶ್ರಮಿಸಬೇಕು ಎಂದು ಆಗ್ರಹಿಸಿದರು.
ಲಕ್ಷ್ಮಣ ಅವಂಟಿ, ಆನಂದ ಟೈಗರ್, ಅಬ್ದುಲ್ ಬಾಸೀದ್, ಬಸವರಾಜ ಮಾಲಿ, ಸಂತೋಷ ಗುತ್ತೇದಾರ್, ಶರಣು ಪಾಟೀಲ್, ಅವಿನಾಶ ಕೊಡದೂರ, ರಾವೇಂದ್ರ ಗುತ್ತೇದಾರ್, ಪ್ರದಿಪ ಡೊಣ್ಣೂರ, ಜಗನ್ನಾಥ ಕಟ್ಟಿ, ಸುರೇಶ ಭಂಟಾ, ಶಬ್ಬೀರ್ಮಿಯ್ಯ, ನಾಗೇಶ ಗುಣಾಜಿ, ನರಸಿಂಹಲು ಕುಂಬಾರ, ಅನ್ವರ್ ಖತೀಬ್, ಶರಣು ಮಜ್ಜಗಿ, ಪಿತಂಬರ ರಾಠೋಡ್, ಮತೀನ್ ಸೌದಾಗಾರ, ಸುರೇಶ ಗುತ್ತೇದಾರ್, ವಿರಶೆಟ್ಟಿ ಯಲ್ಮಡಗಿ, ಗುಂಡಪ್ಪ ಮೋಳಕೇರ, ಪರಮೇಶ್ವರ, ಅಂಬರೀಷ ನಾಟಿಕಾರ, ಲ್ಮಕಾಂತ ಇತರರಿದ್ದರು.