ಮೃತ ಚಾಲಕ ನಿರಂಜನ ಜಮಾದಾರ 
ಕಲಬುರಗಿ

ಹೊತ್ತಿ ಉರಿದ ಲಾರಿ: ಚಾಲಕ ಸಜೀವ ದಹನ: ಕರುಳು ಹಿಂಡುವ ಘಟನೆ

ಪ್ರಮುಖ ಮುಖ್ಯಾಂಶಗಳು

  • ಹೊತ್ತಿ ಉರಿದ ಸಿದ್ಧಸಿರಿ ಎಥೆನಾಲ್​ ಕಂಪನಿಯ ಟ್ಯಾಂಕರ್​
  • ಟ್ಯಾಂಕರ್​ಗೆ ಗುದ್ದಿದ ಕಬ್ಬಿಣದ ಸರಳು ತುಂಬಿದ್ದ ಲಾರಿ
  • ಚಿಂಚೋಳಿ ಗಡಿಯಲ್ಲಿರುವ ತೆಲಂಗಾಣದ ರಾಜ್ಯದ ಮಹಿಬೂಬ್ ನಗರ ಜಿಲ್ಲೆ ವ್ಯಾಪ್ತಿಯಲ್ಲಿ ದುರ್ಘಟನೆ
ಕಲಬುರಗಿ: ಚಿಂಚೋಳಿಯಲ್ಲಿರುವ ಸಿದ್ಧಸಿರಿ ಎಥೆನಾಲ್​ ಕಾರ್ಖಾನೆಯ ಟ್ಯಾಂಕರ್​ಗೆ ಲಾರಿ ಡಿಕ್ಕಿ ಹೊಡೆದು, ಟ್ಯಾಂಕರ್​ ಚಾಲಕ ಸಜೀವ ದಹನವಾದ ಘಟನೆ ತೆಲಂಗಾಣದ ಮಹಿಬೂಬ್​ ನಗರ ಬಳಿ ಸಂಭವಿಸಿದೆ. ಸಿದ್ಧಸಿರಿ ಕಂಪನಿಯ ಚಾಲಕ ನಿರಂಜನ ಜಮಾದಾರ ಸಜೀವ ದಹನವಾದವ.
ಧವಾರ ರಾತ್ರಿ ಚಿಂಚೋಳಿಯಿಂದ ಮಹಿಬೂಬನಗರ ಹೊರಟ ಎಥೆನಾಲ್ ಟ್ಯಾಂಕರ್ ಮಹಿಬೂಬ್ ನಗರದಿಂದ ತಾಂಡೂರ ಬರುತ್ತಿದ್ದ ಸಲಾಕೆ ತುಂಬಿದ ಲಾರಿಯೊಂದು ವೇಗವಾಗಿ ಮುಖಾಮುಖಿ ಡಿಕ್ಕಿಯಾಗಿದೆ. ಇದರಿಂದ ಟ್ಯಾಂಕರ್ ಹೊತ್ತಿ ಉರಿದಿದ್ದು, ಸ್ಥಳದಲ್ಲೇ ಚಾಲಕ ಸಜೀವ ದಹನವಾದ ಘಟನೆ ನಡೆದಿದೆ. ಲಾರಿ ಚಾಲಕ ನಿರಂಜನ ಜಮಾದಾರ್ ಮೂಲತಃ ಹೂಡದಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಮಹಿಬೂಬ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.