govind karjol slams government 
ಕಲಬುರಗಿ

ಮೋದಿ ಅಕ್ಕಿಗೆ ಸಿದ್ದರಾಮಯ್ಯ ಚೀಲ: ಕಾಂಗ್ರೆಸ್​ನಿಂದ ಸುಳ್ಳು ಪ್ರಚಾರ

ಪ್ರಮುಖ ಮುಖ್ಯಾಂಶಗಳು

  • ಗೋವಿಂದ ಕಾರಜೋಳ ವ್ಯಂಗ್ಯ
  • ಬಿಜೆಪಿ ಸಾಧನೆ ತಿಳಿಸಲು ಸಲಹೆ: ಬಿಜೆಪಿ ಪ್ರಶಿಕ್ಷಣ ವರ್ಗ
ಕಲಬುರಗಿ: ರಾಜ್ಯದ ಕಾಂಗ್ರೆಸ್​ ಸರ್ಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮುಗಿಲು ಮುಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ನೀಡಿದ ಅಕ್ಕಿಗೆ ಸಿದ್ದರಾಮಯ್ಯ ಮೂರು ರೂ.ನ ಚೀಲದಲ್ಲಿ ಹಾಕಿಕೊಟ್ಟು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಬಿಜೆಪಿಗರು ಈ ವಾಸ್ತವವನ್ನು ಜನರಿಗೆ ತಿಳಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದ ಹೊರವಲಯದ ಖಾಸಗಿ ರೆಸಾರ್ಟ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ನಿಮಿತ್ತ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ನೀಡಿ ಮಾತನಾಡಿ, ಭಂಡತನದಿಂದ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಮಹಿಳೆಯರಿಗೆ ಉಚಿತ ಬಸ್​ ಎಂದು ಐದು ಸಾರಿಗೆ ನಿಗಮ ಮುಚ್ಚುವ ಹಂತಕ್ಕೆ ತಲುಪಿವೆ. ಶಾಲೆ, ಕಾಲೇಜು ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಸ್​ ಇಲ್ಲ, ಪ್ರಧಾನಿ ಮೋದಿ 89 ಕೋಟಿ ಜನರಿಗೆ ಅಕ್ಕಿ ನೀಡುತ್ತಿದ್ದು, ರಾಜ್ಯ ಸರ್ಕಾರ ಚಿತ್ರ ಹಾಕಿಕೊಂಡು ನಾವು ಕೊಟ್ಟಿದ್ದೇವೆ ಎನ್ನುತ್ತಾರೆ. ಕಡಿಮೆ ದರದಲ್ಲಿ ದೊರೆಯುವ ಜನೌಷಧ ಕೇಂದ್ರ ಮುಚ್ಚಿದ್ದಾರೆ. ಇದೆಲ್ಲವನ್ನು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಅಹಿಂದ ನಾಯಕ ಮೋದಿ: ದೇಶದ ಏಕೈಕ ಅಹಿಂದ ನಾಯಕ ಪ್ರಧಾನಿ ನರೇಂದ್ರ ಮೋದಿ. ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದು, ಮೋದಿ ಹಿಂದುಳಿದ ವರ್ಗಗಳ ನಾಯಕರಾಗಿ ಸವೋರ್ದಯ ಸಿದ್ಧಾಂತ ಅಪ್ಪಟ್ಟ ಪಾಲಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದಲ್ಲಿ ಇರುವುದು ಬಿಜೆಪಿ ಎಂದರು.
ಎರಡು ದಿನದ ಪ್ರಶಿಕ್ಷಣ ವರ್ಗದಲ್ಲಿ ಜಿಲ್ಲೆಯ ಎಲ್ಲ ತಾಲೂಕು, ಮಂಡಲದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು. ಉದ್ಘಾಟನೆ ನಂತರ ವಿವಿಧ ಗೋಷ್ಠಿಗಳು ನಡೆದವು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಅಶೋಕ ಬಗಲಿ, ಚಂದು ಪಾಟೀಲ್​, ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್​, ಅರುಣಕುಮಾರ ಶಹಾಪುರಕರ್​, ಡಾ.ಅವಿನಾಶ ಜಾಧವ್​, ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ, ದತ್ತಾತ್ರೇಯ ಪಾಟೀಲ್​ ರೇವೂರ, ಸುಭಾಷ ಗುತ್ತೇದಾರ್​, ಬಾಬುರಾವ ಚವ್ಹಾಣ್​, ಶಿವರಾಜ ಪಾಟೀಲ್​ ರದ್ದೇವಾಡಗಿ, ನಿತಿನ್​ ಗುತ್ತೇದಾರ್​, ಶರಣಪ್ಪ ತಳವಾರ, ಸಿದ್ದಾಜಿ ಪಾಟೀಲ್​, ಧರ್ಮಣ್ಣ ಇಟಗಾ, ಉಮೇಶ ಪಾಟೀಲ್​, ಮಹಾದೇವ ಬೆಳಮಗಿ, ರಾಜಶೇಖರ ಮೂರ್ತಿ, ಗೌರಿ ಚಿಚಕೋಟಿ, ವೆಂಕಟರೆಡ್ಡಿ, ಡಾ.ಸುಧಾ ಹಾಲಕಾಯಿ, ಶೋಭಾ, ಸಂತೋಷಿ ರಾಣಿ ತೇಲ್ಕೂರ ಇತರರಿದ್ದರು.
ಒಟ್ಟಾಗಿದ್ದರೆ ಬಿಜೆಪಿಗೆ ಒಂಬತ್ತು ಕ್ಷೇತ್ರ: ರಾಜ್ಯದಲ್ಲಿ ಬಿಜೆಪಿ ಒಂದು ಬಾರಿಯೂ ಪೂರ್ಣಪ್ರಮಾಣದಲ್ಲಿ ಸರ್ಕಾರ ರಚಿಸದಿರಲು ಕಾರಣ, ಮಗ್ಗುಲಲ್ಲಿ ಇದ್ದವನನ್ನು ಸೋಲಿಸಲು ಪ್ರಯತ್ನಿಸುತ್ತಿರುವುದು. ಒಗ್ಗಟ್ಟಾಗಿದ್ದರೆ ಕಲಬುರಗಿ ಜಿಲ್ಲೆಯಲ್ಲಿ ಒಂಬತ್ತು ಕ್ಷೇತ್ರ ಗೆಲ್ಲಲ್ಲು ಸಾಧ್ಯ. ಬಿಜೆಪಿ ಸರ್ಕಾರದ ಸಾಧನೆಗಳನ್ನು, ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಕಲಬುರಗಿ ಜಿಲ್ಲೆಯ ನಾಯಕರು ಐದು ಅಡಿ ಬಾಗಿಲೆಂಬ ತಪ್ಪು ಕಲ್ಪನೆಯಲ್ಲಿ ಬಗ್ಗಿ ನಡೆಯುತ್ತಿದ್ದು, 25 ಅಡಿ ಬಾಗಿಲಿದ್ದು, ಸೆಟೆದು ನಡೆಯಬೇಕು ಗೋವಿಂದ ಕಾರಜೋಳ ಸಲಹೆ ನೀಡಿದರು.

ಕೋಟ್​ದೇಶದ ಆರ್ಥಿಕತೆ ಸದೃಢವಾಗಿದ್ದು, ದಿವಾಳಿ ಆಗಲ್ಲ. ಯಾವುದಕ್ಕೂ ರ್ನಿಬಂಧ ಹೇರಿಲ್ಲ. ಸುಸ್ಥಿರವಾಗಿ ಇರಲು ಉಳಿತಾಯಕ್ಕೆ ಮೋದಿ ಸಲಹೆ ನೀಡಿದ್ದಾರೆ. ಹಿಂದೆ ಆಹಾರ ಧಾನ್ಯ ಕೊರತೆ ಇದ್ದಾಗ ಶಾಸ್ತ್ರೀಜಿ ಉಪವಾಸಕ್ಕೆ ಕರೆ ನೀಡಿದ್ದರು, ಇಡೀ ದೇಶ ಸ್ಪಂದಿಸಿತ್ತು. ರಾಹುಲ್​ ಗಾಂಧಿಗೆ ಅದು ಗೊತ್ತಿಲ್ಲ. ಗೊತ್ತಿರುವ ಡಾ.ರ್ಖಗೆ ಮಾತನಾಡಲ್ಲ. ಅಧಿಕಾರದ ಕೊರತೆಯಿಂದ ಕಾಂಗ್ರೆಸ್​ ಸುಳ್ಳು ಹರಡುತ್ತಿದೆ.

— ಗೋವಿಂದ ಕಾರಜೋಳ, ಸಂಸದ