- ಗಲಭೇಕೋರರು, ಗುಂಡಾ, ಜಿಹಾದಿಗಳ ಪ್ರಕರಣ ವಾಪಸ್ ಪಡೆದಿದ್ದಕ್ಕೆ ಪ್ರತಿಭಟನೆ
ಕಲಬುರಗಿ: ವಿವಾದಿತ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ರಾವ ಚೈತನ್ಯ ಶಿವಲಿಂಗದ ಶುದ್ಧೀಕರಣಕ್ಕೆ ತೆರಳಿದ್ದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಕೇಂದ್ರ ಸಚಿವರು, ಶಾಸಕರು, ಜನಪ್ರತಿನಿಧಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಗಲಭೆಕೋರರು, ಗುಂಡಾ, ಜಿಹಾದಿಗಳ ಮೇಲಿನ 8 ಕೇಸ್ ವಾಪಸ್ ತೆಗೆದುಕೊಂಡಿದ್ದು, ಖಂಡಿಸಿ ಶಿವಸೇನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ನೂರಾರು ಜನರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಆಗಮಿಸಿ, ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
ಶಿವಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಸರ್ಕಾರದ ಪ್ರತಿನಿಧಿಗಳು, ಜನಪ್ರತಿನಿಧಿಗಳ ಮೇಲೆ ಕಲ್ಲು ತೂರಿದವರ ವಿರುದ್ಧದ ಕೇಸ್ ವಾಪಸ್ ಪಡೆದಿರುವುದು ತುಷ್ಟೀಕರಣದ ಪರಮಾವಧಿಯಾಗಿದೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ಪ್ರಿಯಾಂಕ್ ರ್ಖಗೆ, ಶಾಸಕಿ ಕನೀಜ್ ಾತಿಮಾ, ಆಳಂದ ಶಾಸಕ ಬಿ.ಆರ್.ಪಾಟೀಲ್ ಶಿಾರಸ್ಸಿನಂತೆ 2022ರಲ್ಲಿ ದಂಗೆ ನಡೆಸಿದವರ ಕೇಸ್ ವಾಪಸ್ ಪಡೆದಿದ್ದು ಖಂಡಿಸಿದರು.
ಸಿದ್ದರಾಮಯ್ಯ ಸರ್ಕಾರ ಗುಂಡಾಗಳಿಗೆ ಬೆಂಬಲ ನೀಡಿ, ಸಮಾಜದಲ್ಲಿ ಅಶಾಂತಿ ಮೂಡಿಸುವ ಶಕ್ತಿಗಳ ರಕ್ಷಣೆ ನಿಂತ್ತಿದೆ. ಕೂಡಲೇ ಕೇಸ್ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೈಕೋರ್ಟ್ ಮೆಟ್ಟಿಲೇರಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಹರ್ಷ ಗುತ್ತೇದಾರ ಮಾತನಾಡಿ, ಷಡ್ಯಂತ್ರ ರೂಪಿಸಿ ಶಿವಲಿಂಗ ಪೂಜೆ ವೇಳೆ ಕಲ್ಲು ತೂರಿದ ಗಲಭೆಕೋರರ ಕೇಸ್ ವಾಪಸ್ ಪಡೆದಿದ್ದು, ಭವಿಷ್ಯದಲ್ಲಿ ಗಲಭೆ ಸೃಷ್ಟಿಗೆ ಪ್ರಚೋದನೆ ನೀಡಿದಂತಾಗಿದೆ. ಸರ್ಕಾರ ಮುಸ್ಲಿಮರಿಗೆ ಖುಷಿಪಡಿಸಲು ಹೊರಟಿದ್ದು, ಆಪತ್ತಿಗೆ ಕಾರಣವಾಗಲಿದೆ ಎಂದು ಆರೋಪಿಸಿದರು.
ಪಾಳಾ ಶ್ರೀ, ಮಿಣಜಿಗಿ ಶ್ರೀ,ಓಂಕಾರ್ ಶ್ರೀ,ಬೆಣ್ಣೂರ ಶ್ರೀ, ಪ್ರಮುಖರಾದ ಭಾಗಿರಥಿ ಗುನ್ನಾಪುರ, ಎಂ.ಎಸ್.ಪಾಟೀಲ್ ನರಿಬೋಳ, ಶಿವಸೇನೆ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ಯುವ ಟಕದ ಅಧ್ಯಕ್ಷ ರಾಕೇಶ ಜಮಾದಾರ, ಮಲ್ಕಣ್ಣ ಹಿರೇಪೂಜಾರಿ, ಮಡಿವಾಳಪ್ಪ ಅಮರಾವತಿ, ಮಲ್ಲನಗೌಡ ಮಾಲಿ ಪಾಟೀಲ್, ರೋಹಿತ್ ಪಿಸ್ಕೆ, ಚೆನ್ನಾರಡ್ಡಿಗೌಡ, ಶಿವರಾಜ್ ಬಾಳಿ, ಸುರೇಶ ತಳವಾರ, ಮಹೇಶ ಗೌಳಿ, ಪ್ರದಿಪ ಹೇರೂರ, ಭಗವಂತ ನೆಲೋಗಿ, ಭಾಗ್ಯವಂತ ಯಡ್ರಾಮಿ ಇತರರಿದ್ದರು.
ಪ್ರತಿಕೃತಿ ದಹನಕ್ಕೆ ಪೊಲೀಸರು ಅಡ್ಡಿ
ಶಿವಲಿಂಗ ಶುದ್ಧೀಕರಣದ ವೇಳೆ ಗಲಭೆಕೋರರ ವಿರುದ್ಧ ದಾಖಲಾದ ಕೇಸ್ ವಾಪಸ್ ಪಡೆದಿರುವುದನ್ನು ಖಂಡಿಸಿ ಶಿವಸೇನೆ ಪಕ್ಷ ಹೋರಾಟಕ್ಕೆ ಸಜ್ಜಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹನಕ್ಕೆ ಮುಂದಾದಾಗ ಪೊಲೀಸರು ಅದನ್ನು ಕಸಿದು, ವಿಲಗೊಳಿಸಿ, ಪ್ರತಿಭಟನೆಗೆ ಅವಕಾಶ ನೀಡಿದರು. ಸಾಂವಿಧಾನಿಕ ಹುದ್ದೆಯಲ್ಲಿರುವವರ ಪೋಟೋಗಳನ್ನು ಸುಡಲು ಬಿಡುವುದಿಲ್ಲ ಎಂಬುವವರು, ಡಿಸಿ, ಎಸ್ಪಿಯವರನ್ನು ಓಡಾಡಿಸಿ ಹೊಡೆದಿದ್ದಾರೆ. ಅವರದ್ದು ಸಾಂವಿಧಾನಿಕ ಹುದ್ದೆ ಅಲ್ವಾ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಿಲ್ಲ ಎಂದು ಕೋಪಗೊಂಡವರಿಗೆ ಸಮಾಧಾನ ಪಡಿಸಲು ಹಾಗೂ ಮುಸ್ಲಿಂ ಓಲೈಕೆಗಾಗಿ ಮುಸ್ಲಿಮರ ವಿರುದ್ಧದ ಕೇಸ್ ವಾಪಸ್ಗೆ ನಿರ್ಧರಿಸಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಕಾನೂನು ಹೋರಾಟ ಮಾಡಲಾಗುವುದು.
— ಹರ್ಷಾನಂದ ಗುತ್ತೇದಾರ ಬಿಜೆಪಿ ಮುಖಂಡ