kurub community sparks protest in kalaburagi
- ಕಲಬುರಗಿಯಲ್ಲಿ ಕುರುಬ ಸಮಾಜದಿಂದ ಬೃಹತ್ ಪ್ರತಿಭಟನೆ
- ನಿರ್ಧಾರ ವಾಪಸ್ಗೆ ಆಗ್ರಹ
ಕಲಬುರಗಿ: ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆಯುತ್ತಿರುವ ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರ ಖಂಡಿಸಿ ನಗರದಲ್ಲಿ ಪ್ರದೇಶ ಕುರುಬರ ಸಂದ ಜಿಲ್ಲಾ ಟಕ ಹಾಗೂ ಅಭಿಮಾನಿಗಳಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಸೇರಿದ ನೂರಾರು ಕುರುಬ ಸಮಾಜದವರು, ಸಿದ್ದರಾಮಯ್ಯ ಅಭಿಮಾನಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುಜ ರ್ಖಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ ಅವರ ಭಾವಚಿತ್ರಗಳಿಗೆ ಮಸಿ ಬಳಿದು ಘೋಷಣೆ ಕೂಗಿ, ಕಿಡಿ ಕಾರಿದರು.
ಅನ್ನರಾಮಯ್ಯಗೆ ಜಯವಾಗಲಿ, ಭಾಗ್ಯಗಳ ಸರದಾರನಿಗೆ ಜಯವಾಗಲಿ, ನ್ಯಾಯ ಬೇಕು, ಕಾಂಗ್ರೆಸ್ ಹೈಕಮಾಂಡ್ಗೆ ಧಿಕ್ಕಾರ, ಸಿದ್ದರಮಯ್ಯ ಸಿಎಂ ಆಗಿ ಮುಂದುವರಿಯಲಿ ಎಂದು ಘೋಷಣೆ ಕೂಗಿ, ಒತ್ತಾಯ ಮಾಡಿದರು.
ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರಿನ ಮುಖ್ಯ ರಸ್ತೆಯಲ್ಲಿ ಕೆಲ ಹೊತ್ತು ಸಂಚಾರ ತಡೆದು, ಆಕ್ರೋಶ ವ್ಯಕ್ತಪಡಿಸಿದರು.
ಸಂದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಮಾತನಾಡಿ, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲ ವರ್ಗದವನ್ನು ಒಟ್ಟುಗೂಡಿಸಿ, ಎರಡು ಬಾರಿ ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಅಧಿಕಾರಕ್ಕೆ ತಂದಿದ್ದಾರೆ. 2013&18ರವರೆಗೆ, 2023ರಿಂದ ಇದುವರೆಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದಾರೆ. 2023ರ ಚುನಾವಣೆಯಲ್ಲಿ ಐದು ಸಿಎಂ ಸಿದ್ದರಾಮಯ್ಯ ಎಂದು ತಿಳಿದು ಅಹಿಂದ ವರ್ಗ ಕಾಂಗ್ರೆಸ್ಗೆ ಬೆಂಬಲ ನೀಡಿದ್ದರಿಂದ 136 ಸ್ಥಾನ ಬಂದಿವೆ. ಆದರೆ ಸಕಾರಣವಿಲ್ಲದೆ ರಾಜೀನಾಮೆ ಪಡೆಯುತ್ತಿರುವುದು ಸಲ್ಲದು ಎಂದು ಕಿಡಿ ಕಾರಿದರು.
ವಿನಾಕಾರಣ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬಾರದು. ಅವಧಿ ಪೂರ್ಣಗೊಳ್ಳುವವರೆಗೆ ಅವರನ್ನೇ ಮುಂದುವರಿಸಬೇಕು. ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಂದ ರವಿಗೊಂಡ ಕಟ್ಟಿಮನಿ, ಪರಮೇಶ್ವರ ಆಲಗೂಡು, ನಾಗೀಂದ್ರಪ್ಪ ಪೂಜಾರಿ, ರವಿ ಪೂಜಾರಿ, ಬಸವರಾಜ ಹೊಸಳ್ಳಿ, ಶರಣು ಬೇಲೂರು, ಲಕ್ಷ$್ಮಣ ನಂದಿಕೂರು, ಬಾಲಾಜಿ ಘೋಡ್ಕೆ, ಗೋಪಾಲ್ ಎಂ.ಪಿ. ಇತರರಿದ್ದರು.
ಸಿಎಂ ಸಿದ್ದರಾಮಯ್ಯ ಅವರನ್ನು ದಿಢೀರ್ ಎಂದು ಕೆಳಗಿಳಿಸಿ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲಾಗುತ್ತಿದೆ. ರಾಜ್ಯದ ಶಾಸಕರು ಯಾರ ಪರ ಇದ್ದಾರೆ ಎಂಬುದು ತಿಳಿದು, ಮುಂದಡಿ ಇಡಲಿ. ನಾಲ್ವರು ನಿರ್ಧರಿಸಿ ಒತ್ತಡ ಹೇರಿ ರಾಜೀನಾಮೆ ಪಡೆಯುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಸಿದ್ದರಾಮಯ್ಯ ಅವರ ಮುಖ ನೋಡಿ ಇಡೀ ಅಹಿಂದ ವರ್ಗ ಕಾಂಗ್ರೆಸ್ಗೆ ಬೆಂಬಲಿಸಿದ್ದು, ಅವರ ರಾಜೀನಾಮೆಯಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕುರುಬ ಸಮಾಜ ಸೇರಿ ಇಡೀ ಅಹಿಂದ ವರ್ಗ ತಕ್ಕ ಪಾಠ ಕಲಿಸಲಿದೆ ಎಂದು ಪ್ರತಿಭಟನಾಕಾರರು ಸವಾಲು ಹಾಕಿದರು.
ಸಿದ್ದರಾಮಯ್ಯ ಎಲ್ಲರನ್ನು ಒಳಗೊಂಡ ಭ್ರಷ್ಟಾಚಾರ ರಹಿತ, ಸ್ವಾರ್ಥ ರಹಿತ, ರಾಜಕಾರಣ ಮಾಡಿದ್ದಾರೆ. ಅವರ ಮೇಲೆ ಭ್ರಷ್ಟಾಚಾರ, ಅನ್ಯಾಯ, ಮೋಸ, ದೌರ್ಜನ್ಯದ ಆರೋಪಗಳಿಲ್ಲ. ಸರ್ವರ ಪರ ಕೆಲಸ ಮಾಡಿದ್ದಾರೆ. ಆದರೆ ಇಂತಹ ನಾಯಕನಿಂದ ರಾಜೀನಾಮೆ ಪಡೆದು, ಭ್ರಷ್ಟಾಚಾರ ಕೇಸ್ನಲ್ಲಿ ತಿಹಾರ್ ಜೈಲಿಗೆ ಹೋಗಿ ಬಂದವರಿಗೆ ಮುಖ್ಯಸ್ಥಾನ ನೀಡುತ್ತಿರುವುದು ಯಾವ ಪುರುಷಾರ್ಥಕ್ಕೆ. ಹೈ ಕಮಾಂಡ್ ಈ ನಿರ್ಧಾರವನ್ನು ಹಿಂಪಡೆಯಬೇಕು.
— ಗುರುನಾಥ ಪೂಜಾರಿ, ಜಿಲ್ಲಾಧ್ಯಕ್ಷ ಪ್ರದೇಶ ಕುರುಬರ ಸಂಘ