ಕಲಬುರಗಿಯ ಬಸವೇಶ್ವರ ಸಹಕಾರಿ ಬ್ಯಾಂಕ್​ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ ಜೇವರ್ಗಿ, ಉಪಾಧ್ಯಕ್ಷ ಪ್ರಶಾಂತ ಗುಡ್ಡಾ ಅವರನ್ನು ಆಡಳಿತ ಮಂಡಳಿ ಹಾಗೂ ಚುನಾವಣಾಧಿಕಾರಿಗಳು ಸನ್ಮಾನಿಸಿದರು. 
ಕಲಬುರಗಿ

ಬಸವೇಶ್ವರ ಬ್ಯಾಂಕ್​ಗೆ ಸತೀಶ ಜೇವರ್ಗಿ ಅಧ್ಯಕ್ಷ

ಕಲಬುರಗಿ: ನಗರದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ್​ ಅಧ್ಯಕ್ಷರಾಗಿ ಸತೀಶಕುಮಾರ ಜೇವರ್ಗಿ ಹಾಗೂ ಉಪಾಧ್ಯಕ್ಷರಾಗಿ ಪ್ರಶಾಂತ ಗುಡ್ಡಾ ಸೋಮವಾರ ಅವಿರೋಧ ಆಯ್ಕೆಯಾದರು. ಇದರಿಂದ ಬ್ಯಾಂಕ್​ನ ಆಡಳಿತದಲ್ಲಿ ಯುವ ಹವಾ ಶುರುವಾದಂತಾಗಿದೆ. ಅಧ್ಯಕ್ಷರಾಗಿದ್ದ ಎಂ.ಡಿ.ಪಾಟೀಲ್​, ಉಪಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್​ ಅವರು ಜನವರಿ 2025ರಲ್ಲಿ ಜರುಗಿದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಆದರೆ ಆರ್​ಬಿಐ ನಿಯಮದಂತೆ ಕೂಲಿಂಗ್​ ಅವಧಿ ಆರಂಭಗೊಂಡಿದ್ದರಿಂದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹತ್ತು ವರ್ಷ ನಿರ್ದೇಶಕರಾಗಿದ್ದವರು ಸಹ ಸ್ಥಾನ ತ್ಯಜಿಸಿದ್ದರು. ಹೀಗಾಗಿ ನೂತನ ಅಧ್ಯಕ್ಷರ ಆಯ್ಕೆಗಾಗಿ ಸೋಮವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೇವರ್ಗಿ ಹಾಗೂ ಉಪಾಧ್ಯಕ್ಷ ಸ್ಥಾನ ಗುಡ್ಡಾ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಹೀಗಾಗಿ ಅವರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಪ್ರಕಟಿಸಿದರು. ಸತೀಶ ಅವಿರೋಧವಾಗಿ ಆಯ್ಕೆಯಾಗಲು ಎಂ.ಡಿ.ಪಾಟೀಲ್​, ಆರ್​.ಜಿ.ಶೆಟಗಾರ, ಸಿದ್ರಾಮಪ್ಪ ಪಾಟೀಲ್​, ಧರ್ಮಪ್ರಕಾಶ ಪಾಟೀಲ್​, ಸಿದ್ದು ದೇವರಮನಿ ಮೊದಲಾದವರು ಪ್ಲಾನ್​ ಮಾಡಿದ್ದರು. ಆಯ್ಕೆ ಘೋಷಣೆಯಾತ್ತಲೇ ಸಂಭ್ರಮಾಚರಣೆ ಮಾಡಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಗೌರವಿಸಿ ಅಭಿನಂದಿಸಲಾಯಿತು. ಬ್ಯಾಂಕ್​ನ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರು ಇದ್ದರು