kalaburagi zilla ceo trasnfer 
ಕಲಬುರಗಿ

ಅಭಿವೃದ್ಧಿಗೆ ಕಾರ್ಯನಿರ್ವಹಿಸಿದ ತೃಪ್ತಿ: ಕಲಬುರಗಿ ಜಿಪಂ ಸಿಇಒ

ರಮೇಶ ಮೇಳಕುಂದಾ

ಪ್ರಮುಖ ಮುಖ್ಯಾಂಶಗಳು

  • ಭಂವರ್​ಸಿಂಗ್​ ಮೀನಾ ಹೇಳಿಕೆ
  • ಜಿಪಂ ಸಿಇಓಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಕಲಬುರಗಿ: ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆ ಸಹಯೋಗದೊಂದಿಗೆ ತಂಡದ ರೂಪದಲ್ಲಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ ಎಂದು ಜಿಪಂ ನಿರ್ಗಮಿತ ಸಿಇಓ ಭಂವರ್​ ಸಿಂಗ್​ ಮೀನಾ ಹೇಳಿದರು.
ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಚಿಕ್ಕಮಂಗಳೂರು ಜಿಲ್ಲಾಧಿಕಾರಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ದೊಡ್ಡ ಜಿಲ್ಲೆ. ಇಲ್ಲಿ ಕಾರ್ಯನಿರ್ವಹಿಸಿದರೆ ಬೇರೆಡೆ ಸರಳವಾಗಿ ಕಾರ್ಯನಿರ್ವಹಿಸಬಹುದೆಂಬ ಮಾತಿದೆ. ಅಂತಹ ಒಂದು ಅತ್ಮವಿಶ್ವಾಸ ಇಲ್ಲಿ ನಮಗೆ ಸಿಕ್ಕಿದ್ದು, ಮುಂದಿನ ಸೇವೆಗೆ ನೆರವಾಗಲಿದೆ ಎಂದರು.
ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ತಂಡದ ರೂಪದಲ್ಲಿ ಕಾರ್ಯನಿರ್ವಸಿ, ಪ್ರತಿ ಕಾರ್ಯಕ್ರಮ, ಯೋಜನೆ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಅದು ನಮಗೆ ಸಂತಸ ತಂದಿದೆ. ಇಂತಹ ಸಾಂಘಿತ ಪ್ರಯತ್ನ ನಡೆಯಬೇಕು. ಪಂಚಾಯಿತಿಯ ಎಲ್ಲ ಅಧಿಕಾರಿಗಳು ಜನರ ಸಮಸ್ಯೆ ಆಲಿಸಿದ್ರೆ ಅರ್ಧ ಕೆಲಸ ಆದಂತೆ ಎಂಬುದನ್ನು ಮರೆಯದಿರಿ ಎಂದರು.
ಉತ್ತಮ ಕಾರ್ಯನಿರ್ವಹಿಸದ ಕೆಲ ಪಿಡಿಓಗಳ ವಾರ್ಷಿಕ ವೇತನ ಬಡ್ತಿ ತಡೆ ಹಿಡಿದಿದ್ದೆ. ತದನಂತರ ಅವರುಗಳು ತಮ್ಮ ಕೆಲಸದಲ್ಲಿ ಸುಧಾರಣೆ ಕಂಡುಕೊಂಡಿದ್ದರಿಂದ ವರ್ಗಾವಣೆ ಮುಂಚೆ ಅವರ ವೇತನ ಬಡ್ತಿ ಕಡತಕ್ಕೆ ಸಹಿ ಹಾಕಿರುವೆ ಎಂದು ತಿಳಿಸಿದರು.
ನೂತನ ಜಿಪಂ ಸಿಇಓ ರಾಹುಲ ಸಂಕನೂರ್​ ಅವರನ್ನು ಸನ್ಮಾನಿಸಿ, ಸ್ವಾಗತಿಸಲಾಯಿತು. ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​, ನಗರ ಪೊಲೀಸ್​ ಆಯುಕ್ತ ಡಾ.ಎಸ್​.ಡಿ ಶರಣಪ್ಪ, ಎಸ್​.ಪಿ. ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಪಂ ಉಪ ಕಾರ್ಯದರ್ಶಿ ಲಕ್ಷ$್ಮಣ ಶೃಂಗೇರಿ ಇತರರಿದ್ದರು.
ಈ ಮಣ್ಣಿನ ವಿಶೇಷ ಅಂದ್ರೆ ಜಿಲ್ಲೆಗೆ ಬಂದ ಅಧಿಕಾರಿಗಳಿಗೆ ಒಳ್ಳೆಯ ಕೆಲಸ ಮಾಡಲಿಕ್ಕೆ ಅವಕಾಶಗಳನ್ನು ಕೊಡುತ್ತೆ. ಅವಕಾಶಗಳನ್ನು ಬಳಸಿ ಕೆಲಸ ಮಾಡ್ತಾರೋ ಅವ್ರು ಜನರ ನೆನಪಲ್ಲಿ ಉಳಿಯುತ್ತಾರೆ. ಅಂತಹ ಅಧಿಕಾರಿಗಳ ಪೈಕಿ ಭಂವರ್​ ಸಿಂಗ್​ ಮೀನಾ ಅವರು ಎಂದರೆ ತಪ್ಪಾಗಲಿಕ್ಕಿಲ್ಲ.
> -ಡಾ.ಶರಣಪ್ಪ ಎಸ್​.ಡಿ.
ಆಯುಕ್ತ, ನಗರ ಪೋಲೀಸ್​
ಜಿಪಂ ವ್ಯಾಪ್ತಿಯ ಎಲ್ಲ ಇಲಾಖೆಗಳಲ್ಲಿ ಕೆಲಸಗಳನ್ನು ಕಠಿಣ ಪರಿಶ್ರಮ, ಶ್ರದ್ಧೆಯಿಂದ ಮಾಡಿದ್ದಾರೆ. ಆದ್ದರಿಂದ ಭಂವರ್​ ಸಿಂಗ್​ ಮೀನಾ ಜನಮೆಚ್ಚುಗೆ ಪಡೆದಿದ್ದಾರೆ. ವೈಯಕ್ತಿಕವಾಗಿ ಆತ್ಮೀಯರು. ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಹೋಗ್ತಿದ್ದಾರೆ. ಅವರ ಜನಪರ ಸೇವೆ ಮುಂದುವರಿಯಲಿ.
> -ಇಕ್ರಮ್​ ಶರೀಫ್​, ಜಿಲ್ಲಾಧಿಕಾರಿ