ಕಲಬುರಗಿ ಮಕ್ತಂಪುರ ಶ್ರೀ ಬಸವಣ್ಣ ದೇವಸ್ಥಾನದಲ್ಲಿ ಸೋಮವಾರ ನಡೆದ ಜಗದ್ಗುರು ರೇವಣಸಿದ್ಧೇಶ್ವರ ಮಾಲಾಧಾರಿಗಳ ರಜತ ಮಹೋತ್ಸವ ಸಮಾರಂಭಕ್ಕೆ ಹೊನ್ನಕಿರಣಗಿ ಚಂದ್ರಗುAಡ ಶಿವಾಚಾರ್ಯರು ಸೋಮವಾರ ಚಾಲನೆ ನೀಡಿದರು. ಶ್ರೀ ರಂಭಾಪುರಿ ಜಗದ್ಗುರುಗಳು, ಡಾ.ರೇವಣಸಿz್ದೆÃಶ್ವರ ಶಿವಾಚಾರ್ಯರು, ಸ್ಟೇಷನ್ ಬಬಲಾದ ಮಠದ ಶಿವಮೂರ್ತಿ ಶಿವಾಚಾರ್ಯರು, ಗದ್ದುಗೆಮಠದ ಚರಲಿಂಗ ಸ್ವಾಮಿಗಳು, ಶಾಂತಕುಮಾರ ಬಿಲಗುಂದಿ, ಶಿವಶರಣಪ್ಪ ಸಿರಿ ಇತರರಿದ್ದರು.
- ಶ್ರೀ ರಂಭಾಪುರಿ ಜಗದ್ಗುರುಗಳ ಅಭಿಪ್ರಾಯ
- ರೇವಣಸಿz್ದÉÃಶ್ವರ ಮಾಲಾಧಾರಿಗಳ ರಜತ ಮಹೋತ್ಸವ
ಕಲಬುರಗಿ: ಜೀವನದಲ್ಲಿ ನಂಬಿಕೆ, ವಿಶ್ವಾಸ ಕಳೆದು ಹೋದರೆ ಬಾಳುವುದು ಕಷ್ಟ. ಬುದ್ಧಿಶಕ್ತಿ ಬೆಳೆದಂತೆ ಮನುಷ್ಯನ ಭಾವನೆ ಬೆಳೆಯಬೇಕಾಗಿದೆ. ಸುಖ ಸಮೃದ್ಧಿ ನೆಲೆಗೊಳ್ಳಲು ಸಂಸ್ಕಾರ ತುಂಬಾಮುಖ್ಯ. ಸತ್ಯ, ಶುದ್ಧ ಸಂಸ್ಕಾರ ಬಲದಿಂದ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯವಾಗುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಮಕ್ತಂಪುರ ಶ್ರೀ ಬಸವಣ್ಣ ದೇವಸ್ಥಾನದಲ್ಲಿ ಸೋಮವಾರ ನಡೆದ ಜಗದ್ಗುರು ರೇವಣಸಿದ್ಧೇಶ್ವರ ಮಾಲಾಧಾರಿಗಳ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಂದಿನ ನಾಗರಿಕ ಸಮಾಜದಲ್ಲಿ ಹಲವಾರು ಅನಾಗರಿಕ ಘಟನೆಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪ್ರತಿಯೊಬ್ಬರೂ ತಮ್ಮ ಏಳ್ಗೆಯನ್ನಷ್ಟೇ ಬಯಸಿ ಬಾಳುತ್ತಾರೆ. ಆದರೆ ದೇಶ, ಧರ್ಮ ಮತ್ತು ಅಭಿವೃದ್ಧಿ ಕಾರ್ಯಗಳತ್ತ ಗಮನ ನೀಡಬೇಕಿದೆ. ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಅವಶ್ಯಕ. ಸದ್ಗುಣವಂತರ ಸಂಗಮದಲ್ಲಿ ಬಾಳಿದಾಗ ಬದುಕಿನ ಮೌಲ್ಯ ಹೆಚ್ಚುತ್ತದೆ. ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಮಾಡಿದೆ ಎಂದರು.
ಜಗದ್ಗುರು ರೇಣುಕಾಚಾರ್ಯರ ಮತ್ತು ಜಗದ್ಗುರು ರೇವಣಸಿದ್ಧೇಶ್ವರರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾöçಂತಿ ಎಲ್ಲ ಕ್ರಾಂತಿಗಳಿಗೆ ಮೂಲ ಸೆಲೆಯಾಗಿದೆ ಎಂದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಹೊನ್ನಕಿರಣಗಿ ಚಂದ್ರಗುAಡ ಶಿವಾಚಾರ್ಯರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿದ್ದು ಪಾರಮಾರ್ಥಿಕ ಜ್ಞಾನ ಸಂಪಾದಿಸಿಕೊAಡು ಬಾಳಬೇಕಾಗಿದೆ. ಪರಿಶ್ರಮ ಮತ್ತು ಸಾಧನೆಯಿಂದ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ಜಗದ್ಗುರು ರೇವಣಸಿದ್ಧೇಶ್ವರ ಮಾಲಾಧಾರಿಗಳು ಗುರು ಪೀಠ ಪರಂಪರೆಯಲ್ಲಿ ಅಪಾರ ಶ್ರದ್ಧೆ ಭಕ್ತಿ ಹೊಂದಿದ್ದಾರೆ ಎಂದರು.
ಸ್ಟೇಷನ್ ಬಬಲಾದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶಿವಮೂರ್ತಿ ಶಿವಾಚಾರ್ಯರು ಮತ್ತು ಗದ್ದುಗೆಮಠದ ಚರಲಿಂಗ ಸ್ವಾಮಿಗಳು ಗುರು ಹಿರಿಮೆ ಕುರಿತು ಮಾತನಾಡಿದರು. ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಯೋಗಿ ಸಾಧನೆಗಾಗಿ, ಭೋಗಿ ಇಂದ್ರಿಯ ಸುಖಕ್ಕಾಗಿ, ರೋಗಿ ವೇದನೆಯಿಂದ ಯಾವಾಗಲೂ ಎಚ್ಚರವಾಗಿರುತ್ತಾರೆ. ಜಗದ್ಗುರು ರೇವಣಸಿದ್ಧೇಶ್ವರ ಮಾಲಾಧಾರಿಗಳು ಯಾವಾಗಲೂ ಗುರು ನಾಮ ಸ್ಮರಣೆಯಲ್ಲಿದ್ದು ಗುರು ಕಾರುಣ್ಯ ಪಡೆದ ಭಾಗ್ಯಶಾಲಿಗಳು ಎಂದರು.
ಬಸವಣ್ಣ ಸೇವಾ ಸಮಿತಿ ಅಧ್ಯಕ್ಷ ಶಾಂತಕುಮಾರ ಬಲಗುಂದಿ, ನಾರಾಯಣ ಶಿಂಗಾಡೆ, ಶಿವಶರಣಪ್ಪ ಸಿರಿ, ಧರ್ಮಪ್ರಕಾಶ ಪಾಟೀಲ, ಡಾ.ಜಗನ್ನಾಥ ಬಿಜಾಪುರ, ಶಿವಶಂಕರ ಹೊಸಗೌಡ, ಸಂಗಣ್ಣಾ ಧೂಳಗುಂಡಿ, ಸಿದ್ರಾಮಪ್ಪ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು. ಮಾಲಾಧಾರಿಗಳ ಸೇವಾ ಸಮಿತಿ ಅಧ್ಯಕ್ಷ ರೇಣುಕಾನಂದ ಚೌಧರಿ, ಉಪಾಧ್ಯಕ್ಷ ದೇವೀಂದ್ರಪ್ಪ ಹಾಲಪ್ಪಗೋಳ ಇತರರಿದ್ದರು.
ಪಾಳಾ ಹಿರೇಮಠದ ಗುರುಮೂರ್ತಿ ಶಿವಾಚಾರ್ಯರು ನಿರೂಪಣೆ ಮಾಡಿದರು. ಕಾರ್ಯದರ್ಶಿ ವಿನೋದ ದುದಗಿ ಸ್ವಾಗತಿಸಿದರು. ಸೈದಪ್ಪ ಸಪ್ಪನಗೋಳ ಸಂಗಡಿಗರಿAದ ಸಂಗೀತ ಜರುಗಿತು.
"
ಕಲಬುರಗಿ ಮುಕ್ತಂಪುರದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಾಲಾಧಾರಿಗಳು ನಿರಂತರ ಗುರುನಾಮ ಸ್ಮರಣೆ, ಸಂಕೀರ್ತನೆಯಲ್ಲಿ ತೊಡಗಿಸಿಕೊಂಡಿರುವುದು ಅವರ ಧರ್ಮನಿಷ್ಠೆಗೆ ಕಾರಣ. ೨೫ ವರ್ಷ ತುಂಬಿದ ಸಂದರ್ಭದಲ್ಲಿ ರಜತ ಮಹೋತ್ಸವ ಸಮಾರಂಭ ಹಮ್ಮಿಕೊಂಡಿರುವುದು ಸಂತಸ ತಂದಿದೆ.
ಶ್ರೀ ರಂಭಾಪುರಿ ಜಗದ್ಗುರುಗಳು,ಬಾಳೆಹೊನ್ನೂರು.