ಶಹಾಬಾದ್​ನಲ್ಲಿ ವಿಶ್ವ ಹಿಂದೂ ಪರಿಷತ್​ನಿಂದ ಆಯೋಜಿಸಿದ್ದ ದಸರಾ ಉತ್ಸವದಲ್ಲಿ ವಾಗ್ಮಿ ಅಮೋ ಸ್ವಾಮಿ ಹಿರೇಮಠ ಮಾತನಾಡಿದರು. ರಾಮು ಕುಸಾಳೆ, ದಿಲೀಪ್​ ಯಲಶೆಟ್ಟಿ, ಭೀಮಾಶಂಕರ ಕುಂಬಾರ ಇತರರಿದ್ದರು. 
ಕಲಬುರಗಿ

ದಾಳಿಗಳನ್ನು ಮೆಟ್ಟಿ ಗಟ್ಟಿಯಾಗಿ ನಿಂತ ಸನಾತನ ಧರ್ಮ

ಶಹಾಬಾದ್​: ವಿವಿಧ ದೇಶ, ವಿವಿಧ ಧರ್ಮಿಯರು ಭಾರತದ ಮೇಲೆ ನಿರಂತರ ದಾಳಿ ಮಾಡಿದರೂ ಸನಾತನ ಧರ್ಮ ಮಾತ್ರ ಭಾರತದಲ್ಲಿ ಗಟ್ಟಿಯಾಗಿ ನಿಂತಿದೆ. ಇದೇ ಧರ್ಮದ ಶಕ್ತಿ ಎಂದು ವಾಗ್ಮಿ ಅಮೋ ಸ್ವಾಮಿ ಹಿರೇಮಠ ಹೇಳಿದರು.

ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್​ನಿಂದ ಬುಧವಾರ ಸಂಜೆ ಹಮ್ಮಿಕೊಂಡಿದ್ದ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಬೌದ್ದಿಕರಾಗಿ ಮಾತನಾಡಿ, ನಮ್ಮ ದೇಶ, ಸಂಸತಿ ರಸಲು ಪುರುಷರಷ್ಟೆ ಮಹಿಳೆಯರು ಹೋರಾಡಿದ್ದಾರೆ. ದೇಶದ ರಕ್ಷಣೆಗೆ ಮಹಿಳೆಯರು ವೀರಾವೇಶದಿಂದ ಹೋರಾಟ ಮಾಡಿದ್ದಾರೆ. ಇಂತಹ ವೀರ&ಶೂರರ ಇತಿಹಾಸವನ್ನು ದಮನ ಮಾಡಿ, ಆಂಗ್ಲ ಅಧಿಕಾರಿ ಮೆಕಾಲೆ ಪ್ರೇರಿತ ಶಿಕ್ಷಣ ವ್ಯವಸ್ಥೆಯನ್ನು ನಮಗೆ ಕಲಿಸುವ ಮೂಲಕ ನಮ್ಮ ಇತಿಹಾಸ ತಿರುಚಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂವನ್ನು ಹೊರಗೆ ನಿಂತು ನೋಡುವುದು ಕಣ್ಣಿಲ್ಲದವರು ಆನೆಯನ್ನು ನೋಡಿದಂತಾಗುತ್ತದೆ. ಒಳಗೆ ಬಂದು ಸಂದ ಚಟುವಟಿಕೆ, ದೇಶಪ್ರೇಮ ಕಲಿಯಬೇಕು. ಇಂದು ನಾವು ದೇಶಪ್ರೇಮವನ್ನು ಕೇವಲ ಮೊಬೈಲ್​ ಸ್ಟೇಟಸ್​, ಬಾಯಲ್ಲಿ ಹೇಳುತ್ತಿದ್ದು, ಅದನ್ನು ಕೃತಿಯಲ್ಲಿ ತರಬೇಕು. ಗಣೇಶಪುರ (ಶಹಾಬಾದ್​)ದಲ್ಲಿ ಗಣೇಶ ವಿಗ್ರಹ ಬೆಳೆಯುತ್ತಿದ್ದಂತೆ ನಾವು, ನಮ್ಮ ಸಂಸತಿಯನ್ನು ಬೆಳೆಸೋಣ ಎಂದು ಕರೆ ನೀಡಿದರು.

ವಿಹಿಂಪ ತಾಲೂಕು ಅಧ್ಯಕ್ಷ ರಾಮು ಕುಸಾಳೆ, ಜಗದಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ದಿಲೀಪ ಯಲಶೆಟ್ಟಿ, ಪ್ರಮುಖರಾದ ದೇವು ಪಾಟೀಲ್​, ಸಚಿನ್​ ಹಂಚಾಟೆ, ಬಸವರಾಜ ಸಾತಿಹಾಳ, ಶರಣು ವಸ, ಶಿವುಕುಮಾರ ಕೊಳ್ಳಿ, ಭೀಮರಾವ ಸಾಳೊಂಕೆ, ಚಂದ್ರಕಾಂತ ಗೊಬ್ಬುರಕರ, ಸುಭಾಷ ಜಾಪೂರ, ಗಜಾನನ ಕುಲಕರ್ಣಿ, ಡಾ.ಅಶೋಕ ಜಿಂಗಾಡೆ, ಅನೀಲ ಹೀಬಾರೆ, ಅರುಣ ಪಟ್ಟಣಕರ, ಕನಕಪ್ಪ ದಂಡಗುಲಕರ್​ ಇತರರಿದ್ದರು.