ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ಶಕ್ತಿ ಸಂಭ್ರಮದಲ್ಲಿ ಕಲಬುರಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯವು ರನ್ನರ್ಅಪ್ ಪ್ರಶಸ್ತಿ ಪಡೆದು ಸಂಭ್ರಮಿಸಿತು. ವೀರಭದ್ರಯ್ಯ ಸ್ಥಾವರಮಠ, ಕೃಪಾಸಾಗರ ಗೊಬ್ಬುರ್, ಬಾಬುರಾವ ಮಡಿವಾಳ, ಪ್ರಭಾವತಿ ಎಚ್., ಪ್ರಶಾಂತ ಗೋಲ್ಡಸ್ಮಿತ್, ಪೂಜಾ ಮಡಿವಾಳಪ್ಪ ಇತರರಿದ್ದರು.
- ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ
- ವಿದ್ಯಾರ್ಥಿನಿಯರ ಸಾಧನೆಗೆ ಅಪ್ಪ ಶ್ಲಾನೆ
ಕಲಬುರಗಿ: ಮುಧೋಳದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬಿ.ವಿ.ವಿ. ಸಂದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ 20ನೇ ಶಕ್ತಿ ಸಂಭ್ರಮದಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯ ರನ್ನರ್ಅಪ್ ಪ್ರಶಸ್ತಿ$ಪಡೆದು ಸಾಧನೆ ಮೆರೆದಿದೆ.
ಸಂಗೀತ ಸ್ಪರ್ಧೆ: ವೆಸ್ಟರ್ನ್ ಗ್ರೂಫ್ ಸಾಂಗ್, ಭಾವಗೀತೆ, ವೆಸ್ಟರ್ನ್ ಇನ್ಸ್ಟ್ರುಮೆಂಟಲ್ ಸೋಲೊದಲ್ಲಿ ಪ್ರಥಮ, ನಾನ್ ಕ್ಲಾಸಿಕಲ್ ವೋಕಲ್ ಸೋಲೊದಲ್ಲಿ ತೃತೀಯ, ಇಂಡಿಯನ್ ಗ್ರೂಫ್ ಸಾಂಗ್ನಲ್ಲಿ ದ್ವೀತಿಯ. ಸಾಹಿತ್ಯ ಸ್ಪರ್ಧೆ: ವಾದವಿವಾದ ಪ್ರಥಮ, ಡಿಬೇಟ್ ದ್ವೀತಿಯ. ಸಾಹಿತ್ಯ ಸ್ಪರ್ಧೆಯಲ್ಲಿ ವಿನ್ನರ್, ಸಂಗೀತ ಸ್ಪರ್ಧೆಯಲ್ಲಿ ರನ್ನರ್ ಪ್ರಶಸ್ತಿ ಪಡೆದಿದ್ದಾರೆ.
ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ವೀರಭದ್ರಯ್ಯ ಸ್ಥಾವರಮಠ, ಕೃಪಾಸಾಗರ ಗೊಬ್ಬುರ್, ಬಾಬುರಾವ ಮಡಿವಾಳ, ಪ್ರಭಾವತಿ ಎಚ್., ಸಹಕಲಾವಿದರಾದ ಪ್ರಶಾಂತ ಗೋಲ್ಡಸ್ಮಿತ್, ಪೂಜಾ ಮಡಿವಾಳಪ್ಪ ನೇತೃತ್ವದಲ್ಲಿ ವಿದ್ಯಾರ್ಥಿನಿಯರಾದ ಪ್ರೀತಿ ಬಿರಾದಾರ್, ಅಕ್ಷತಾ ಹಿರೇಮಠ, ಶಾಂಭವಿ ವಿಶ್ವನಾಥಮಠ, ಸ್ಪೂರ್ತಿ ಪಂಚಾಳ, ಸ್ನೇಹ, ಪ್ರಿಯಾಂಕಾ, ಮಹಾದೇವಿ, ಐಶ್ವರ್ಯ, ಸಾಧನ ಪವಾರ್, ಈಶ್ವರಿ, ಲಕ್ಷಿ$್ಮ, ಬಸಮ್ಮ, ಭವಾನಿ ಪಾಟೀಲ, ಭಾಗ್ಯಶ್ರೀ, ನಾಗವೇಣಿ ಮತ್ತು ಪಲ್ಲವಿ ಭಾಗವಹಿಸಿದ್ದರು.
ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆ ಅಧ್ಯಕ್ಷೆ ಮಾತೋಶ್ರೀ ಡಾ.ದಾಾಯಿಣಿ ಎಸ್.ಅಪ್ಪ, 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ಹರ್ಷವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ. ಮಹಾವಿದ್ಯಾಲಯ ಪ್ರಾಚಾಯೆರ್ ಡಾ.ಸೀಮಾ ಪಾಟೀಲ್ ಅಭಿನಂದಿಸಿದ್ದಾರೆ.
ಶರಣಬಸವವೇಶ್ವರ ವಿದ್ಯಾವರ್ಧಕ ಸಂದಡಿ ವಿದ್ಯಾ ಸಂಸ್ಥೆಗಳಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಜತೆಗೆ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಬೆಳೆಯುವುದನ್ನು ಮನನ ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿನಿಯರು ಯುವಜನೋತ್ಸವದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ಸಂತಸದ ಸಂಗತಿ.
> ಬಸವರಾಜ ದೇಶಮುಖ, ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ