gamblers arrest 
ಕಲಬುರಗಿ

ಜೂಜುಕೋರರಿಂದ ರು.2.11 ಲಕ್ಷ ಜಪ್ತಿ

ರಮೇಶ ಮೇಳಕುಂದಾ
ಕಲಬುರಗಿ: ನಗರದ ಎಂ.ಬಿ ನಗರ ಪೊಲೀಸ್​ ಠಾಣೆ ವ್ಯಾಪ್ತಿಯ ಜಯನಗರ ಕ್ರಾಸ್​ ಬಳಿ ಇಸ್ಪೀಟ್​ ಆಟವಾಡುತ್ತಿದ್ದ 13 ಜನರ ಮೇಲೆ ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿ, 2.11 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಎಸಿಪಿ ಜೇಮ್ಸ್​ ಮಿನೇಜ್​ ಮಾರ್ಗದರ್ಶನದಲ್ಲಿ ಸಿಸಿಬಿ ಪಿಐ ಅರುಣಕುಮಾರ ನೇತೃತ್ವದಲ್ಲಿ ಸಿಬ್ಬಂದಿ ಅಶೋಕ ಕಟಕೆ, ರಾಜಕುಮಾರ ಗಂಧೆ, ಸುನೀಲ, ಶಿವಕುಮಾರ, ನಾಗರಾಜ ಅವರ ತಂಡ ಕಾರ್ಯಾಚರಣೆ ನಡೆಸಿದೆ. 13 ಜೂಜುಕೋರರಿಂದ ಪ್ರಕರಣ ದಾಖಲಿಸಲಾಗಿದೆ.