ಕಲಬುರಗಿ: ಕರ್ನಾಟಕವನ್ನು ಭಾರತದ ಕ್ವಾಂಟಮ್ ತಂತ್ರಾನ ರಾಜಧಾನಿಯನ್ನಾಗಿ ರೂಪಿಸುವ ಗುರಿಯೊಂದಿಗೆ ಪ್ರಸ್ತಾವಿತ ಕ್ವಾಂಟಮ್ ಸಿಟಿಯನ್ನು ಇನ್ನಷ್ಟು ವಿಸತವಾಗಿ ಅಭಿವೃದ್ಧಿಪಡಿಸಲು ಹೆಚ್ಚುವರಿ ಜಾಗ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿರುವುದಾಗಿ ಸಣ್ಣ ನೀರಾವರಿ, ವಿಾನ ಮತ್ತು ತಂತ್ರಾನ ಸಚಿವ ಡಾ.ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್&2026 ಕ್ವಾಂಟಮ್ ಸಿಟಿ ಯೋಜನೆ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿ, ಕ್ವಾಂಟಮ್ ತಂತ್ರಾನ ಕಂಪನಿ, ಸಂಶೋಧನಾ ಸಂಸ್ಥೆ, ಕ್ವಾಂಟಮ್ ಟಾಸ್ಕ್ ಫೋರ್ಸ್ನ ಸದಸ್ಯರು ಹಾಗೂ ಹೂಡಿಕೆ ವಲಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ, ಹೂಡಿಕೆ, ಸಂಶೋಧನೆ, ತಂತ್ರಾನ ಅಭಿವೃದ್ಧಿ ಮತ್ತು ಜಾಗತಿಕ ಸಹಭಾಗಿತ್ವದ ಮೂಲಕ ಕ್ವಾಂಟಮ್ ಸಿಟಿಯಲ್ಲಿ ಪಾಲುದಾರರಾಗುವಂತೆ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಆಹ್ವಾನ ನೀಡಿದರು.
ಬೆಂಗಳೂರು ಈಗಾಗಲೇ ದೇಶದ ಪ್ರಮುಖ ಕ್ವಾಂಟಮ್ ತಂತ್ರಾನ ಕ್ಲಸ್ಟರ್ಗಳಲ್ಲೊಂದಾಗಿ ಹೊರಹೊಮ್ಮಿದೆ. ಐಐಎಸ್ಸಿ ಸೇರಿ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಗಳು, ಪರಿಣಿತ ಮಾನವ ಸಂಪನ್ಮೂಲ, ತಂತ್ರಾನ ಕಂಪನಿಗಳು ಮತ್ತು ಸ್ಟಾರ್ಟಪ್ ಪರಿಸರ ವ್ಯವಸ್ಥೆ ಕರ್ನಾಟಕದ ದೊಡ್ಡ ಶಕ್ತಿಯಾಗಿದೆ. ಈ ಸಾಮರ್ಥ್ಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕರ್ನಾಟಕವನ್ನು ಭಾರತದ ಕ್ವಾಂಟಮ್ ರಾಜಧಾನಿಯನ್ನಾಗಿ ರೂಪಿಸುವುದು ನಮ್ಮ ಗುರಿ ಎಂದು ಹೇಳಿದರು.
ಜರ್ಮನಿಯ ಕಾನ್ಸುಲ್ ಜನರಲ್ ಡಾ.ಕ್ರಿಸ್ಟೋಫ್ ಡೋರ್ಷ್ಫೆಲ್ಟ್, ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಆನೆಟ್ ಬೇಸ್ಲರ್, ಇಟಲಿ ಕಾನ್ಸುಲೇಟ್ ಜನರಲ್ನ ಪ್ರೊ.ಮಾರ್ಕೊರೆ, ಪ್ರೊ.ನಾರಾಯಣ ಕೆ.ಎಸ್, ಐಐಐಟಿ ಧಾರವಾಡ ನಿರ್ದೇಶಕ ಪ್ರೊ.ಎಸ್.ಆರ್. ಮಹದೇವ ಪ್ರಸನ್ನ, ಮಾಜಿ ನಿರ್ದೇಶಕ ಕೆ.ಡಿ.ನಾಯಕ್, ರೀನಾ ದಯಾಳ್, ಡಾ.ಸುಮೀರ್, ಸುನಿಲ್ ಗುಪ್ತಾ, ಕ್ವಾಂಟಮ್ ಟಾಸ್ಕ್ ಫೋರ್ಸ್ನ ಸದಸ್ಯರು, ವಿವಿಧ ಸಂಶೋಧನಾ, ಕೈಗಾರಿಕಾ ಮತ್ತು ಹೂಡಿಕೆ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ರಾಜ್ಯ ಸರ್ಕಾರ ಈಗಾಗಲೇ ಹೆಸರಟ್ಟದಲ್ಲಿ 6.14 ಎಕರೆ ಜಾಗವನ್ನು ಕ್ವಾಂಟಮ್ ಸಿಟಿಗಾಗಿ ಮಂಜೂರು ಮಾಡಿದ್ದು, ಈ ತಂತ್ರಾನ ೇತ್ರದ ಅಭಿವೃದ್ಧಿಗೆ 1000 ಕೋಟಿ ರೂ.ಹೂಡಿಕೆ ಬದ್ಧತೆ ೂಷಿಸಿದೆ. ಸಂಶೋಧನೆ, ಸ್ಟಾರ್ಟಪ್ಗಳು, ಕೈಗಾರಿಕೆ, ಹೂಡಿಕೆ ಮತ್ತು ಜಾಗತಿಕ ಪಾಲುದಾರಿಕೆಗೆ ಅಗತ್ಯವಿರುವ ಸಮಗ್ರ ಮೂಲಸೌಕರ್ಯವನ್ನು ಕ್ವಾಂಟಮ್ ಸಿಟಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಹಲವಾರು ಪ್ರಮುಖ ಕಂಪನಿಗಳು ಹಾಗೂ ವಿದೇಶಿ ಸಂಶೋಧನೆ, ಶೈಣಿಕ ಸಂಸ್ಥೆಗಳು ಕ್ವಾಂಟಮ್ ಸಿಟಿಯೊಂದಿಗೆ ಸಹಭಾಗಿತ್ವಕ್ಕೆ ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಲು ಹೆಚ್ಚುವರಿ ಜಾಗದ ಅವಶ್ಯಕತೆ ಇದೆ ಎಂದು ಸಚಿವ ಡಾ.ಅಜಯಸಿಂಗ್ ಹೇಳಿದರು.
ಕ್ವಾಂಟಮ್ ಸಿಟಿಗೆ ಇನ್ನಷ್ಟು ವಿಸತ ಮೂಲಸೌಕರ್ಯ ನಿರ್ಮಿಸಲು ಹೆಚ್ಚುವರಿ ಜಾಗ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಾಗತಿಕ ಮಟ್ಟದ ಕ್ವಾಂಟಮ್ ಪರಿಸರ ವ್ಯವಸ್ಥೆ ನಿರ್ಮಿಸಲು ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ.> ಡಾ.ಅಜಯ್ ಧರ್ಮಸಿಂಗ್, ಸಚಿವ