ತಾರುಣ್ಯ ಸಿಂಧು, ರಾಷ್ಟ್ರೀಯ ಸೇವಿಕಾ ಸಮಿತಿ
ಕಲಬುರಗಿ: ಸಮಾಜದಲ್ಲಿ ಪರಿವರ್ತನೆ ತರಲು ನಮ್ಮ ಕುಟುಂಬದಲ್ಲಿ ಪರಿವರ್ತನೆ ಬರಬೇಕು. ಆದ್ದರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂದ ಶತಮಾನೋತ್ಸವದ ನಿಮಿತ್ತ ಪಂಚ ಪರಿವರ್ತನೆಗೆ ಆದ್ಯತೆ ನೀಡುತ್ತಿದ್ದು, ಅದರಂತೆ ಸೇವಿಕಾ ಸಮಿತಿಯ ಎಲ್ಲ ಸ್ವಯಂ ಸೇವಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಸುಪ್ರಿಯಾ ಜೋಶಿ ಹೇಳಿದರು.
ನಗರದ ನೂತನ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಬಾಲಕರ ಮಹಾವಿದ್ಯಾಲಯದಲ್ಲಿ ಸಂಸತಿ ಟ್ರಸ್ಟ್ ಮತ್ತು ರಾಷ್ಟ್ರ ಸೇವಿಕಾ ಸಮಿತಿಯಿಂದ ಗುರುವಾರ ಏರ್ಪಡಿಸಿದ್ದ ತಾರುಣ್ಯಸಿಂಧು ಶಕ್ತಿ ಯುಕ್ತಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬದ ಮೌಲ್ಯಗಳನ್ನು ಪುನರುತ್ಥಾನಗೊಳಿಸಿ, ಸಾಮಾಜಿಕ ಸಾಮರಸ್ಯ ಕಾಪಾಡಬೇಕು. ಪರಿಸರ ರಕ್ಷಣೆಯನ್ನು ಮಾಡುತ್ತ, ಸ್ವದೇಶಿ ಚಿಂತನೆಯೊಂದಿಗೆ ನಾಗರಿಕರ ಕರ್ತವ್ಯವನ್ನು ಪಾಲಿಸಬೇಕಿದೆ ಎಂದರು.
ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನಗಳನ್ನು ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 17ರಿಂದ 35 ವರ್ಷದೊಳಗಿನ ಯುವತಿ, ಗೃಹಿಣಿಯರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವೈಯಕ್ತಿಕ ಆಟ, ಗುಂಪು ಚರ್ಚೆ, ಕಾರ್ಯಶಾಲಾ, ಮಕ್ಕಳಿಂದ ವಿವಿಧ ಪ್ರಾತ್ಯಕೆಗಳು ನಡೆದವು. ವಕ್ತಾರ ಶ್ರೀದೇವಿ ಪಾಟೀಲ್, ರತ್ನಮಾಲಾ ಕುಲಕರ್ಣಿ, ಸರಸ್ವತಿ ಹೆಬ್ಬಾರ್, ವಾಸುಕಿ ಹೇರೂರ, ಸುಷ್ಮಾ ಭೋಸಗೆಕರ್, ದಯಾ ಯಾಳವಾರಕರ್ ಇತರರಿದ್ದರು.