rapist sentenced 
ಕಲಬುರಗಿ

ಅತ್ಯಾಚಾರಿಗೆ 20 ವರ್ಷ ಜೈಲು, 55 ಸಾವಿರ ರೂ. ದಂಡ

ಕಲಬುರಗಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಅಪರಾಧಿಗೆ ೨೦ ರ‍್ಷದ ಕಠಿಣ ಜೈಲು ಶಿಕ್ಷೆ, ೫೫,೦೦೦ ರೂ. ದಂಡ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ಪೋಕ್ಸೋ)ದ ನ್ಯಾಯಾಧೀಶರು ಆದೇಶಿಸಿದ್ದಾರೆ. ಚಿತ್ತಾಪುರ ತಾಲೂಕಿನ ಗ್ರಾಮವೊಂದರ ಆಂಜನೇಯ ಒಡೆಯರ್​ (೨೫) ಶಿೆಗೀಡಾದ ಅತ್ಯಾಚಾರಿ.
೨೦೨೫ರ ಫೆಬ್ರವರಿಯಲ್ಲಿ ಆರೋಪಿ ಆಂಜನೇಯ, ಅಪ್ರಾಪ್ತ ಬಾಲಕಿಗೆ ಜೀವಬೆದರಿಕೆ ಹಾಕಿ ಬಲವಂತವಾಗಿ ಅಪಹರಿಸಿದ್ದನು. ಬಳಿಕ ಬೆಂಗಳೂರಿನ ನಿವಾಸವೊಂದರಲ್ಲಿ ಕಾನೂನುಬಾಹಿರವಾಗಿ ಬಂಧನದಲ್ಲಿಟ್ಟು, ನಿರಂತರವಾಗಿ ಅತ್ಯಾಚಾರ ಎಸಗಿದ್ದನು. ಈ ಕುರಿತು ವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಸಿಪಿಐ ಚಂದ್ರಶೇಖರ ತಿಗಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್​.ಎಲ್​.ಚವ್ಹಾಣ್​ ಪೋಕ್ಸೋ ಕಾಯ್ದೆಯಡಿ ೨೦ ರ‍್ಷ ಜೈಲು ಶಿಕ್ಷೆ, ೫೫ ಸಾವಿರ ರೂ. ದಂಡ ವಿಧಿಸಿದ್ದು, ನೊಂದ ಬಾಲಕಿಗೆ ಪ್ರಾಧಿಕಾರದಿಂದ ಐದು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ರ‍್ಕಾರದ ಪರ ವಿಶೇಷ ರ‍್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು.