rain in kalaburagi district 
ಕಲಬುರಗಿ

ಧರಣಿಗೆ ತಂಪೆರೆದ ರೋಹಿಣಿ ಮಳೆ

ರಮೇಶ ಮೇಳಕುಂದಾ

ಪ್ರಮುಖ ಮುಖ್ಯಾಂಶಗಳು

  • ಬಿಸಿಲ ಧಗೆಗೆ ಬೆಂದ ಜನರಿಗೆ ತಂಪು
  • ಗುಡುಗು, ಸಿಡಿಲು, ತುಂಬಿದ ಹರಿದ ಹಳ್ಳಗಳು
ಕಲಬುರಗಿ: ನಗರ ಸೇರಿ ಜಿಲ್ಲಾದ್ಯಂತ ಬುಧವಾರ ಬೆಳಗಿನ ಜಾವ ಗುಡುಗು, ಸಿಡಿಲಿನೊಂದಿಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಬಸವಳಿದ ಧರೆಗೆ ಮಳೆರಾಯ ತಂಪೆರೆದಿದ್ದು, ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.
ಮೇ 25ರಂದು ಆರಂಭವಾಗಿರುವ ರೋಹಿಣಿ ಮಳೆ ನಕ್ಷತ್ರವೂ ಭರ್ಜರಿ ಮಳೆಯೊಂದಿಗೆ ಆರಂಭವಾಗಿದ್ದು, ಇಡೀ ಜಿಲ್ಲೆಯ ಎಲ್ಲೆಡೆ ಸುಮಾರು ನಾಲ್ಕೆ$ದು ಗಂಟೆ ಮಳೆ ಸತತವಾಗಿ ಸುರಿದಿದ್ದು, ನಗರದಲ್ಲಿ ಚರಂಡಿಗಳು ತುಂಬಿ, ವಿವಿಧ ವೃತ್ತಗಳು ಜಲಾವೃತ್ತವಾಗಿದ್ದವು.
ನಸುಕಿನ ಜಾವ ಐದು ಗಂಟೆ ಸುಮಾರಿಗೆ ಆರಂಭವಾದ ಮಳೆಯೂ ಸುಮಾರು 9ಗಂಟೆವರೆಗೆ ನಿರಂತರವಾಗಿ ಜಿಟಿಜಿಟಿಯಾಗಿ ಮುಂದುವರಿಯಿತು. ಮಧ್ಯಾಹ್ನ ಸುಮಾರು 1ಗಂಟೆವರೆಗೆ ಮೋಡ ಕವಿದ ವಾತಾವರಣವಿದ್ದು, ಬೆಳಗ್ಗೆ ಕೆಲ ಗಂಟೆ ಜನರು ಹೊರಬರದಂತೆ ಮಳೆ ತಡೆಯಿತು.
ನಗರದ ಗೋಲ್ಡ್​ ಹಬ್​ ಎದುರು, ಆನಂದ ಹೊಟೇಲ್​ ವೃತ್ತ, ಜೇವರ್ಗಿ ಕ್ರಾಸ್​, ಲಾಲ್​ಗೇರಿ ಕ್ರಾಸ್​ ಬಳಿ, ಶಹಾಬಜಾರ್​ ಚೌಕ್​ನಿಂದ ಆಳಂದ ಚೆಕ್​ ಪೋಸ್ಟ್​ವರೆಗೆ, ಸಿದ್ದರಾಮೇಶ್ವರಿ ಕಾಲನಿ, ಹಳೇ ಜೇವರ್ಗಿ ರಸ್ತೆಯ ರೈಲ್ವೆ ಕೆಳಸೇತುವೆ ಸೇರಿ ವಿವಿಧೆಡೆ ನೀರು ಸಂಗ್ರಹವಾಗಿ ಜನರು ಓಡಾಟಕ್ಕೆ ತೊಂದರೆಯಾಯಿತು.
ಕಲಬುರಗಿ ನಗರ, ಸೇಡಂ, ಕಾಳಗಿ, ಚಿಂಚೋಳಿ, ಆಳಂದ, ಚಿತ್ತಾಪುರ, ಜೇವರ್ಗಿ, ಅಜಲಪುರ ಸೇರಿ ಭಾಗಶ@ ಇಡೀ ಜಿಲ್ಲೆಯಲ್ಲಿ ಮಳೆ ಸುರಿದಿದ್ದು, ವಿವಿಧೆಡೆ ಸಿಡಿಲು ಬಿದ್ದಿದ್ದು, ಕೆಲವು ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು, ಸಮಸ್ಯೆ ಉಂಟು ಮಾಡಿತ್ತು.
ಕಪ್ಪು ಮಸಿ ಬಿದ್ದು, ಸಂಚಾರ ದಟ್ಟಣೆ: ಪ್ರಿಂಟಿಂಗ್​ನ ೌಡರ್​ನ ಕಪ್ಪು ಕೆಮಿಕಲ್​ ಬಿದ್ದಿದ್ದು, ಸಂಚಾರ ಸಮಸ್ಯೆ ಉಂಟಾಗಿತ್ತು. ದುರ್ನಾತ ಬೀರಿತ್ತು. ಬಿಲಗುಂದಿ ವೃತ್ತ (ರ್ಖಗೆ)ದ ಸಮೀಪ ಇಡೀ ರಸ್ತೆ ಕೆಮಿಕಲ್​ಮಯವಾಗಿದ್ದು, ಮಳೆ ನೀರಿನಿಂದ ರಸ್ತೆಯನ್ನು ಆವರಿಸಿತ್ತು. ಅದರ ಮೇಲೆ ಓಡಾಡಿದ ವಾಹನ, ಸಾರ್ವಜನಿಕರು ಚಪ್ಪಲಿಗಳು ಸಂಪೂರ್ಣ ಕಪ್ಪು ಬಣ್ಣದಾಯಿತು. ಒದ್ದಾಡಿದ ನಾಯಿಗಳು ಕಪ್ಪು ಬಣ್ಣದಾಗಿ, ಮಾರ್ಪಟ್ಟಿದ್ದವು. ಇದರಿಂದ ಕೆಲ ಹೊತ್ತು ಸಂಚಾರ ದಟ್ಟಣೆಯೂ ಆಯಿತು.