ರಾಹುಲ್​ ಸಂಕಾನೂರ 
ಕಲಬುರಗಿ

ಕಲಬುರಗಿ ಜಿಪಂಗೆ ಸಿಇಒ ಆಗಿ ರಾಹುಲ್​ ಸಂಕಾನೂರ ನೇಮಕ

ಪ್ರಮುಖ ಮುಖ್ಯಾಂಶಗಳು

  • ಚಿಕ್ಕಮಗಳೂರ ಜಿಲ್ಲಾಧಿಕಾರಿಯಾಗಿ ಭಂವರ್​ಸಿಂಗ್​ ಮೀನಾ ವರ್ಗಾವಣೆ
ಕಲಬುರಗಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯನ್ನಾಗಿ ರಾಹುಲ್​ ಸಂಕಾನೂರರನ್ನು ನೇಮಕ ಮಾಡಿ, ಆಡಳಿತ ಮತ್ತು ಸುಧಾರಣೆ ಇಲಾಖೆ ಆದೇಶಿಸಿದೆ. ಜಿಪಂ ಸಿಇಒ ಭಂವರ್​ಸಿಂಗ್​ ಮೀನಾರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. 2023ರಿಂದ ಕಲಬುರಗಿ ಜಿಪಂ ಸಿಇಒ ಆಗಿ ಭಂವರ್​ಸಿಂಗ್​ ಮೀನಾ ಕಾರ್ಯನಿರ್ವಹಿಸುತ್ತಿದ್ದರು.
2019 ಬ್ಯಾಚ್​ನ ಐಎಎಸ್​ ಅಧಿಕಾರಿ ಆಗಿರುವ ರಾಹುಲ್​ ಸಂಕಾನೂರ ಹುಬ್ಬಳ್ಳಿ ನಿವಾಸಿಯಾಗಿದ್ದು, ಗದಗ ಜಿಲ್ಲೆ ರೋಣ ತಾಲೂಕಿನ ಇಡಗುಂಜಿ ಗ್ರಾಮದವರಾಗಿದ್ದಾರೆ. ಪ್ರಸ್ತುತ ಐಟಿ&ಬಿಟಿ ಇಲಾಖೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಕಲಬುರಗಿ ಜಿಪಂ ಸಿಇಒ ಆಗಿ ನೇಮಕ ಮಾಡಲಾಗಿದೆ.