ಚಿಂಚೋಳಿ: ಗಡಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಗಇದಲಾಯಿ ಗ್ರಾಮ ಪಂಚಾಯಿತಿ ಎದುರು ಭಾರತ ಮುಕ್ತಿ ಮೋರ್ಚಾ ಸಂಟನೆಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಅಧ್ಯ ಮಾರುತಿ ಗಂಜಗೇರಾ ಮಾತನಾಡಿ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು, ಕೂಡಲೇ ಕಡಿವಾಣ ಹಾಕಬೇಕು. ತಾಲೂಕು ಆಡಳಿತ ಗ್ರಾಮೀಣ ಪ್ರದೇಶದ ಜನ ಸಾಮಾನ್ಯರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದೆ. ಕೂಡಲೇ ನಾಗಇದಲಾಯಿ ಗ್ರಾಮ ಪಂಚಾಯಿತಿಯಲ್ಲಿ ವಯೋವೃದ್ಧರ ಹಗಲು ಯೋಗೇಮ ಕೇಂದ್ರ ಪ್ರಾರಂಭಿಸಬೇಕು. ಕೊಳ್ಳೂರಿನಲ್ಲಿ ಸಾಮೂಹಿಕ ಮಹಿಳಾ ಶೌಚಗೃಹ ನಿರ್ಮಾಣ ಮಾಡಬೇಕು. ಕುಸರಂಪಳ್ಳಿಯ ಪರಿಶಿಷ್ಟ ಜನರು ವಾಸಿಸುವ ಕಾಲನಿಯ ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕು. ಗ್ರಾಮದಲ್ಲಿನ ಕೆಟ್ಟು ಹೋಗಿರುವ ಹೈಮಾಸ್ಟ್ ದೀಪಗಳನ್ನು ರಿಪೇರಿ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ, ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ ಚವ್ಹಾಣ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ರವಿಕುಮಾರ ರುಸ್ತಂಪುರ, ಪ್ರದಿಪ್ ಕೊಳ್ಳುರ, ಮಹೇಶ ಕುಸರಂಪಳ್ಳಿ, ಮೋಹನ ಐನಾಪುರ, ಅಮರನಾಥ ಹೂವಿನಭಾವಿ, ಮೋಬಿನ್ ಚಿಂಚೋಳಿ, ರಮೇಶ ಕುಸರಂಪಳ್ಳಿ, ಸುಮಿತ್ರಾ ಕೊಳ್ಳೂರ, ಜಗಮ್ಮ, ಕಾಶಮ್ಮ, ಆಶಾ ರಾಣಿ, ಅಂಬಿಕಾ, ರಂಗಮ್ಮ, ಯಶೋಧಾ, ಸತ್ಯಮ್ಮ, ಸುನೀತಾ, ಮಹೇಶ, ಚಂದ್ರಮ್ಮ, ರತ್ನಮ್ಮ, ನಾಗಮ್ಮ, ವೈಜನಾಥ, ಪರಮೇಶ್ವರ, ರಾಜಕುಮಾರ, ಲೋಕೇಶ, ಪವನಕುಮಾರ, ಆನಂದ, ನೀಲಮ್ಮ, ಅಬ್ರಾಹಂ, ರಾಜು ಇತರರಿದ್ದರು.