ಕಲಬುರಗಿ: ನೇಣು ಬಿಗಿದುಕೊಂಡು ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡು ಘಟನೆ ನಡೆದಿದೆ.
ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಪಿಎಸ್ಐ ಬಸವರಾಜ್ ಹೆರೂರ್ ಆತ್ಮಹತ್ಯೆ ಮಾಡಿಕೊಂಡವರು.
ಕಲಬುರಗಿ ನಗರದ ಗಂಗಾ ನಗರದ ನಿವಾಸದಲ್ಲಿ ಘಟನೆ ಪಡೆದಿದೆ. ನಿನ್ನೆ ತಡರಾತ್ರಿ ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆಯ ವಿಷಯ ಹೇಳಿದ್ದ ಬಸವರಾಜ. ತಕ್ಷಣ ಹೆರೂರ್ ಸ್ನೇಹಿತರು ಬಸವರಾಜ್ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ತಕ್ಷಣ ಬಸವರಾಜ್ ಹೆರೂರ್ ತಂದೆ ಮನೆಯ ಬಾಗಿಲು ಒಡೆದು ಓಪನ್ ಮಾಡುವ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಲಾಗಿತ್ತು.
2014ರ ಬ್ಯಾಚ್ ಪಿಎಸ್ಐ ಆಗಿರುವ ಬಸವರಾಜ್ ಹೆರೂರ್ ಕಳೆದ ಎರಡು ವರ್ಷಗಳಿಂದ ಕಲಬುರಗಿಯ ಡಿಸಿಆರ್ ಬಿ ಯಲ್ಲಿ ಕೆಲಸ ಮಾಡುತ್ತಿದ್ದರು.
ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.