ರೈತರಿಗೆ ನಿರಂತರ ವಿದ್ಯುತ್​ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಮಹಾಗಾಂವ್​ ಕ್ರಾಸ್​ ಜೆಸ್ಕಾಂ ಕಚೇರಿ ಎದುರು ನವ ಕರ್ನಾಟಕ ರೈತ ಸಂದಿಂದ ಪ್ರತಿಭಟನೆ ನಡೆಸಲಾಯಿತು. ದಯಾನಂದ ಪಾಟೀಲ್​, ಗಿರೀಶ ಮಾಲಿಪಾಟೀಲ್​, ಮಲ್ಲಿಕಾರ್ಜುನ ಮರತೂರಕರ, ನರೇಶ ಹರಸೂರಕರ ಇತರರಿದ್ದರು. 
ಕಲಬುರಗಿ

ರೈತರಿಗೆ ನಿರಂತರ ವಿದ್ಯುತ್​ ಪೂರೈಕೆ ಮಾಡಿ

ಕಮಲಾಪುರ: ಮಹಾಗಾಂವ್​ ಹೋಬಳಿ ವ್ಯಾಪ್ತಿಯ ರೈತರಿಗೆ 7 ಗಂಟೆ ವಿದ್ಯುತ್​ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ನವ ಕರ್ನಾಟಕ ರೈತ ಸಂದ ಸಂಸ್ಥಾಪಕ ಅಧ್ಯಕ್ಷ ದಯಾನಂದ ಪಾಟೀಲ್​ ಆಗ್ರಹಿಸಿದರು. ಮಹಾಗಾಂವ್​ ಕ್ರಾಸ್​ನಲ್ಲಿರುವ ಜೆಸ್ಕಾಂ ಕಚೇರಿ ಎದುರು ನವ ಕರ್ನಾಟಕ ರೈತ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿ, ಮಳೆಯ ಕೊರೆತೆಯಿಂದ ಮುಂಗಾರು ಬೆಳೆ ಹಾಳಾಗಿದೆ. ಇದೀಗ ಅಳಿದುಳಿದ ಫಸಲು ಪಡೆಯಲು ರೈತಾಪಿ ವರ್ಗ ಶ್ರಮಿಸುತ್ತಿದ್ದು, ಇಂತಹ ಸಮಯದಲ್ಲಿ ಜೆಸ್ಕಾಂ ಅಧಿಕಾರಿಗಳು ಅಸಮರ್ಪಕ ವಿದ್ಯುತ್​ ಪೂರೈಸುವ ಮೂಲಕ ಸಂಕಷ್ಟಕ್ಕಿಡು ಮಾಡುತ್ತಿದ್ದಾರೆ. ಸೂರ್ಯನ ಬೆಳಕಿನ ಅವಧಿಯಲ್ಲಿ ಒಟ್ಟು ಏಳು ಗಂಟೆ ವಿದ್ಯುತ್​ ನೀಡಬೇಕು ಎಂದು ಆಗ್ರಹಿಸಿದರು. ಗಿರೀಶ ಮಾಲಿಪಾಟೀಲ್​, ಮಲ್ಲಿಕಾರ್ಜುನ ಮರತೂರಕರ, ನರೇಶ ಹರಸೂರಕರ, ಶಿವರಾಜ ಪಾಟೀಲ್​, ಮೇರಾಜ ಪಾಟೀಲ್​, ಶರಣು ಸ್ವಾಮಿ, ಸಿದ್ದು ಪಾಟೀಲ್​, ಉತ್ತಮ ಪಾಟೀಲ್​, ಅರುಣ ಧಮ್ಮೂರ, ಶರಣಬಸ್ಸಪ್ಪ ಬಾಳಿ, ಸಂಗಮೇಶ ಹಳ್ಳಿ, ಸಂಜಯ ನಾಟಿಕಾರ, ರೇವಣಸಿದ್ದ ಕಿಣಗಿ ಇತರರಿದ್ದರು.