ಆಳಂದ ತಾಲೂಕಿನ ಬಟ್ಟರಗಾದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಕೋಣೆಗಳನ್ನು ಶಾಸಕ ಬಿ.ಆರ್​.ಪಾಟೀಲ್​ ಉದ್ಘಾಟಿಸಿದರು. ಬಸವರಾಜ ಪಾಟೀಲ್​, ಮಲ್ಲಿನಾಥ ದೊಡಮನಿ, ನಬಿಲಾಲ್​ ಮುತ್ಯಾ, ರಾಮಚಂದ್ರಪ್ಪ ಚಿಂಚೂರು ಇದ್ದರು. 
ಕಲಬುರಗಿ

ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

ಆಳಂದ: ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಶಿಕ್ಷಣ ಕ್ಷೇತ್ರದ ಪ್ರಗತಿ ಜತೆಗೆ ರಸ್ತೆ, ಕುಡಿವ ನೀರು, ಚರಂಡಿ ಸೇರಿ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಬಿ.ಆರ್​.ಪಾಟೀಲ್​ ಹೇಳಿದರು.

ಮಾಡಿಯಾಳದಲ್ಲಿ ಕ್ರಾಸ್​ನಿಂದ ದೇವಂತಗಿ ಗ್ರಾಮದವರೆಗೆ 5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ನಿಂಬರ್ಗಾದಲ್ಲಿ 70 ಲಕ್ಷ ರೂ. ವೆಚ್ಚದ ಓವರ್​ ಹೆಡ್​ ಟ್ಯಾಂಕ್​ ತೆರೆದ ಬಾವಿ ಹಾಗೂ ಟ್ಯಾಂಕ್​ ನಿರ್ಮಾಣ ಕಾಮಗಾರಿಗೆ ಚಾಲನೆ, ಬೊಮ್ಮನಹಳ್ಳಿಯಲ್ಲಿ 68 ಲಕ್ಷ ರೂ. ಮತ್ತು ಹಾಗೂ ಬಟ್ಟರಗಾದಲ್ಲಿ 68 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಶಾಲೆ ಕೋಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕಾದರೆ ಮೊದಲು ಉತ್ತಮ ಶಾಲಾ ಕಟ್ಟಡ ಇರಬೇಕು. ಈ ನಿಟ್ಟಿನಲ್ಲಿ ಗಮನಹರಿಸಲಾಗುತ್ತಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನಹರಿಸಬೇಕು. ಜತೆಗೆ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದು ಸಲಹೆ ನೀಡಿದರು.

ಬಿಆರ್​ಸಿ ಸಮನ್ವಯ ಅಧಿಕಾರಿ ಅಣ್ಣಪ್ಪ ಹಾದಿಮನಿ ಮಾತನಾಡಿದರು. ಬಿಇಒ ಶಿವಕುಮಾರ ಪಾರಶೆಟ್ಟಿ, ಎಇಇ ಹೊನ್ನೇಶ ಅಳಗಿ, ಕೆಎಂಎಫ್​ ನಿರ್ದೇಶಕ ಈರಣ್ಣ ಝಳಕಿ, ಸಂಜುಕುಮಾರ ಪಾಟೀಲ್​, ಸಿದ್ದರಾಮ ಪ್ಯಾಟಿ, ರಾಮಚಂದ್ರಪ್ಪ ಚಿಂಚೂರು, ಬಸವರಾಜ ಮಾಲಿಪಾಟೀಲ್​, ನಬಿಲಾಲ್​ ಮುತ್ಯಾ, ಮಲ್ಲಿನಾಥ ದೊಡ್ಮನಿ, ಶಿವಲಿಂಗಪ್ಪ ಬಿರಾದಾರ, ಬಸವರಾಜ ಚಿಂಚೂರ, ಈರಣ್ಣ ನಾಗೂರ ಇತರರಿದ್ದರು.