ಚಿಂಚೋಳಿಯಲ್ಲಿ ತಾಲೂಕು ಗೊಂಡ ಕುರುಬ ಸಮಾಜದ ಸಭೆ ನಡೆಯಿತು. ಹಣಮಂತ ಪೂಜಾರಿ, ರವೀಂದ್ರ ಪೂಜಾರಿ, ಗೋಪಾಲ ಎಂ.ಪಿ., ರಾಜಕುಮಾರ ಮರಪಳ್ಳಿ, ರಂಗಣ್ಣ ಪೂಜಾರಿ ಇತರರಿದ್ದರು. 
ಕಲಬುರಗಿ

ಗೊಂಡಕುರುಬ ಸಂಘಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿ

ಚಿಂಚೋಳಿ: ಕ್ಷೇತ್ರದಲ್ಲಿ ಗೊಂಡಕುರುಬ ಸಮಾಜ ಬಹುಸಂಖ್ಯಾತದಲ್ಲಿದ್ದು, ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡುವ ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಗೊಂಡಕುರುಬ ಸಮಾಜದ ತಾಲೂಕು ಅಧ್ಯ ಹಣಮಂತ ಪೂಜಾರಿ ಹೇಳಿದರು. ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಗೊಂಡ ಕುರುಬ ಸಮಾಜದ ಸಭೆಯಲ್ಲಿ ಮಾತನಾಡಿ, ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ರಾಜಕೀಯ ಪಗಳು ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಸಮಾಜವನ್ನು ಕಡೆಗಣಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರಮುಖರಾದ ರವೀಂದ್ರ ಪೂಜಾರಿ ದಸ್ತಾಪುರ, ಗೋಪಾಲ ಎಂ.ಪಿ., ರಾಜಕುಮಾರ ಮರಪಳ್ಳಿ, ರಂಗಣ್ಣ ಪೂಜಾರಿ, ಶಂಕರ ಗುತ್ತಿ ಐನೊಳ್ಳಿ, ಮೋಗಲಪ್ಪ ಕರಕಟ್ಟಿ, ಜಗನ್ನಾಥ ಪೂಜಾರಿ, ರಾಮಚಂದ್ರ ಪೂಜಾರಿ, ರಾಜಪ್ಪ ಪೂಜಾರಿ ಕನಕಪುರ, ಮಹಾದೇವ ಇದಲಾಯಿ, ಮಲ್ಲಪ್ಪ ಪೂಜಾರಿ, ಶರಣು ಬೀರಪುರ ಇತರರಿದ್ದರು.