dattatreya patil revoor pro Strike
ಕಲಬುರಗಿ: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ (ಅಪ್ಪುಗೌಡ) ವಿರುದ್ಧ ವಿನಾಕಾರಣ ಘೋಷಣೆ ಕೂಗಿ ಗೌರವಕ್ಕೆ ಧಕ್ಕೆ ತಂದಿದ್ದಲ್ಲದೇ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿ, ಕ್ರಮಕ್ಕೆ ನಗರದ ಭಾರತೀಯ ಜನತಾ ಪಕ್ಷದ ಎಸ್ಸಿ ಮೋರ್ಚಾ ಮತ್ತು ಬಿಜೆಪಿ ಮುಖಂಡರು ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದಾರೆ.
ಅನುಮತಿ ಪಡೆಯದೇ ಸ್ಟೇಷನ್ ಬಜಾರ್ ಠಾಣೆ ಎದುರು ದೀಢೀರ್ ಎಂದು ಸೇರಿ ಘೋಷಣೆಗಳನ್ನು ಕೂಗಿ, ಮಾಜಿ ಶಾಸಕರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ತಾಹೇರ್ ಅಲಿ, ಗೌಸ್ ಮತ್ತಿಮೂಡ, ಅಬ್ದುಲ್ ಹಮೀದ್, ನಯೀಮ್ ಖಾನ್, ಸೈಯದ್ ಅಹ್ಮದ್, ಅಲಂದಾರ ಜೈದಿ, ಅಜೀಂ ಶಿನ್ನಿ ಸೇರಿ ಹತ್ತಾರು ಜನರು ಕಾನೂನು ಉಲ್ಲಂಘಿಸಿ ಸಾರ್ವಜನಿಕರಲ್ಲಿ ಭಯ ಮೂಡಿಸಿ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿದ್ದು, ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರು ನೀಡಿದ್ದಾರೆ.
ನಿಯೋಗದೊಂದಿಗೆ ಭೇಟಿ ನೀಡಿದ ಬಿಜೆಪಿ ಮುಖಂಡರು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಸ್ಸಿ ಮೋರ್ಚಾ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಜಿನಕೇರಿ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಉದನೂರ, ವಿಶಾಲ ದರ್ಗಿ, ಈರಣ್ಣ ಹೊನ್ನಳ್ಳಿ, ರಾಜಶೇಖರ ದೇವದುರ್ಗ, ಪ್ರಮುಖರಾದ ಶಿವಯೋಗಿ ನಾಗನಹಳ್ಳಿ, ಮಹಾದೇವ ಬೆಳಮಗಿ, ಶ್ರೀನಿವಾಸ ದೇಸಾಯಿ, ವಿಜಯಕುಮಾರ ಸೇವಲಾನಿ, ಡಾ.ಶಂಭುಲಿಂಗ ಬಳಬಟ್ಟಿ, ಗುರು ಪಟ್ಟಣ, ಬಸವರಾಜ ಪಾಟೀಲ್ ಬಿರಾಳ, ರವಿ ಹಾಗರಗಿ ಇತರರಿದ್ದರು.