support of siddaramaiah 
ಕಲಬುರಗಿ

ಕಲಬುರಗಿಯಲ್ಲಿ ಸಿದ್ದರಾಮಯ್ಯಗೆ ಬೆಂಬಲಿಸಿ ಪ್ರತಿಭಟನೆ ಮೇ 28ರಂದು

ಪ್ರಮುಖ ಮುಖ್ಯಾಂಶಗಳು

  • ಕುರುಬ ಸಮಾಜದಿಂದ ಬೃಹತ್​ ಪ್ರತಿಭಟನೆಗೆ ನಿರ್ಧಾರ
  • ರಾಜೀನಾಮೆ ನೀಡದಂತೆ ಆಗ್ರಹ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವಿರೋಧಿಸಿ ಗುರುವಾರ ನಗರದಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ತಿಳಿಸಿದ್ದಾರೆ.
ಅಹಿಂದ ನಾಯಕ, ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ದೂರದೃಷ್ಟಿಯ ನೇತಾರ ಸಿದ್ದರಾಮಯ್ಯರನ್ನು ಕೆಳಗಿಳಿಸುತ್ತಿರುವುದು ಸರಿಯಲ್ಲ. ಅವರ ಬೆಂಬಲಾರ್ಥವಾಗಿ ಗುರುವಾರ ಬೆಳಗ್ಗೆ 10ಕ್ಕೆ ಎಸ್​ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್​ ಪ್ರತಿಭಟನೆ ನಡೆಸಲಾಗುವುದು. ಸಿಎಂ ಸಿದ್ದರಾಮಯ್ಯ ಅಭಿಮಾನಿ ಬಳಗದ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು, ಕುರುಬ ಸಮುದಾಯದ ಮುಖಂಡರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅಹಿಂದ ನಾಯಕ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಬೇಕು ಎಂದು ಪೂಜಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.