ss patil 
ಕಲಬುರಗಿ

ಸತ್ಯ, ಶುದ್ಧ ಕಾಯಕದಿಂದಲೇ ಪ್ರಗತಿ: ಮನು ಬಳಿಗಾರ ಹೇಳಿಕೆ

ರಮೇಶ ಮೇಳಕುಂದಾ

ಕಲಬುರಗಿ:

ಕಡಗಂಚಿಯಂತ ಸಣ್ಣ ಗ್ರಾಮದಿಂದ ಆರಂಭಿಸಿ ರಾಜ್ಯ, ರಾಷ್ಟ್ರ, ವಿಶ್ವ ಮಟ್ಟಕ್ಕೆ ಉದ್ಯಮ ಲೋಕವನ್ನು ಕಟ್ಟಿ ಬೆಳೆಸಲು ಎಸ್​.ಎಸ್​.ಪಾಟೀಲ್​ ಅವರ ಕುಟುಂಬದ ಸತ್ಯ, ಶುದ್ಧ, ಕಾಯಕವೇ ಕಾರಣ ಎಂದು ಎಸ್​.ಎಸ್​.ಪಾಟೀಲ್​ ೌಂಡೇಷನ್​ ಅಧ್ಯಕ್ಷ, ಕಸಾಪ ಮಾಜಿ ಅಧ್ಯಕ್ಷ ಡಾ.ಮನು ಬಳಿಗಾರ್​ ಹೇಳಿದರು.

ನಗರದ ಸೇಡಂ ರಸ್ತೆಯ ಎಂ.ಆರ್​.ಎಂ.ಸಿ ಸ್ಯಾಕ್​ ಸಭಾಂಗಣದಲ್ಲಿ ಎಸ್​.ಆರ್​.ಪಾಟೀಲ್​ ಫೌಂಡೇಷನ್​ ಹಾಗೂ ಪಾಟೀಲ್​ ಗ್ರ್​ೂ ಆಫ್​ ಇಂಡಸ್ಟ್ರೀಸ್​ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ "ಕರ್ಮಯೋಗಿ ಎಸ್​.ಎಸ್​.ಪಾಟೀಲರ 4ನೇ ಪುಣ್ಯಸ್ಮರಣೆ ಹಾಗೂ ಎಂಟು ಸಾಧಕರಿಗೆ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ತನು, ಮನ, ಧನವನ್ನು ಅರ್ಪಿಸಿ, ಕರ್ತವ್ಯ ಮತ್ತು ಜೀವನದಲ್ಲಿ ಸತ್ಯ ಶುದ್ಧತೆಯನ್ನು ಕಾಪಾಡಿಕೊಂಡಿದ್ದವರು ಡಾ.ಎಸ್​.ಎಸ್​.ಪಾಟೀಲ್​. ಇಂದು ವಿಶ್ವದ ಅತಿ ಎತ್ತರದ ಚೇನಾಬ್​ ಸೇತುವೆ ಮೇಲೆ ವಂದೇ ಭಾರತ್​ ರೈಲು ಸಾಗುವ ರೈಲು ಹಳಿ ಸಿದ್ಧಪಡಿಸುವುದು ಪಾಟೀಲ್​ ಗ್ರೂಪ್ಸ್​ ಎಂಬುದು ಇಡೀ ಕಲಬುರಗಿ, ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂದರು.
ಪ್ರಶಸ್ತಿ ಪುರಸತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ಕಾಯಕವನ್ನು ಗುರುತಿಸಿ, ಗೌರವಿಸುವುದು ವಿರಳ. ಪಾಟೀಲ್​ ಕುಟುಂಬವೂ ವಿಶ್ವಶ್ರೇಷ್ಠ ಉದ್ಯಮಿಗಳ ಸಾಲಿನಲ್ಲಿ ನಿಲ್ಲುತ್ತಿದ್ದು, ಅವರ ಸೇವೆಯೂ ಇನ್ನಷ್ಟು ಉತ್ತುಂಗಕ್ಕೆ ಏರಲಿ. ಕಾಯಕ, ದಾಸೋಹವೂ ಮುಂದುವರಿಯಲಿ ಎಂದು ಹಾರೈಸಿದರು.
ಪಾಟೀಲ್​ ಗ್ರೂಪ್​ ಆ್​ ಕಂಪನಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಾದ ನಾಗೇಶ ಭೂಬಾರ, ಅನೀಲಕುಮಾರ ಕಲಬುರಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಶ್ರೀನಿವಾಸ ಸರಡಗಿಯ ಶ್ರೀ ಅಪ್ಪಾರಾವ ದೇವಿ ಮುತ್ಯಾ, ಫೌಂಡೇಷನ್​ ಗೌರವಾಧ್ಯಕ್ಷೆ ಸರೋಜಿನಿದೇವಿ ಪಾಟೀಲ್​, ಪಾಟೀಲ್​ ಗ್ರೂಪ್​ ಆಫ್​ ಇಂಡಸ್ಟ್ರೀಸ್​ ಅಧ್ಯಕ್ಷ ಲಿಂಗರಾಜ ಪಾಟೀಲ್​, ನಿರ್ದೇಶಕ ಸಿದ್ಧಲಿಂಗ ಪಾಟೀಲ್​, ಎಚ್​ಕೆಇ ಅಧ್ಯಕ್ಷ, ಎಂಎಲ್ಸಿ ಶಶೀಲ ನಮೋಶಿ, ಉಪಾಧ್ಯಕ್ಷ ರಾಜು ಭೀಮಳ್ಳಿ, ಬಸಂತಕುಮಾರ ಪಾಟೀಲ್​, ಉಮೇಶ ಶೆಟ್ಟಿ, ಪದ್ಮಜಾ ಪಾಟೀಲ್​ ಇತರರಿದ್ದರು. ಡಾ.ಶೋಭಾ ಬೆಂಬಳಗಿ, ಕಾರ್ತಿಕ ಸ್ವಾಗತಿಸಿದರು.