priyank kharge 
ಕಲಬುರಗಿ

ಪ್ರಿಯಾಂಕ್​ ಖರ್ಗೆ ಡಿಸಿಎಂ, ಅಲ್ಲಮಪ್ರಭು ಸಚಿವರಾಗಲಿ: ಆನಂದ ನಂದೂರಕರ್​ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್​ ಯುವ ಮುಖಂಡ ಆನಂದ ನಂದೂರಕರ್​ ಆಗ್ರಹ
  • ಜನಸೇವೆ, ದಕ್ಷ ಆಡಳಿತ, ಪಕ್ಷದ ಸಂಘಟನೆಗೆ ಬಲ ಎಂದು ಹೇಳಿಕೆ
ಕಲಬುರಗಿ: ದಕ್ಷ, ದೂರದೃಷ್ಟಿಯ, ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಯಂತ್ರಿಸುವ ಸಚಿವ ಪ್ರಿಯಾಂಕ್​ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಮಾಡಬೇಕು, ಜನರ ಪ್ರಗತಿಗೆ ಶ್ರಮಿಸುವ ಶಾಸಕ ಅಲ್ಲಮಪ್ರಭು ಪಾಟೀಲ್​ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ದಣ ಕ್ಷೇತ್ರದ ಕಾಂಗ್ರೆಸ್​ ಯುವ ಟಕದ ಪ್ರಧಾನ ಕಾರ್ಯದರ್ಶಿ ಆನಂದ ನಂದೂರಕರ್​ ಆಗ್ರಹಿಸಿದ್ದಾರೆ.
ಕಾಂಗ್ರೆಸ್​ ಸರ್ಕಾರದಲ್ಲಿ ಪ್ರಿಯಾಂಕ್​ ಖರ್ಗೆ ಅವರು ಅನುಭವಿ, ಪ್ರಾಮಾಣಿಕ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಪ್ರತಿ ಪಕ್ಷಗಳಿಗೆ ಸೈದ್ಧಾಂತಿಕವಾಗಿ ಸರಿಯಾದ ಉತ್ತರಗಳನ್ನು ನೀಡುತ್ತ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲೂ ಬಲ ತುಂಬುವ ಸಾಮರ್ಥ್ಯ ಹೊಂದಿದ್ದಾರೆ. ರ್ಖಗೆ ಅವರಿಗೆ ಉನ್ನತ ಸ್ಥಾನ ನೀಡಿದರೆ ಪಕ್ಷದ ಸಂಟನೆ ಮತ್ತು ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಬಲ ಬರಲಿದೆ ಎಂದು ಕೋರಿದ್ದಾರೆ.
ಶಾಸಕ ಅಲ್ಲಮಪ್ರಭು ಪಾಟೀಲ್​ ಅವರು ಕ್ಷೇತ್ರದ ಪ್ರಗತಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಹಾಪ್​ಕಾಮ್ಸ್​ ಅಧ್ಯಕ್ಷರಾಗಿ, ವಿಧಾನ ಪರಿಷತ್​ ಸದಸ್ಯರಾಗಿ, ಪ್ರಸ್ತುತ ಶಾಸಕರಾಗಿ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ. ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿದ್ದು, ಅವರಿಗೆ ಸಚಿವ ಸ್ಥಾನ ನೀಡಿದರೆ ಇನ್ನಷ್ಟು ಸಕ್ರೀಯವಾಗಿ ಕಾರ್ಯನಿರ್ವಹಿಸಿ, ಜನಸೇವೆ ಮಾಡಲಿದ್ದಾರೆ. ಪಕ್ಷದ ಸಂಟನೆಗೂ ಬಲ ನೀಡಲಿದ್ದಾರೆ. ಕಾಂಗ್ರೆಸ್​ ಹೈಕಮಾಂಡ್​ ಇಬ್ಬರಿಗೂ ಉನ್ನತ ಸ್ಥಾನಗಳನ್ನು ನೀಡಬೇಕು ಎಂದು ಕೋರಿದ್ದಾರೆ.