ಕಲಬುರಗಿಯ ಖ್ವಾಜಾ ಬಂದಾನವಾಜ್​ ದರ್ಗಾಕ್ಕೆ ಬಿಡಿಎ ಅಧ್ಯಕ್ಷ ಎನ್​.ಎ.ಹ್ಯಾರಿಸ್​ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸೈಯದ್​ ಮುಹಮ್ಮದ್​ ಅಲಿ ಅಲ್​ ಹುಸೇನಿ, ರಹೀಮ್​ ಖಾನ್​, ಫರಾಜ್​ ಉಲ್​ ಇಸ್ಲಾಂ ಇತರರಿದ್ದರು. 
ಕಲಬುರಗಿ

ಧಾರ್ಮಿಕ ಕ್ಷೇತ್ರ ವೀಕ್ಷಣೆ, ಪಕ್ಷ ಸಂಘಟನೆಗೆ ಆದ್ಯತೆ

ಕಲಬುರಗಿ: ನಗರಕ್ಕೆ ಬುಧವಾರ ಭೇಟಿ ನೀಡಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎನ್​.ಎ. ಹ್ಯಾರಿಸ್​, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಹಾಗೂ ಪದ ವಿವಿಧ ಸಂಘಟನಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಐತಿಹಾಸಿಕ ಖಾಜಾ ಬಂದಾ ನವಾಜ್​ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ವಿವಿಧ ಧಾರ್ಮಿಕ ೇತ್ರಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಶಾಸಕಿ ಕನೀಜ್​ ಫಾತಿಮಾ ನಿವಾಸಕ್ಕೆ ತೆರಳಿ ಸನ್ಮಾನ ಸ್ವೀಕರಿಸಿ ಪದ ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಕಿರಣ್​ ದೇಶಮುಖ, ಜೆಸ್ಕಾಂ ಅಧ್ಯಕ್ಷ ಪ್ರವಿಣ್​ ಪಾಟೀಲ್​, ಕೆಪಿಸಿಸಿ ಕಾರ್ಯದರ್ಶಿ ರಾಜ್​ ಉಲ್​ ಇಸ್ಲಾಂ ಅವರನ್ನು ಭೇಟಿಯಾಗಿ ರಾಜಕೀಯ ಹಾಗೂ ಸಾರ್ವಜನಿಕ ವಿಷಯ ಕುರಿತು ಚರ್ಚಿಸಿದರು.

ರಾಜ್ಯ ವಕ್ಫ್​ ಮಂಡಳಿ ಅಧ್ಯಕ್ಷ ಸೈಯದ್​ ಮುಹಮ್ಮದ್​ ಅಲಿ ಅಲ್​ ಹುಸೇನಿ ಅವರನ್ನು ಭೇಟಿಯಾಗಿ ವಕ್ಫ್​ ಆಸ್ತಿ ರಣೆ, ಸಮುದಾಯದ ಪರ ಆಗಬೇಕಿರುವ ಕೆಲಸಗಳ ಕುರಿತು ಸಮಾಲೋಚನೆ ನಡೆಸಿದರು. ವಿಧಾನ ಪರಿಷತ್​ ಸದಸ್ಯೆ ಬಲ್ಕಿಸ್​ ಬಾನು ಇತರರಿದ್ದರು. ಪದ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹ್ಯಾರಿಸ್​ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು.

ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಶ್ರಮ

ಬೀದರ್​: ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ, ಹಕ್ಕುಗಳ ರಕ್ಷಣೆ ಹಾಗೂ ಸಮುದಾಯದಲ್ಲಿ ಒಗ್ಗಟ್ಟು ಮತ್ತು ಪ್ರಗತಿಗಾಗಿ ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎನ್​.ಎ. ಹ್ಯಾರಿಸ್​ ಹೇಳಿದರು. ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೌಹಾರ್ದ ಹಾಗೂ ಸಹಬಾಳ್ವೆ ನೆಲೆ ಬೀದರ್​ನಲ್ಲಿ ಅಲ್ಪಸಂಖ್ಯಾತರು ನೀಡಿದ ಗೌರವ ಮತ್ತು ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಮುದಾಯದ ಅಭಿವೃದ್ಧಿಗಾಗಿ ಹಗಲಿರುಳು ಕೆಲಸ ಮಾಡುವೆ ಎಂದು ತಿಳಿಸಿದರು. ಮಾಜಿ ಸಚಿವ ರಹೀಮ್​ ಖಾನ್​, ಜಿಲ್ಲಾ ಕಾಂಗ್ರೆಸ್​ ಅಧ್ಯ ಮನ್ನಾನ್​ ಸೇಠ್​, ಪ್ರಮುಖರಾದ ಮಹ್ಮದ್​ ಗೌಸ್​, ರೀದ್​ ಖಾನ್​ ಇತರರಿದ್ದರು. ಇದಕ್ಕೂ ಮುನ್ನ ಹ್ಯಾರಿಸ್​ ನಗರದ ಗುರುನಾನಕ್​ ಝೀರಾ ಸಾಹೀಬ್​ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಸೇಂಟ್​ ಪೌಲ್​ ಮೆಥೋಡಿಸ್ಟ್​ ಚರ್ಚ್​ ಸೇರಿ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದರು.