ಚಿಂಚೋಳಿ: ವಿದ್ಯಾ ದಾನ ವಿಶ್ವದಲ್ಲಿ ಶ್ರೇಷ್ಠವಾಗಿದೆ. ಈ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಅವರು 2 ಎಕರೆ ಭೂಮಿ ದಾನ ನೀಡಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಧೂಳಪ್ಪ ಮಳೆನೂರ ಹೇಳಿದರು.
ಐನೋಳ್ಳಿಯ ಶಶಿಧರ ನಾಗಶೆಟ್ಟಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಶಿಧರ ಪುಣ್ಯಶೆಟ್ಟಿ ಚಾರಿಟಿ ಟ್ರಸ್ಟ್ನಿಂದ ಸೋಮವಾರ ಹಮ್ಮಿಕೊಂಡಿದ್ದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಪ್ರತಿಭಾ ಪುರಸ್ಕಾರದಿಂದ ಶೈಕ್ಷಣಿಕ ವಲಯದಲ್ಲಿ ಧನಾತ್ಮಕ ಶಕ್ತಿ ಮೂಡಲಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ದಾನಿಗಳ ಸಂಖ್ಯೆ ಹೆಚ್ಚಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಇಂದುಮತಿ ಪುಣ್ಯಶೆಟ್ಟಿ, ಕ್ಷೆತ್ರ ಶಿಕ್ಷಣಾಧಿಕಾರಿ ಧೂಳಪ್ಪ ಮಳೆನೂರ, ಪ್ರಮುಖರಾದ ನಾಗಶೆಟ್ಟಿ ಭದ್ರಶೆಟ್ಟಿ, ದೇವಿಂದ್ರಪ್ಪ ಹೋಳ್ಕರ್, ಆನಂದ ಟೈಗರ್, ಸಂತೋಷ ಪಾಟೀಲ್, ನರಸಿಂಹಲು ಕುಂಬಾರ, ಅಶೋಕ ಭಜಂತ್ರಿ, ವೀರೇಂದ್ರಪ್ಪ ಕಟ್ಟೊಳ್ಳಿ, ಶರಣು ಪಪ್ಪಾ, ಇಬ್ರಾಹಿಂಸಾಬ್, ಮಲ್ಲಿಕಾರ್ಜುನ ಚಾಂಗೋಲ, ದಿನೇಶ ದುಗ್ಗಾಣಿ, ಪ್ರಭು, ಜನಾರ್ದನ ಪಾಟೀಲ್, ರಾಜು ಮಂದಾ, ದೇವಿಂದ್ರ ಬೊಕ್ಕಲ, ಶಿವಾಜಿ, ಅನೀಲ ಬೆಸ್ತಾ, ಖಾಜಪಟೇಲ, ಸಂಜುಕುಮಾರ ತಿರಲಾಪುರ, ಶಂಕರ ಗುತ್ತಿ, ವೀರಶೆಟ್ಟಿ ಪಾಟೀಲ್, ಚಂದ್ರಕಾಂತ ತಳವಾರ, ಶಶಿಧರ ಧನಶ್ರೀ, ಬಕ್ಕಪ್ಪ ಪೂಜಾರಿ, ರಾಜಕುಮಾರ ಮಂದಾ, ಅಸ್ಮತ ಚಿಂತಕುಂಟಾ, ವಿಶ್ವನಾಥ ಹೋಡೆಬೀರನಳ್ಳಿ, ರೇವಣಸಿದ್ದಪ್ಪ ದಂಡಿನ ಇತರರಿದ್ದರು.
ಪ್ರಿಯಾಂಕ್ ಖರ್ಗೆ ಅವರು ಅಹಿಂದ ನಾಯಕರಾಗಿದ್ದು, ಬುದ್ಧ, ಬಸವ, ಅಂಬೇಡ್ಕರ್ ತತ್ವದಡಿ ಜನಸೇವೆ ಮಾಡುತ್ತಿದ್ದಾರೆ. ಅವರ ಜನ್ಮದಿನದ ನಿಮಿತ್ತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ನಡೆಸಲಾಗಿದೆ. ಸಾಧಕ 10 ವಿದ್ಯಾರ್ಥಿಗಳಿಗೆ ಟ್ರಸ್ಟ್ನಿಂದ ನಗದು ಬಹುಮಾನ ವಿತರಿಸಲಾಗಿದೆ. ಡಿಸೆಂಬರ್ನಲ್ಲಿ ಮಾದರಿ ಶಾಲೆಗೆ ಲ್ಯಾಪಟಾಪ್ ವಿತರಣೆ ಮಾಡಲಾಗುವುದು.> ದೀಪಕನಾಗ ಪುಣ್ಯಶೆಟ್ಟಿ, ಮಾಜಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ