ಹೆಗ್ಗಣ್ಣ ಸಾಂದರ್ಭಿಕ ಚಿತ್ರ 
ಕಲಬುರಗಿ

ಪೊಲೀಸರೇ ಸತ್ತ ಹೆಗ್ಗಣ್ಣ ತೆಗೆಯಿರಿ: 112ಗೆ ಕರೆ ಮಾಡಿದ ಜನ

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ ನಿರ್ಲಕ್ಷ್ಯಕ್ಕೆ ಬೇಸತ್ತು 112ಗೆ ಕರೆ ಮಾಡಿದ ಜನ
ಕಲಬುರಗಿ: ನಮ್ಮ ಮನೆಯ ಮುಂದೆ ಕಳೆದ ಮೂರು ದಿನದಿಂದ ಹೆಗ್ಗಣ ಸತ್ತು ಬಿದ್ದಿದ್ದು, ಮಹಾನಗರ ಪಾಲಿಕೆಯವರಿಗೆ ತಿಳಿಸಿದರೂ ಯಾರೂ ಬರುತ್ತಿಲ್ಲ ಎಂದು ಪೊಲೀಸ್​ ಇಲಾಖೆಯ ತುರ್ತು ಸ್ಪಂದನೆ ಸಂಖ್ಯೆ 112ಗೆ ಕರೆ ಮಾಡಿದ ವಿಚಿತ್ರ ಟನೆ ನಗರದಲ್ಲಿ ನಡೆದಿದೆ.
ರಾವೇಂದ್ರ ನಗರ ಪೊಲೀಸ್​ ಠಾಣೆ ವ್ಯಾಪ್ತಿಯ ನಗರದ ಖಾದ್ರಿ ವೃತ್ತದ ಸಮೀಪದ ಅವಟೆ ಆಸ್ಪತ್ರೆ ಪಕ್ಕದ ಮನೆಯವರು 112ಗೆ ಕರೆ ಮಾಡಿ, ನಮ್ಮ ಮನೆ ಎದುರು ಸಮಸ್ಯೆ ಉಂಟಾಗಿದೆ ಬನ್ನಿ ಎಂದು ತಿಳಿಸಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ವಿಚಾರಿಸಿದಾಗ "ಸುಮಾರು ಮೂರು ದಿನದ ಹಿಂದೆ ನಮ್ಮ ಮನೆ ಮುಂದೆ ಹೆಗ್ಗಣ್ಣ ಸತ್ತು ಬಿದ್ದಿದ್ದು, ಮಹಾನಗರ ಪಾಲಿಕೆಯವರಿಗೆ ಕರೆ ಮಾಡಿ ತಿಳಿಸಿದರೂ ಯಾವುದೇ ರೀತಿಯಿಂದ ಸ್ಪಂದಿಸಿಲ್ಲ. ಆದ್ದರಿಂದ ನಾವು 112ಗೆ ಕರೆ ಮಾಡಿದ್ದೇವೆ. ದಯಮಾಡಿ ಸತ್ತು ಬಿದ್ದಿರುವ ಹೆಗ್ಗಣ್ಣವನ್ನು ತೆಗೆದುಕೊಂಡು ಹೋಗಬೇಕು ಎಂದು ಕೋರಿದ್ದಾರೆ. ನಂತರ ಸತ್ತು ಬಿದ್ದ ಹೆಗ್ಗಣವನ್ನು ಬೇರೆ ಕಡೆ ಬಿಸಾಕಿದ ನಂತರ ಪ್ರಕರಣ ಸುಖಾಂತ್ಯ ಕಂಡಿದೆ.
ಪಾಲಿಕೆ ರ್ನಿಲಕ್ಷ$್ಯ: ಹೆಗ್ಗಣ್ಣ ಸತ್ತು ಬಿದ್ದಿದೆ, ಸ್ವಚ್ಛಗೊಳಿಸಿ ಎಂದು ಮಹಾನಗರ ಪಾಲಿಕೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದೇ ರ್ನಿಲಕ್ಷ$್ಯ ವಹಿಸಿದ್ದರಿಂದ ಇಡೀ ಬಡಾವಣೆಯಲ್ಲಿ ದುರ್ವಾಸನೆ ಬೀರಿ, ಜನಜೀವನ ನಡೆಸುವುದು ಕಷ್ಟಕರವಾಗಿತ್ತು. ಇದರಿಂದ ಬೇಸತ್ತ ಜನರು 112ಗೆ ಕರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.