- ಪೋಕ್ಸೋ ಕೇಸ್ ನಿಮ್ಮ ಪರವಾಗಿ ಮಾಡುತ್ತೇನೆ ಎಂದು ಹಣಕ್ಕೆ ಬೇಡಿಕೆ
- ಚಿಂದಿ ಆಯುವ ಮಹಿಳೆಯ ಪುತ್ರಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ
ಕಲಬುರಗಿ: ಗೃಹ ಸಚಿವರಾಗಿ ಪ್ರಿಯಾಂಕ್ ರ್ಖಗೆ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅವರದ್ದೇ ಸ್ವಜಿಲ್ಲೆಯ ಕಲಬುರಗಿ ನಗರದ ವ್ಯಾಪ್ತಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪೋಕ್ಸೋ ಕೇಸ್ನ್ನು ನಿಮ್ಮ ಪರವಾಗಿ ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ಹಣಕ್ಕೆ ಬೇಡಿಕೆ ಇಟ್ಟ, ಪೇದೆಯೂ ಲೋಕಾಯುಕ್ತ ಬಲೆಗೆ ಬಿದ್ದ ಟನೆ ನಡೆದಿದೆ.
ಸ್ಟೇಷನ್ ಬಜಾರ್ ಠಾಣೆಯ ಕಾನ್ಸ್ಟೇಬಲ್ ಜ್ಯೋತಿ ಲೋಕಾಯುಕ್ತ ಬಲೆಗೆ ಬಿದ್ದ ಪೇದೆ. ಚಿಂದಿ ಆಯುವ ಮಹಿಳೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಲೈಂಗಿಕ ದೌರ್ಜನ್ಯ ಪೇಪರ್ ಆಯುವ ಮಹಿಳೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಚಾರ್ಜ್ಶೀಟ್ ದಾಖಲಿಸುತ್ತಿದ್ದು, ಕೇಸ್ ನಿಮ್ಮ ಪರವಾಗುವಂತೆ ಮಾಡಿಕೊಡುತ್ತೇವೆ ಎಂದು ಹಣಕ್ಕೆ ಪೊಲೀಸ್ ಪೇದೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಹಣ ಪಡೆಯುತ್ತಿದ್ದ ವೇಳೆ ಪೇದೆ ಜ್ಯೋತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಎಎಸ್ಐ ಒಬ್ಬರು ಸ್ಟೇಷನ್ನಿಂದ ಪರಾರಿಯಾಗಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಅರುಣ ಮುರಗುಂಡಿ ತಂಡದಿಂದ ದಾಳಿ ನಡೆಸಿದ್ದು, ಪರಾರಿಯಾಗಿರುವ ಎಎಸ್ಐಗಾಗಿ ಲೋಕಾಯುಕ್ತ ಪೊಲೀಸರು ಹುಡುಕಾಟ ನಡೆಸಿದ್ದಾರೆ.