ಕಲಬುರಗಿ: ದೇಶದಲ್ಲಿ ಅಪಾರ ಔಷಧೀಯ ಗುಣದ ಸಾವಿರಾರು ಸಸ್ಯ ಪ್ರಭೇದಗಳಿದ್ದು, ವೈಜ್ಞಾನಿಕ ಸಂಶೋಧನೆ ಕೈಗೊಂಡು ಮೌಲ್ಯವರ್ಧಿತ ಔಷಧೀಯ ಉತ್ಪನ್ನಗಳಾಗಿ ಅಭಿವೃದ್ಧಿಪಡಿಸುವ ಮೂಲಕ ದೇಶದ ಆರ್ಥಿಕತೆ ಬಲಪಡಿಸಬೇಕು ಎಂದು ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಸಮಿತಿ ಅಧ್ಯಕ್ಷರೂ ಆದ ಪೀತಾಂಬರ ಪಂತ್ ರಾಷ್ಟ್ರೀಯ ಪರಿಸರ ಫೆಲೊ ಡಾ.ಆರ್. ರಾವೇಂದ್ರರಾವ್ ಸಲಹೆ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗ ಸೋಮವಾರ ಏರ್ಪಡಿಸಿದ್ದ ಸಸ್ಯ ವಿಜ್ಞಾನದಲ್ಲಿ ಹೊಸ ಆಯಾಮಗಳು: ಶೈಕ್ಷಣಿಕ ಶ್ರೇಷ್ಠತೆಯಿಂದ ಸಾಂಸ್ಥಿಕ ನಾಯಕತ್ವದತ್ತ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ದಖನ್ ಪ್ರಸ್ಥಭೂಮಿ, ಪಶ್ಚಿಮ ಟ್ಟ, ಈಶಾನ್ಯ ಭಾರತ, ಪೂರ್ವ ಹಿಮಾಲಯ ಹಾಗೂ ಅಂಡಮಾನ್&ನಿಕೋಬಾರ್ ದ್ವೀಪಗಳು ವೈವಿಧ್ಯಮಯ ಸಸ್ಯ ಸಂಪತ್ತು ಹೊಂದಿವೆ. ವೈಜ್ಞಾನಿಕ ಸಂಶೋಧನೆ ನಡೆಸಿ ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದರು.
ಅಸ್ಸಾಂ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಹಾಗೂ ಮುಖ್ಯ ವನ್ಯಜಿವಿ ವಾರ್ಡನ್ ಟಿ.ವೇಣುಧರ್ ರೆಡ್ಡಿ ಮಾತನಾಡಿ, ಸಸ್ಯಶಾಸವು ಪರಿಸರ ವ್ಯವಸ್ಥೆ ಮತ್ತು ಸುಸ್ಥಿರ ಅಭಿವೃದ್ಧಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಜತೆ ವೃತ್ತೀಜಿವನದ ವಿವಿಧ ಅವಕಾಶ ಹಾಗೂ ಸಮಾಜಕ್ಕೆ ನೀಡಬಹುದಾದ ಕೊಡುಗೆಯತ್ತಲೂ ಚಿತ್ತ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿದರು. ಪ್ರೊ.ಪಲ್ಲೆಪೋಗು ರಾವಯ್ಯ, ಪ್ರೊ.ರಾಜೀವ್ ಜೋಶಿ, ಪ್ರೊ.ವೆಂಕಟರಮಣ ದೊಡ್ಡಿ, ಡಾ.ಅದುಶ್ ಭಟ್, ಡಾ.ಕೃಷ್ಣ ಚೈತನ್ಯ, ಡಾ.ಪ್ರಶಾಂತಕುಮಾರ್, ಡಾ.ಪ್ರಭಂಜನ್ ಗಾಯಿ, ಡಾ.ಸ್ವಾತಿ, ಡಾ.ಕವಿಶಂಕರ್, ಡಾ.ರಶ್ಮಿತಾ, ಡಾ.ಕವಿತಾ, ಡಾ.ಸೀನಮ್ ಇತರರಿದ್ದರು. ಸಸ್ಯಶಾಸ ವಿಭಾಗದ ಮುಖ್ಯಸ್ಥ ಪ್ರೊ.ಎನ್. ಸತ್ಯನಾರಾಯಣ ಸ್ವಾಗತಿಸಿದರು. ಡಾ.ರಾಕೇಶ್ ಕುಮಾರ್ ವಂದಿಸಿದರು. ಸಸ್ಯಶಾಸ ಸಂದ ನೂತನ ಕಾರ್ಯದರ್ಶಿಯಾಗಿ ಡಾ.ಪ್ರಶಾಂತ್ ಕುಮಾರ್ ಆಯ್ಕೆಯಾದರು.
ವಿದ್ಯಾರ್ಥಿಗಳು ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಶೈಕ್ಷಣಿಕ ಹಾಗೂ ಸಂಶೋಧನಾ ಸೌಲಭ್ಯ ಸದ್ಬಳಕೆ ಮೂಲಕ ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಬೇಕು.> ಪ್ರೊ.ಬಟ್ಟು ಸತ್ಯನಾರಾಯಣ ಕುಲಪತಿ, ಸಿಯುಕೆ