ಮಕ್ಕಳ ಪರೀಕ್ಷೆ 
ಕಲಬುರಗಿ

ಫಲಿತಾಂಶ ಸುಧಾರಣೆಗೆ ಆಡಳಿತ ಕಸರತ್ತು

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ೧೮ರಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ
  • ಪಶ್ನೆಪತ್ರಿಕೆ, ಮಾದರಿ ಉತ್ತರಸಹಿತ ಪುನರ್ಮನನ
  • ಗ್ರೇಡ್ ಹೆಚ್ಚಳಕ್ಕೆ ಮುಂದುವರಿದ ಶತಪ್ರಯತ್ನ
ಕಲಬುರಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರತಿವರ್ಷ ಕೊನೇ ರ‍್ಯಾಂಕಿAಗ್‌ನಲ್ಲಿ ಇರುತ್ತಿದ್ದ ಕಲ್ಯಾಣದ ಜಿಲ್ಲೆಗಳಲ್ಲಿನ ಆಡಳಿತ ಗ್ರೇಡ್ ಹೆಚ್ಚಳಕ್ಕೆ ಶತಪ್ರಯತ್ನ ಮಾಡುತ್ತಿದೆ.
ಕಲ್ಯಾಣ ಕರ್ನಾಟಕದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಧಾರಣೆಗಾಗಿ ಸರ್ಕಾರ, ಜಿಲ್ಲಾಡಳಿತ ಪ್ರತಿವರ್ಷ ಒಂದಿಲ್ಲೊAದು ವಿನೂತನ ಕಾರ್ಯಕ್ರಮ ಮಾಡುತ್ತಿದ್ದರೂ ನಿರೀಕ್ಷಿತ ಫಲ ಸಿಗುತ್ತಿಲ್ಲ. ಆದರೂ ಪ್ರಯತ್ನವಂತೂ ಜಾರಿಯಲ್ಲಿದೆ. ಎಸ್ಸೆಸ್ಸೆಲ್ಸಿ ಪಠ್ಯಕ್ರಮ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕು. ನಿತ್ಯ ಶಾಲೆ ಅವಧಿಗೂ ಮುನ್ನ ಅಥವಾ ನಂತರ ಒಂದು ವಿಷಯದ ವಿಶೇಷ ತರಗತಿ ಆಯೋಜಿಸಬೇಕು. ಘಟಕ ಪರೀಕ್ಷೆ ನಡೆಸಿ ಮೌಲ್ಯಮಾಪನ ಮೂಲಕ ವಿದ್ಯಾರ್ಥಿಗಳ ಪ್ರಗತಿ ವಿಶ್ಲೇಷಣೆ, ನಿಧಾನಗತಿ ಕಲಿಕಾ ಲಕ್ಷಣದ ವಿದ್ಯಾರ್ಥಿಗಳ ಕಲಿಕೆ ಬಲವರ್ಧನೆಗೊಳಿಸಲು ಪ್ರಗತಿ ಸಾಧಿಸಿರುವ ವಿದ್ಯಾರ್ಥಿಗಳೊಂದಿಗೆ ಸಂಯೋಜನೆ ಸೇರಿ ಇಲಾಖೆಯ ೨೦ ಅಂಶದ ಕಾರ್ಯಕ್ರಮದಲ್ಲಿ ಸೇರಿಸಲಾಗಿತ್ತು. ಈ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳೂ ಆಗಿವೆ.
೨೦೨೪-೨೫ರಲ್ಲಿ ರಾಜ್ಯದ ೩೫ ಜಿಲ್ಲೆಗಳಲ್ಲಿ ೨೭ ಬಿ ಗ್ರೇಡ್, ೫ ಎ ಮತ್ತು ಮೂರು ಜಿಲ್ಲೆ ಫಲಿತಾಂಶ ಸಿ ಗ್ರೇಡ್‌ನಲ್ಲಿದ್ದು, ಈ ಮೂರೂ ಜಿಲ್ಲೆ ಕಲ್ಯಾಣದ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಎಂಬುದು ವಿಶೇಷ. ರಾಜ್ಯದಲ್ಲಿ ಕಳೆದ ಬಾರಿ ೭.೯೬ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ೬.೩೭ ಲಕ್ಷ ತೇರ್ಗಡೆಯಾಗಿದ್ದರು. ರಾಜ್ಯದ ಒಟ್ಟಾರೆ ಫಲಿತಾಂಶ ಶೇ.೭೯ ಬಂದಿತ್ತು. ಕಕಲ್ಲಿ ೧,೭೦,೭೮೮ ಮಕ್ಕಳು ಪರೀಕ್ಷೆಗೆ ಹಾಜರಾಗಿ ೮೯,೫೧೯ ತೇರ್ಗಡೆ ಹೊಂದುವ ಮೂಲಕ ಶೇ.೫೨.೪೨ ಫಲಿತಾಂಶ ಬಂದಿತ್ತು. ಈ ಬಾರಿ ಸುಮಾರು ೨ ಲಕ್ಷ ಮಕ್ಕಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ.
ಹುದ್ದೆ ಖಾಲಿ ಶಿಕ್ಷಣಕ್ಕೆ ಹೊಡೆತ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶಿಕ್ಷಕರ ಹುದ್ದೆ ಖಾಲಿ ಇರುವುದು ಫಲಿತಾಂಶ ಕುಸಿತಕ್ಕೆ ಕಾರಣ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಖಾಲಿ ಹುದ್ದೆಗೆ ಪ್ರತಿಯಾಗಿ ಅತಿಥಿ ಶಿಕ್ಷಕರ ಮೂಲಕ ಪಾಠ-ಪ್ರವಚನ ನಡೆದಿದೆ. ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಷ್ಟಸಾಧ್ಯ. ಬಳ್ಳಾರಿ ಜಿಲ್ಲೆಯಲ್ಲಿ ೫೫೬ ಪ್ರೌಢಶಾಲಾ ಶಿಕ್ಷಕರ ಕೊರತೆ ಇದ್ದರೆ, ಬೀದರ್ ೪೨೫, ಕಲಬುರಗಿ ೫೮೯, ಕೊಪ್ಪಳ ೬೪೬, ರಾಯಚೂರು ೧೦೬೪, ವಿಜಯನಗರ ೨೭೪ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ೭೨೪ ಸೇರಿ ೪೨೭೮ ಹುದ್ದೆ ಖಾಲಿಯಿವೆ. ಪ್ರಾಥಮಿಕ ಶಾಲೆಗಳಿಗೆ ಸಂಬAಧಿಸಿದAತೆ ಬಳ್ಳಾರಿ ಜಿಲ್ಲೆಯಲ್ಲಿ ೨೨೧೭, ಬೀದರ್ ೧೩೮೯, ಕಲಬುರಗಿ ೩೧೨೯, ಕೊಪ್ಪಳ ೨೬೧೭, ರಾಯಚೂರು ೪೫೬೦, ವಿಜಯನಗರ ೧೩೭೬, ಯಾದಗಿರಿ ೩೦೨೯ ಸೇರಿ ೧೮,೩೧೭ ಹುದ್ದೆ ಖಾಲಿ ಇವೆ. ಪ್ರಾಥಮಿಕ ಮತ್ತು ಪ್ರೌಢ ಸೇರಿ ಸುಮಾರು ೨೫ ಸಾವಿರ ಶಿಕ್ಷಕರ ಹುದ್ದೆ ಖಾಲಿಯಿದ್ದು, ಇನ್ನೂ ಕೆಲವೆಡೆ ಕಾಯಂ ಶಿಕ್ಷಕರಿರಲಿ, ಅತಿಥಿ ಶಿಕ್ಷಕರೂ ಇಲ್ಲದಂಥ ಕೆಟ್ಟ ಸ್ಥಿತಿ ಇದೆ.
ಇಲಾಖೆ ಸಿದ್ಧತೆ ಏನು?: ೪೦ಪ್ಲಸ್ ಮಿಷನ್ ಕಾರ್ಯಾಗಾರ ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನು ಶಾಲಾ ಹಂತದಲ್ಲಿ ಅಳವಡಿಸಲು ವಿಷಯ ಶಿಕ್ಷಕ, ಮುಖ್ಯ ಶಿಕ್ಷಕರ ಕಾರ್ಯಾಗಾರ ಜಿಲ್ಲೆಯ ಎಲ್ಲ ತಾಲೂಕುಗಳÀಲ್ಲಿ ಮಾಡಲಾಗಿದೆ. ಶಾಲಾ ಹಂತದಲ್ಲಿ ಮಿಷನ್ ಟ್ರಾÈಕಿಂಗ್ ಮಾಡುತ್ತಿದ್ದು, ದತ್ತು ಅಧಿಕಾರಿಯಾಗಿ ಡಯಟ್ ಉಪನ್ಯಾಸಕರು, ಬಿಆರ್‌ಸಿ, ವಿಷಯ ಪರಿವೀಕ್ಷಕರು, ಇಲಾಖೆ ಅಧಿಕಾರಿಗಳನ್ನು ಮೇಲ್ವಿಚಾರಣೆಗಾಗಿ ನೇಮಿಸಲಾಗಿದೆ. ಶಿಕ್ಷಕರಿಗೆ ಮಕ್ಕಳ ದತ್ತು ನೀಡಲಾಗಿದೆ. ಆಯ್ದ ಶಾಲೆಗಳಲ್ಲಿ ಬಾಗಿಲು ಮುಚ್ಚಿದ ಶಾಲೆ (ವಿದ್ಯಾರ್ಥಿಗಳಿಗೆ ಪಾಠ, ಅಭ್ಯಾಸ, ಪುನರಾವರ್ತನೆ) ನಡೆಸಲಾಗುತ್ತಿದೆ. ನಾಲ್ಕು ಮಾದರಿ ಪಶ್ನೆಪತ್ರಿಕೆ ಮತ್ತು ಮಾದರಿ ಉತ್ತರಸಹಿತ ಪುನರ್ಮನನ ಸೇರಿ ಅಗತ್ಯ ಸಿದ್ಧತೆ ನಡೆದಿದೆ. ವಿಭಾಗದ ಕಲಬುರಗಿಯಲ್ಲಿ ೧೪೧, ಬಳ್ಳಾರಿ ೬೫, ಬೀದರ್ ೯೪, ಕೊಪ್ಪಳ ೭೪, ರಾಯಚೂರು ೧೦೧, ವಿಜಯನಗರ ೭೩, ಯಾದಗಿರಿ ೬೧ ಸೇರಿ ೬೦೯ ಪರೀಕ್ಷಾ ಕೇಂದ್ರಗಳಿದ್ದು, ೬೦೯ ಕಸ್ಟೋಡಿಯನ್ ನೇಮಿಸಲಾಗಿದೆ. ನಕಲು ಸೇರಿ ಅಕ್ರಮ ನಡೆಯದಂತೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಹೀಗಿದೆ ವೇಳಾಪಟ್ಟಿ: ೨೦೨೫-೨೬ರ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದ್ದು, ಮಾ.೧೮ರಂದು ಪ್ರಥಮ ಭಾಷೆ (ಕನ್ನಡ, ಹಿಂದಿ ಇತರ), ೨೩ರಂದು ಕೋರ್ ವಿಷಯ (ವಿಜ್ಞಾನ ಇತರ), ೨೫ರಂದು ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ), ೨೮ರಂದು ಗಣಿತ, ೩೦ರಂದು ತೃತೀಯ ಭಾಷೆ (ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲಿಷ ಇತರ), ಏ.೧ರಂದು ಜೆಟಿಎಸ್ ವಿಷಯ, ಅರ್ಥಶಾಸ್ತç, ಏ.೨ರಂದು ಕೋರ್ ವಿಷಯ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಪ್ರೌಢಶಾಲೆ ೧೫೯೪, ಅನುದಾನಿತ ಶಾಲೆ ೫೦೯ ಮತ್ತು ಅನುದಾನರಹಿತ ೧೭೯೭ ಸೇರಿ ೩೯೦೦ ಶಾಲೆಗಳಿವೆ.
"

ಕಲಬುರಗಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶನಿವಾರ, ಭಾನುವಾರವೂ ತರಗತಿ ನಡೆಸಲಾಗಿದೆ. ಹೆಚ್ಚುವರಿ ಪಾಠ, ಮೌಲ್ಯಮಾಪನ ಹೀಗೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಫಲಿತಾಂಶ ಮತ್ತಷ್ಟು ಸುಧಾರಿಸುವ ವಿಶ್ವಾಸವಿದೆ.

| ಶಂಕ್ರಮ್ಮ ಢವಳಗಿಡಿಡಿಪಿಐ ಕಲಬುರಗಿ

ಪ್ರಾಥಮಿಕ ಹಂತದಲ್ಲೇ ಮಕ್ಕಳನ್ನು ಸುಧಾರಿಸುವ ಕೆಲಸ ಆಗಬೇಕು. ಮೊದಲು ಬುನಾದಿ ಗಟ್ಟಿ ಮಾಡಬೇಕು. ಗ್ರಾಮೀಣ ಮಕ್ಕಳಿಗೆ ಒತ್ತು ನೀಡಬೇಕು, ಶಿಕ್ಷಕರಲ್ಲಿ ಬದ್ಧತೆ ಬರಬೇಕು. ಮಕ್ಕಳ ಜತೆ ಶಿಕ್ಷಕರ ಮೌಲ್ಯಮಾಪನ ನಡೆಯಬೇಕು. ಕೆಕೆಆರ್‌ಡಿಬಿ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡಿದೆ. ಹೀಗಾಗಿ ಫಲಿತಾಂಶದಲ್ಲಿ ಸುಧಾರಣೆ ಕಾಣಬೇಕಿದೆ.

| ಶರಣು ಪಪ್ಪಾಅಧ್ಯಕ್ಷ, ಕೆಕೆಸಿಸಿಐ