Pak releted person 
ಕಲಬುರಗಿ

ಕಲಬುರಗಿಯಲ್ಲಿ ಪಾಕ್ ಜತೆ ನಂಟು ಆರೋಪಿ ಅರೆಸ್ಟ್ : ಕಲಬುರಗಿ ಪೊಲೀಸ್ ಕಾರ್ಯಾಚರಣೆ

ಕಲಬುರಗಿ: ಪಾಕ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಇಬ್ಬರು ಆರೋಪಿಗಳನ್ನು ನಗರದಲ್ಲಿ ವಶಕ್ಕೆ ಪಡೆಯಲಾಗಿದೆ.
ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ನಗರ ಪೊಲೀಸ್ ನ ಆಂಟಿ ಟೇರರ್ ಸ್ಕ್ವಾಡ್ ನಿಂದ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಕಲಬುರಗಿ ನಗರ ಪೊಲೀಸ್ ನ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಲಬುರಗಿಯ ಅಜ್ಞಾತ ಸ್ಥಳದಲ್ಲಿ ಇಬ್ಬರನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶ ರೇಸಿಡೆನ್ಸಿಯಲ್ ಅ್ರಡೆಸ್ ಹೊಂದಿರುವ ಸಮೀರ್ ಮತ್ತು ಸಲ್ಮಾನ್ ನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದ್ದು, ಯಾವುದೇ ಪಾತ್ರ ಕಂಡು ಬರದ ಹಿನ್ನೆಲೆಯಲ್ಲಿ ಸಲ್ಮಾನ್ ನನ್ನು ಬಿಟ್ಟುಕಳುಹಿಸಿದ್ದು, ಸಮೀರ್ ನ್ನನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ವಾಟ್ಸ್ ಆಪ್ ಕಾಲ್ , ಫೇಸ್ ಬುಕ್ , ಇನ್ ಸ್ಟಾಗ್ರಾಂ ಮುಖಾಂತರ ಪಾಕ್ ಜೊತೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು,
ದಾಳಿ ಸಂಧರ್ಬದಲ್ಲಿ ಕೆಲವೊಂದು ಮ್ಯಾಪ್ ಗಳು ಪತ್ತೆಯಾಗಿವೆ ಎನ್ನಲಾಗಿದೆ.
ಸಮೀರ್ ಉಳಿದುಕೊಂಡಿದ್ದ ರೂಮ್ ನಲ್ಲಿ ಮ್ಯಾಪ್ ಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.