ಚಿತ್ತಾಪುರ ಬ್ಲಾಕ್​ ಕಾಂಗ್ರೆಸ್​ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂಘಟನಾ ಸೃಜನ್​ ಅಭಿಯಾನ- ನಡೆಯಿತು. ಅರವಿಂದಕುಮಾರ ಅರಳಿ, ಲಕ್ಷ್ಮೀ ಪತಿ, ಅಕ್ಕಮಹಾದೇವಿ ಪಾಟೀಲ್​, ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ್​ ಕರದಾಳ್​, ಭೀಮಣ್ಣ ಸಾಲಿ ಇತರರಿದ್ದರು.  
ಕಲಬುರಗಿ

ಲೀಡರ್​ ಬೇಸ್​ನಿಂದ ಕೇಡರ್​ ಬೇಸ್​ಗೆ ಪಕ್ಷ

ಚಿತ್ತಾಪುರ : ಸ್ಥಳಿಯ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ 11 ಹಾಗೂ ವಾಡಿ ಬ್ಲಾಕ್​ಗೆ 6 ಅರ್ಜಿ ಸಲ್ಲಿಕೆಯಾಗಿವೆ. ಪಕ್ಷವನ್ನು ಲೀಡರ್​ ಬೇಸ್​ನಿಂದ ಕೇಡರ್​ ಬೇಸ್​ಗೆ ತರಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ವೀಕ್ಷಕ ಹಾಗೂ ವಿಧಾನ ಪರಿಷತ್​ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಮಾಹಿತಿ ನೀಡಿದರು.

ಬ್ಲಾಕ್​ ಕಾಂಗ್ರೆಸ್​ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂಘಟನಾ ಸೃಜನ್​ ಅಭಿಯಾನ-ದಲ್ಲಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕ ಕುರಿತು ಅರ್ಜಿ ಸ್ವೀಕರಿಸಿ ಮಾತನಾಡಿ, ಡಿಸಿಸಿ, ಬಿಸಿಸಿ ಮತ್ತು 31 ಸೆಲ್​ಗಳಿಗೆ ಪೂರ್ಣ ಪ್ರಮಾಣದ ಪದಾಧಿಕಾರಿಗಳು ಹಾಗೂ 10 ಬೂತ್​ಗೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಡಿಸೆಂಬರ್​ನಲ್ಲಿ ಹೆಸರು ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಸಂಯೋಜಕ ಲಕ್ಷಿ$್ಮಪತಿ, ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಭೀಮಣ್ಣ ಸಾಲಿ, ಪ್ರಮುಖರಾದ ಅಕ್ಕಮಹಾದೇವಿ ಆರ್​.ಪಾಟೀಲ್​, ನಾಗರೆಡ್ಡಿ ಪಾಟೀಲ್​ ಕರದಾಳ, ಮುಕ್ತಾರ್​ ಪಟೇಲ್​, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಶಿವರುದ್ರ ಭೀಣಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ನಾಗರೆಡ್ಡಿ ಗೋಪಸೇನ್​, ದೇವಿಂದ್ರ ಆರಣಕಲ್​, ದೇವು ಯಾಬಾಳ, ಸಂಜಯ್​ ಬುಳಕರ್​, ನಜೀರ್​ ಆಡಕಿ ಇತರರಿದ್ದರು.