ಕಲಬುರಗಿ ಶರಣಬಸವ ವಿವಿಯಲ್ಲಿ ಗುರುವಾರ ನಡೆದ ಅಂತಾರಾಷ್ಟಿçÃಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಮಾತೋಶ್ರೀ ಗೋದುತಾಯಿ ಅವ್ವಾಜಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ, ಬಸವರಾಜ ದೇಶಮುಖ, ಪ್ರೊ.ಅನಿಲಕುಮಾರ ಬಿಡವೆ, ಡಾ.ಲಕ್ಷಿö್ಮà ಪಾಟೀಲ್ ಮಾಕಾ, ಪ್ರೊ.ವಿ.ಡಿ.ಮೈತ್ರಿ, ಡಾ.ಕಿರಣ್ ಮಾಕಾ, ವರ್ಷಾ ಜಾನೆ, ತೃಪ್ತಿ ಲಾಖೆ, ಶೋಭಾ ದೇಸಾಯಿ ಇತರರಿದ್ದರು. 
ಕಲಬುರಗಿ

ಪರಿಸರ ನಾಶ ನಿಯಂತ್ರಣಕ್ಕೆ ಮುಂದಾಗಿ

ಪ್ರಮುಖ ಮುಖ್ಯಾಂಶಗಳು

  • ಅದಮ್ಯಚೇತನ ಪ್ರತಿಷ್ಠಾನದ ಅಧ್ಯಕ್ಷೆ ತೇಜಸ್ವಿನಿ ಕರೆ
  • ಕಲಬುರಗಿ ಶರಣಬಸವ ವಿವಿಯಲ್ಲಿ ಮಹಿಳಾ ದಿನಾಚರಣೆ
ಕಲಬುರಗಿ: ಬಹುಪಾಲು ಜನಸಂಖ್ಯೆಯಲ್ಲಿ ಪೌಷ್ಟಿಕಾಂಶ ಕೊರತೆ, ಪರಿಸರ ನಾಶ ವಿಶೇಷವಾಗಿ ದೇಶದ ಯುವಕರು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸೇರಿ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಮಹಿಳೆಯರು ಮುಂದೆ ಬರಬೇಕು ಎಂದು ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷೆ, ಸಹ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿಶ್ವದ ಅತ್ಯಂತ ಕೆಟ್ಟ ವಾಯುಮಾಲಿನ್ಯ ಎದುರಿಸುತ್ತಿರುವ ೨೦ ನಗರಗಳಲ್ಲಿ ೧೮ ಭಾರತದಲ್ಲಿವೆ. ಇದಕ್ಕೆ ಹೆಚ್ಚುವರಿಯಾಗಿ ಭಾರತದ ನಗರ ಪ್ರದೇಶಗಳಲ್ಲಿ ಪರಿಸರದ ಮೇಲೆ ಪ್ಲಾಸ್ಟಿಕ್ ಅಪಾಯ ಹೆಚ್ಚಾಗಿದೆ. ಕೈಗಾರಿಕೆಗಳು ಜಲಮೂಲಗಳಿಗೆ ಸಂಸ್ಕರಿಸದೆ ಹೊರಹಾಕುವ ತ್ಯಾಜ್ಯ ದೇಶ ಎದುರಿಸುತ್ತಿರುವ ಮತ್ತೊಂದು ಗಂಭೀರ ಸಮಸ್ಯೆ ಎಂದು ಆತಂಕ ವ್ಯಕ್ತಪಡಿಸಿದರು.
ಶರಣಬಸವ ವಿವಿ ಮಹಿಳಾ ಸಾಧಕರಿಗೆ ಪ್ರತಿವರ್ಷ ನೀಡುವ ಪ್ರತಿಷ್ಠಿತ ಮಾತೋಶ್ರೀ ಗೋದುತಾಯಿ ಅವ್ವ ಪ್ರಶಸ್ತಿ ಸ್ವೀಕರಿಸಿದ ತೇಜಸ್ವಿನಿ, ದೇಶ ಎದುರಿಸುತ್ತಿರುವ ಮತ್ತೊಂದು ಗಂಭೀರ ಸಮಸ್ಯೆ ಭಾರತೀಯ ಜನಸಂಖ್ಯೆಯ ಕಡಿಮೆ ಪೌಷ್ಟಿಕಾಂಶ ಮತ್ತು ಭಾರತ ತನ್ನ ಜನಸಂಖ್ಯೆಯ ಪೌಷ್ಠಿಕಾಂಶ ಮಟ್ಟದಲ್ಲಿ ಇಡೀ ವಿಶ್ವದಲ್ಲಿ ೧೦೩ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಜಾಗತಿಕವಾಗಿ ನಡೆಸಿದ ಅಧ್ಯಯನ ಪ್ರಕಾರ, ಭಾರತದಲ್ಲಿ ೫೮ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆ ಕಡಿಮೆ ಅಥವಾ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುವುದಿಲ್ಲ. ಆದರೆ ಸಮೀಕ್ಷೆ ಫಲಿತಾಂಶಗಳ ಆಶ್ಚರ್ಯಕರ ಭಾಗವೆಂದರೆ ಭಾರತದಲ್ಲಿ ೩೦ ವರ್ಷಕ್ಕೂ ಕಡಿಮೆ ವಯಸ್ಸಿನ ಶೇ.೩೬ ಜನರು ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ವಿವಿ ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಅವರು ಮಾತೋಶ್ರೀ ಗೋದುತಾಯಿ ಅವ್ವಾ ಪ್ರಶಸ್ತಿ, ಸ್ತಿçÃಶಕ್ತಿ ಪ್ರಶಸ್ತಿ, ಸ್ತಿçÃರತ್ನ ಪ್ರಶಸ್ತಿ, ವೀರ ಮಹಿಳಾ ಪ್ರಶಸ್ತಿ, ಕಾಯಕ ರತ್ನ ಮತ್ತು ಉತ್ಕೃಷ್ಟ ಮಹಿಳಾ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿದ ಅವ್ವಾಜಿ, ಶರಣಬಸವೇಶ್ವರ ಸಂಸ್ಥಾನ ಮತ್ತು ಶರಣಬಸವ ವಿಶ್ವವಿದ್ಯಾಲಯವು ಭವಿಷ್ಯದ ಪೀಳಿಗೆಗೆ ಮಾದರಿಯಾಗಿದ್ದ ಮಹಿಳಾ ಸಾಧಕಿಯರನ್ನು ಗೌರವಿಸಲು ಹೆಮ್ಮೆಪಡುತ್ತದೆ. ಕರ್ನಾಟಕ ಮತ್ತು ರಾಜಸ್ಥಾನದ ವಿವಿಧ ಭಾಗಗಳ ಶಾಲೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಿದ್ದಕ್ಕಾಗಿ, ತೇಜಸ್ವಿನಿ ಅನಂತ ಕುಮಾರ ಅವರು ಮಾಡಿದ ಸೇವೆಗೆ ಅವರು ಗೌರವ ಪಡೆದಿದ್ದಾರೆ. ನಿಗದಿತ ಸಮಯಕ್ಕೆ ಆಹಾರ ನೀಡುವುದು, ಪೌಷ್ಠಿಕ ಆಹಾರ ಒದಗಿಸುವುದು ಸುಲಭದ ಕೆಲಸವಲ್ಲ. ಮಾನವಕುಲಕ್ಕೆ ಸೇವೆ ಸಲ್ಲಿಸುವುದು ದೇವರ ಸೇವೆ ಎಂಬ ತೇಜಸ್ವಿನಿಯವರ ದೃಢ ನಂಬಿಕೆ ತೋರಿಸುತ್ತದೆ ಎಂದರು.
ವಿದ್ಯಾರ್ಥಿನಿಯರು ತಮ್ಮ ವಿಭಿನ್ನ ಶೈಲಿಯ ನೃತ್ಯ ಪ್ರದರ್ಶಿಸಿದರು. ತೇಜಸ್ವಿನಿ ಅನಂತಕುಮಾರ್‌ಗೆ ಮಾತೋಶ್ರೀ ಗೋದುತಾಯಿ ಅವ್ವ ಪ್ರಶಸ್ತಿ, ಅರಿವು ಶಾಲೆಯ ಸಂಸ್ಥಾಪಕಿ ಸುಖೀಮಣಿ ಪಾಟೀಲ್ ಹಾಗೂ ವಾಸ್ತುಶಿಲ್ಪಿ ನಳಿನಿ ಮಹಾಗಾಂವ್‌ಕರ್‌ಗೆ ಸ್ತಿçÃಶಕ್ತಿ ಪ್ರಶಸ್ತಿ, ಡಾ. ಅಮರೇಶ್ವರಿ ಚಿಂಚನಸೂರ್‌ಗೆ ಸ್ತಿçÃರತ್ನ ಪ್ರಶಸ್ತಿ, ಮಹಿಳಾ ಪೊಲೀಸ್ ಠಾಣೆಯ ಪೋಲಿಸ್ ನೀರಿಕ್ಷಕಿ ಅಕ್ಕಮಹಾದೇವಿ ನೀಲೆ ಹಾಗೂ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಸ್ವಾತಿ ದರ್ಗಿಗೆ ವೀರ ಮಹಿಳೆ ಪ್ರಶಸ್ತಿ, ಶರಣಬಸವ ವಿವಿ ಡಾ.ಎಂ.ಶಶಿಕಲಾ ಅವರಿಗೆ ಕಾಯಕ ರತ್ನ ಪ್ರಶಸ್ತಿ ಮತ್ತು ಡಾ.ಶ್ರೀದೇವಿ ಹೊಸಮನಿ ಅವರಿಗೆ ಉತ್ಕೃಷ್ಟ ಮಹಿಳಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಖ್ಯಾತ ನಿರ್ದೇಶಕಿ ಹಾಗೂ ಚಿತ್ರಕಥೆಗಾರ್ತಿ ಡಾ.ರೂಪಾ ಅಯ್ಯರ್ ಅವರನ್ನು ಡಾ.ಅವ್ವಾಜಿ ಸನ್ಮಾನಿಸಿ, ಗೌರವಿಸಿದರು. ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ್ ಜಾನೆ, ಉಪಮೇಯರ್ ತೃಪ್ತಿ ಎಸ್ ಲಾಖೆ ಹಾಗೂ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಶೋಭಾ ದೇಸಾಯಿ ಅವರನ್ನು ಸತ್ಕರಿಸಲಾಯಿತು.
ವಿಶ್ವವಿದ್ಯಾಲಯದ ಕುಲಸಚಿವೆ ಡಾ.ಲಕ್ಷಿö್ಮÃ ಪಾಟೀಲ ಮಾಕಾ ಸ್ವಾಗತಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಮೌಲ್ಯಮಾಪನ ಡಾ.ಎಸ್.ಎಚ್.ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ.ಕಿರಣ್ ಮಾಕಾ, ಡೀನ್ ಡಾ.ಶಿವಕುಮಾರ ಜವಳಿಗಿ, ಡೀನ್ (ಸಂಶೋಧನೆ) ಡಾ.ಸುಜಾತಾ ಮಲ್ಲಾಪುರ ಇತರರಿದ್ದರು.
"

ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಮತ್ತು ಭಾರತೀಯ ಮಾರುಕಟ್ಟೆಯ ಬೇಡಿಕೆ ಪೂರೈಸಲು ಸಾಕಷ್ಟು ಪ್ರಮಾಣದ ದ್ವಿದಳ ಧಾನ್ಯ ಪಡೆಯುವ ಮೂಲಕ ದೇಶವು ತನ್ನ ಜನಸಂಖ್ಯೆಗೆ ಆಹಾರದ ಕೊರತೆ ನಿವಾರಿಸಿದೆ. ಆದರೆ ದೇಶದ ಬಹುಪಾಲು ಜನಸಂಖ್ಯೆಯು ಆಹಾರ ಸೇವನೆಯಲ್ಲಿ ಪೌಷ್ಠಿಕಾಂಶ ಮಟ್ಟದ ಸಮಸ್ಯೆ ಎದುರಿಸುತ್ತಿದೆ.

ತೇಜಸ್ವಿನಿ ಅನಂತಕುಮಾರ್,ಅಧ್ಯಕ್ಷೆ, ಅದಮ್ಯ ಚೇತನ ಪ್ರತಿಷ್ಠಾನ ಬೆಂಗಳೂರು.