ಆಳಂದ: ತಂತ್ರಜ್ಞಾನ ಹಾಗೂ ವಿಜ್ಞಾನ ಎಷ್ಟೇ ಮುಂದುವರಿದರೂ ನಿಸರ್ಗದ ಮುಂದೆ ನಾವೆಲ್ಲ ತಲೆ ಬಾಗಲೇಬೇಕು. ಇಲ್ಲವಾದರೆ ಜಲ, ಜೀವರಾಶಿಗಳಿಗೆ ಕಂಟಕವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ತಡಕಲ್ ಗ್ರಾಮದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ್ ಅವರ ತಾಯಿ ಅಂಬವ್ವ ರುಕ್ಮಯ್ಯ ಗುತ್ತೇದಾರ್ ಸ್ಮರಣಾರ್ಥ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಅಂಭಾಭವಾನಿ ಮಂದಿರ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಧರ್ಮಸಭೆ, ಅಡ್ಡಪಲ್ಲಕ್ಕಿ ಮಹೋತ್ಸವ, 1008 ಮುತ್ತೆದೆಯರಿಗೆ ಉಡಿ ತುಂಬುವ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರ ಆವರಿಸಿ ರೈತರು ಸಂಕಷ್ಟದಲ್ಲಿದ್ದಾರೆ. ಮಳೆರಾಯ ಮುನಿಸಿಕೊಂಡಿರುವುದರಿಂದ ರೈತರು ಆರ್ಥಿಕವಾಗಿ ಬಳಲುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಗೌರಿ ಗಣೇಶನ ಆರಾಧನೆಯಿಂದ ಸಂತೃಪ್ತನಾದ ಮಳೆರಾಯ ಇದೀಗ ಭೂವಿಗೆ ಇಳಿದಿದ್ದು, ರೈತರು ಹಾಗೂ ಜನರು ಮುಖದಲ್ಲಿ ಕೊಂಚ ಸಂತಸ ಮೂಡಿದೆ. ಎಲ್ಲರಿಗೂ ಮಳೆಬೇಕು, ಮಳೆ ಪಂಚಪೀಠ ಎಂದೇ ಹೆಸರುವಾಸಿಯಾಗಿರುವ ಉಜ್ಜಯಿನಿ ಪೀಠದ ಜಗದ್ಗುರುಗಳ ಆಶೀರ್ವಾದವಾಗಿದೆ. ಸಮೃದ್ಧಿಯ ಬದುಕು ನಿಮ್ಮದಾಗಲಿದೆ ಎಂದು ಹೇಳಿದರು.
ಸುಭಾಷ ಗುತ್ತೇದಾರ್ ಅವರು ತಮ್ಮ ತಾಯಿಯನ್ನು ತಾವು 6 ತಿಂಗಳ ಹಸುಗೂಸಿದ್ದಾಗ ಕಳೆದುಕೊಂಡಿದ್ದು, ಅಮ್ಮನ ನೆನಪಿಗಾಗಿ ಸುಂದರವಾದ ಭವಾನಿ ಮಂದಿರ ನಿರ್ಮಿಸಿ ಭಕ್ತಿ ಹಾಗೂ ಗೌರವ ಸಮರ್ಪಿಸಿದ್ದಾರೆ. ಗುತ್ತೇದಾರ್ ಪರಿವಾರ ಸದಾ ಧರ್ಮ ಕಾರ್ಯ ಮಾಡುತ್ತದೆ ಎಂದು ಶ್ಲಾಘಸಿದರು.
ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ, ಕಾಶಿ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಆರ್ಶೀವಚನ ನೀಡಿ, ಸನಾತನ ಧರ್ಮದಲ್ಲಿ ಯಾರು ಅನಾಥರಲ್ಲ. ಶಿವ-ಪಾರ್ವತಿಯರು ಜಗತ್ತಿನ ಮಾತಾ-ಪಿತರಾಗಿದ್ದಾರೆ. ಅವರ ಅಡಿಯಲ್ಲಿಯೇ ಎಲ್ಲವೂ ನಡೆಯತ್ತದೆ. ಮನುಷ್ಯ ಜ್ಞಾನ ಹೆಚ್ಚಾದಂತೆ ಸಂಸ್ಕಾರ, ಭಕ್ತಿ ಕಡಿಮೆ ಆಗುತ್ತಿದೆ. ಪಂಚಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಎಲ್ಲ ಶಿಷ್ಟಾಚಾರದೊಂದಿಗೆ ಶ್ರೀ ಅಂಭಾ ಭವಾನಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆದಿದ್ದು, ಈ ಭಾಗದಲ್ಲಿ ದೇವಿಯ ಕರುಣೆ ಸದಾ ಇರಲಿದೆ ಎಂದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ್ ಪ್ರಾಸ್ತಾವಿಕ ಮಾತನಾಡಿ, ನಾನು ತುಳಜಾಪುರದ ಅಂಭಾ ಭವಾನಿಯಲ್ಲಿ ನನ್ನ ಅಮ್ಮ ಅಂಬವ್ವಳನ್ನು ಕಾಣುತ್ತೇನೆ, ನಿರಂತರ ಆರಾಧಿಸುತ್ತೇನೆ. ಇದೀಗ ಅಮ್ಮನ ಸ್ಮರಣೆಯಲ್ಲಿ ಭವಾನಿ ಮಂದಿರ ನಿರ್ಮಿಸಿ, ಪಂಚಪೀಠ ಜಗದ್ಗುರುಗಳ ಆಶೀರ್ವಾದದೊಂದಿಗೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆದಿರುವುದು ಸಂತಸ ತಂದಿದೆ. ಧರ್ಮ ಕಾರ್ಯ ಹೀಗೆ ಮುಂದುವರಿಯಲಿದೆ. ಇಲ್ಲಿನ ದೇವಿ ಜನರ ಸಕಲ ಇಷ್ಟಾರ್ಥ ಪೂರೈಸುತ್ತಾಳೆ ಎಂದು ತಿಳಿಸಿದರು.
ಕಡಗಂಚಿಯ ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಮಾತನಾಡಿದರು. ಮಾಜಿ ಸಂಸದ ಡಾ.ಉಮೇಶ ಜಾಧವ್, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ಉದ್ಯಮಿ ಸಂತೋಷ ಗುತ್ತೇದಾರ್, ಪ್ರಮುಖರಾದ ಅಂಬಾರಾಯ ಅಷ್ಟಗಿ, ಕುಪೇಂದ್ರ ಗುತ್ತೇದಾರ್, ಅಶೋಕ ಗುತ್ತೇದಾರ್, ಸುರೇಶ ಸಜ್ಜನ್, ರಾಜಶೇಖರ ಸೀರಿ, ಹಣಮಂತರಾವ ಮಾಲಾಜಿ, ಮಲ್ಲಿಕಾರ್ಜುನ ಕಂದಗೂಳೆ, ಅಶೋಕ ಬಗಲಿ, ಸೋಮನಾಥ ಪಾಟೀಲ್, ಶಿವರಾಜ ಪಾಟೀಲ್ ರದ್ದೇವಾಡಗಿ, ಧರ್ಮಣ್ಣ ಇಟಗಾ, ಸಂತೋಷ ಹಾದಿಮನಿ, ಲಿಂಗರಾಜ ಬಿರಾದಾರ, ಶಿವಕಾಂತ ಮಹಾಜನ, ದಿವ್ಯಾ ಹಾಗರಗಿ, ಗೌರಿ ಚಿಚಕೋಟೆ, ದೀಲಿಪ್ ಬದೋಲೆ, ಅಶೋಕ ಗುತ್ತೇದಾರ್ ಬಡದಾಳ, ಸತೀಶ ಗುತ್ತೇದಾರ್, ರವಿ ಮದನಕರ್ ಇತರರಿದ್ದರು.
1008 ಮುತ್ತೈದೆಯರಿಗೆ ಉಡಿ ತುಂಬಲಾಯಿತು.
ಧರ್ಮಸಭೆಯಲ್ಲಿ ನಂದಗಾಂವ್ದ ಶ್ರೀ ರಾಜಶೇಖರ ಸ್ವಾಮೀಜಿ, ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯ, ಹಿರೇಮಠ ಶ್ರೀ ಸಿದ್ಧೇಶ್ವರ ಶಿವಾಚಾರ್ಯ, ನಿಂಬಾಳದ ಶ್ರೀ ಜಡೆಯಶಾಂತಲಿಂಗ ಸ್ವಾಮೀಜಿ, ಚಿಂಚನಸೂರದ ಶ್ರೀ ಸಿದ್ಧಮಲ್ಲ ಶಿವಾಚಾರ್ಯರು, ಮಾಡಿಯಾಳದ ಶ್ರೀ ಮರಳಸಿದ್ಧ ಸ್ವಾಮೀಜಿ, ಅಫಜಲಪುರದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಚಿನ್ಮಯಗಿರಿಯ ಶ್ರೀ ವೀರಮಹಾಂತ ಶಿವಾಚಾರ್ಯ, ಮಾದನಹಿಪ್ಪರಗಾ ಶ್ರೀ ಶಾಂತವೀರ ಶಿವಾಚಾರ್ಯ, ಚಿಂಚನಸೂರ ಶ್ರೀ ಗಂಗಾಧರ ಶಿವಾಚಾರ್ಯ, ನಿಂಬರ್ಗಾದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಬಂಗರಗಾದ ಶ್ರೀ ಶಿವಾನಂದ ಶಿವಾಚಾರ್ಯ, ಪಡಸಾವಳಿಯ ಶ್ರೀ ಶಂಭುಲಿಂಗ ಶಿವಾಚಾರ್ಯ, ತಡಕಲ್ದ ಶ್ರೀ ಸಿದ್ಧಮಲ್ಲ ಶಿವಾಚಾರ್ಯ, ಭೂಸನೂರ ಶ್ರೀ ಶಂಭುಸೋಮನಾಥ ಶಿವಾಚಾರ್ಯ, ಕಿಣ್ಣಿಸುಲ್ತಾನ ಶ್ರೀ ಶಾಂತಶಿವಲಿಂಗ ಶಿವಾಚಾರ್ಯ, ಯಳಸಂಗಿ ಶ್ರೀ ಪರಮಾನಂದ ಸ್ವಾಮೀಜಿ, ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜ, ನರೋಣಾ ಶ್ರೀ ಗುರುಮಹಾಂತ ಸ್ವಾಮೀಜಿ, ಕೇಸರ ಜವಳಗಾದ ಶ್ರೀ ವೀರಂತೇಶ್ವರ ಸ್ವಾಮೀಜಿ, ಅಕ್ಕಲಕೋಟದ ಶ್ರೀ ಬಸವಲಿಂಗ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ತಡಕಲ್ ಗ್ರಾಮದಲ್ಲಿ ಪಂಚಪೀಠದ ರಂಭಾಪುರಿ, ಉಜ್ಜಯಿನಿ ಹಾಗೂ ಕಾಶಿ ಜಗದ್ಗುರುಗಳ ಅದ್ದೂರಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು. ಮಧ್ಯಾಹ್ನ ಅಲಂಕೃತ ಪಲ್ಲಕ್ಕಿಯೊಳಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು, ಶ್ರೀ ಡಾ.ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ, ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರನ್ನು ಕೂರಿಸಿ ನೂತನ ದೇಗುಲದಿಂದ ಮೆರವಣಿಗೆ ಶುರು ಮಾಡಲಾಯಿತು. ಮಹಿಳೆಯರು ಕುಂಭ&ಕಳಸ ಹೊತ್ತು ಹೆಜ್ಜೆ ಜಾಕಿದರೆ, ಎತ್ತುಗಳು ಮುಂದೆ ಸಾಗಿದವು. ಅಸಂಖ್ಯ ಭಕ್ತರಿಂದ ಜೈೂಷ ಮೊಳಗಿದವು. ದಾರಿಯುದ್ದಕ್ಕೂ ಜನರು ಜಗದ್ಗುರುಗಳ ದರ್ಶನ ಪಡೆದು ಕೃತಾರ್ಥರಾದರು.
ದೇವರು ಮನಸ್ಸು ಮಾಡಿದರೆ ಎಲ್ಲವನ್ನು ಕೊಡುತ್ತಾನೆ, ಇಲ್ಲದಿದ್ದರೆ ಎಲ್ಲವನ್ನು ಕಸಿದುಕೊಳ್ಳುತ್ತಾನೆ. ಹೀಗಾಗಿ ಆಗಾಗ ಏನಾದರೂ ಒಂದು ಟನೆ ಮೂಲಕ ಛಾಟಿ ಬೀಸಿ ಎಚ್ಚರಿಸುವ ಕೆಲಸ ಭಗವಂತ ನಿರಂತನ ಮಾಡುತ್ತಿರುತ್ತಾನೆ. ಮಳೆ, ಗಾಳಿ ಸೇರಿ ಪಂಚಭೂತ ಹಾಗೂ ಮನಕುಲ ಜೀವರಾಶಿಗಳು ಪರಮಾತ್ಮ ಅಡಿಯಲ್ಲಿ ಇರುತ್ತವೆ. ಅವರವರ ಭಕ್ತಿಗೆ ತಕ್ಕಂತೆ ದೇವರು ಕೃಪೆ ತೋರುತ್ತಾನೆ.> ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು