ಕಾಳಗಿ: ಕರ್ನಾಟಕ ರಾಜ್ಯ ಪದವೀಧರ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ದೇವೇಂದ್ರ ಓಕಳಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಮಹೇಶ ಬಡಿಗೇರ ತಿಳಿಸಿದ್ದಾರೆ.
ಸೋಮವಾರ ಸರ್ಕಾರಿ ಪ್ರೌಢಾಶಾಲೆಯಲ್ಲಿ ಚುನಾವಣೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮೊದಲು ಸೆ.22ರಂದು ಪದವೀಧರ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಹನ್ನೆರಡು ಸ್ಥಾನಗಳಿಗೆ ಹದಿನೈದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಕೊನೆಯಲ್ಲಿ ಮೂವರು ನಾಮಪತ್ರ ಹಿಂಪಡೆದಿದ್ದರು. ಹೀಗಾಗಿ ದೇವೇಂದ್ರ ಓಕಳಿ, ನಾಗರಾಜ ಮಡಿವಾಳ, ಪ್ರಕಾಶ ರೊಳೆ, ನಾಗಪ್ಪ ಭೀಮಗೋಳ, ಮಲ್ಲಿಕಾರ್ಜುನ ಅಷ್ಟಗಿ, ಸಿದ್ಧಾರೂಢ, ಸಿದ್ದರಾಮಪ್ಪ ದಳಪತಿ, ಮಹಿಬೂಬ್ ಸಾಬ್, ಆರತಿ, ಪೂಜಾ ಸಿಂಗೆ, ಜ್ಯೋತಿ ಪವರ್, ಭೀಮರಾಯ ಅವರು ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆಯಾದರು.
ಬಳಿಕ ತಾಲೂಕು ಅಧ್ಯರನ್ನಾಗಿ ದೇವೇಂದ್ರ ಓಕಳಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ ರೋಳೆ, ಖಜಾಂಚಿಯಾಗಿ ನಾಗಪ್ಪ ಭೀಮಗೋಳ ಅವಿರೋಧ ಆಯ್ಕೆಯಾದರು. ಸಂದ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ಹಾಗೂ ಪ್ರಾಧ್ಯಾಪಕರು ವಿಜಯೋತ್ಸವ ನಡೆಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಕಲಮೂಡ, ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ಅನೀಲಕುಮಾರ ಗುತ್ತೇದಾರ್, ಪ್ರಮುಖರಾದ ಬಸವಂತರಾಯ ಪೆದ್ದಿ, ಯೂಸೂಫ್ಖಾನ್, ವಿಷ್ಣುಕಾಂತ ಮೈಲಾರಿ, ವಿವೇಕಾನಂದ, ಶಂಕರ ಮಂಗಲಗಿ, ಸಂಜುಕುಮಾರ ಕೋಡ್ಲಿ, ಮಾಣಿಕರಾವ, ಶಂಕರ ಬಿರಾದಾರ, ಮಾರುತಿ ಗಿರಣಿ ಇತರರಿದ್ದರು.