ಸಂಗಣ್ಣ ಅಲ್ದಿ 
ಕಲಬುರಗಿ

ನೃಪತುಂಗ ನಾಟ್ಯ ಸಂಘದ ವಾರ್ಷಿಕೋತ್ಸವ ನ.2ಕ್ಕೆ

ಸೇಡಂ: ಇಲ್ಲಿನ ನೃಪತುಂಗ ಹವ್ಯಾಸಿ ಕಲಾವಿದರ ನಾಟ್ಯ ಸಂಘದ 5ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ರಂಗ ನೃಪತುಂಗ ಪ್ರಶಸ್ತಿ ಪ್ರದಾನ ಹಾಗೂ ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರ ಸಂಕಲ್ಪದ ಸಾಹಿತ್ಯವಾಗಿರುವ ದ್ವೇಷ ಅಳಿಸಬೇಕು, ದೇಶ ಉಳಿಸಬೇಕು ನಾಟಕದ ಉಚಿತ ಪ್ರದರ್ಶನ ನ.2ರಂದು ಬೆಳಗ್ಗೆ 10.30ಕ್ಕೆ ಸುವರ್ಣ ಕರ್ನಾಟಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂದ ಅಧ್ಯಕ್ಷ ಸಂಗಣ್ಣ ಅಲ್ದಿ ಹೇಳಿದರು.

ಶ್ರೀ ಹವಾ ಮಲ್ಲಿನಾಥ ಮಹಾರಾಜ, ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಶ್ರೀ ಪ್ರಕಾಶ ತಾತಾ, ಶ್ರೀ ನಾಗಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಉದ್ಘಾಟಿಸುವರು. ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಜ್ಯೋತಿ ಬೆಳಗಿಸುವರು. ಜೆಡಿಎಸ್​ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್​ ರಂಗಭೂಮಿ ಪೂಜೆ ನೆರವೇರಿಸುವರು. ನಾಟಕ ಬರಹಗಾರರ ಸಂದ ಕಾರ್ಯಾಧ್ಯಕ್ಷ ಗುರಪ್ಪ ಪಾಟೀಲ್​ ನಂದೂರ ಸರ್ವಾಧ್ಯಕ್ಷತೆ, ಬಂಧು ಪ್ರಿಂಟರ್ಸ್​ನ ರಮೇಶ ತಿಪ್ಪೇನೂರ ಅಧ್ಯಕ್ಷತೆವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜಶೇಖರ ಮಂಗಲಗಿ, ವೀರಣ್ಣಗೌಡ ರೆಮ್ಮಣ್ಣಿ, ವೀರೇಶ ಕೊದಂಪುರ, ರುದ್ರಗೌಡ ಹಂಗನಹಳ್ಳಿ, ಧೂಳಪ್ಪ ಸಾಹುಕಾರ ಕೋಡ್ಲಾ ಇದ್ದರು.

ರಂಗ ನೃಪತುಂಗ ಪ್ರಶಸ್ತಿ ಪ್ರದಾನ

ವಿವಿಧ ೇತ್ರದ ಸಾಧಕರಾದ ಪ್ರಭಾಕರ ಜೋಶಿ, ರಮೇಶ ಬಡಿಗೇರ, ಮೋಹನ್​ ಬಳ್ಳಾರಿ, ಮಂಜುನಾಥ ಹಿರೇಮಠ, ರಾಜಮಹ್ಮದ್​ ಮುಲ್ಲಾ, ಎಚ್​.ವೈ.ವಡ್ಡರ, ಆಯಿಲ್​ರೆಡ್ಡಿ ಪಾಟೀಲ್​, ವಿಶ್ವನಾಥ ಪಾಟೀಲ್​, ಶರಣು ಮಹಾಗಾಂವ್​, ಶೇಖರ ನಾಟೀಕಾರ, ರೇವಣಸಿದ್ದಪ್ಪ ಚೊಂಚ್​, ವೆಂಕಟೇಶ ಕುಲಕರ್ಣಿ, ಮೋಹನರೆಡ್ಡಿ, ಭೀಮರಾವ ಮಾಲೀಪಾಟೀಲ್​, ಈಶಪ್ಪ ಜಮಾದರ, ಅಮಶೆಟ್ಟಿ ಪಾಟೀಲ್​, ಮಲ್ಲಿಕಾರ್ಜುನ ಹದಗಲಕರ್​, ಭೀಮರಾಯ ಈರಣ್ಣ, ಶಿವಪುತ್ರಪ್ಪ ಸಲಗಾರ, ವಾಸುದೇವ ಸಸಲಾಟ, ಮಹೇಶ ಪೈಲ್ವಾನ, ಸೋಮಶೇಖರ ನೀಲಿ, ಹನುಮಂತರಾವ ಬಿರಾದಾರ, ಲಲಿತಾ ಕೊಕಟ್​, ಮಲ್ಲು ಮಾಸ್ತರ್​ ಭಜಂತ್ರಿ ಅವರಿಗೆ ರಂಗ ನೃಪತುಂಗ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಂಗಣ್ಣ ಅಲ್ದಿ ಮಾಹಿತಿ ನೀಡಿದರು.