Irani Robbery Gang arrested
ಕಲಬುರಗಿ: ಕೊಲ್ಕತ್ತ, ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ, ಚೆನ್ನೆ$ನಲ್ಲಿ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ರಾಬರಿ, ಸುಲಿಗೆ, ದರೋಡೆ ಮಾಡುತ್ತಿದ್ದ ಖತರ್ನಾಟಕ ಇರಾನಿ ಗ್ಯಾಂಗ್ನ್ನು ನಗರ ಪೊಲೀಸರು ಪತ್ತೆ ಹಚ್ಚಿದ್ದು, ವಿವಿಧ ರಾಜ್ಯದ ಏಳು ಜನರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ಪೊಲೀಸರ ಬಟ್ಟೆ ಧರಿಸಿ, ಗಮನ ಬೇರೆಡೆ ಸೆಳೆದು ಹಣ, ಒಡವೆ ವಂಚಿಸುತ್ತಿದ್ದ ಇರಾನಿ ಗ್ಯಾಂಗ್ನ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ಶಿವಾಜಿ ನಗರದ ಜಹೀರ್ ಅಬ್ಬಾಸ್ ಅಲಿ ಶೇಖುಬ್ ಅಲಿ, ಇತನ ಸಹೋದರ ಅಲಿ ರಜಾಕ್ ಶೇಖುಬ್ ಅಲಿ, ಥಾಣೆ ಜಿಲ್ಲೆಯ ಅಂಬೆವಿಲಿಯ ಲಾಲ್ ಸಮೀರ್ ಶೇಖ್, ಮಧ್ಯ ಪ್ರದೇಶದ ಭೋಪಾಲನ ಖಾಸೀಂ ಜೋಜೋ ಜಾಫ್ರಿ, ಪರ್ಲಿಯ ಅಲಿಮಿರ್ಜಾ ದರಬೇಶ್, ಥಾಣೆ ಜಿಲ್ಲೆಯ ಕಲ್ಯಾಣದ ಜಾರ್ ಅಲಿ ಸೈಯದ್, ಅಂಬೆವಲಿಯ ಜಾರ್ ಅಜಮ್ ಸೈಯದ್ನನ್ನು ಬಂ-ಧಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಇರುವ ಖಚಿತ ಮಾಹಿತಿ ಮೇರೆಗೆ ಸಬ್ ಅರ್ಬನ್ ಇನ್ಸ್ಪೆಕ್ಟರ್ ನಟರಾಜ ನೇತೃತ್ವದಲ್ಲಿ ಸಿಬ್ಬಂದಿ ಟಓರಿಯಸ್ ಗ್ಯಾಂಗ್ನ್ನು ಬಂಧಿಸಿ, 90 ಗ್ರಾಂ. ಚಿನ್ನ, ಎರಡು ಬೈಕ್, ಒಂದು ಕಾರ್ ಸೇರಿ ಒಟ್ಟು 27.30 ಲಕ್ಷ ರೂ. ವಸ್ತು ಹಾಗೂ ಮಾರಕಾಸ್ತ್ರ, ದೆಹಲಿ ಪೊಲೀಸರ ನಕಲಿ ಐಡಿ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಗ್ಯಾಂಗ್ನ ಹಲವು ಸದಸ್ಯರ ಮೇಲೆ ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕದಲ್ಲಿ ಪ್ರಕರಣದ ದಾಖಲಾಗಿದ್ದು, ಅವುಗಳ ತನಿಖೆ ನಡೆಯುತ್ತಿದೆ ಎಂದರು.
ಕಾರ್ಯಾಚರಣೆಯಲ್ಲಿ ಎಸ್ಐ ನಟರಾಜ ಲಾಡೆ ನೇತೃತ್ವದಲ್ಲಿ ಪಿಎಸ್ಐ ಶಶಿಕಲಾ, ಸಿಬ್ಬಂದಿ ಪುಂಡಲೀಕ, ಎಎಸ್ಐ ನಾಗರಾಜ, ಎಂಎ ಬೇಗ, ಮಂಜುನಾಥ, ಫಿರೋಜ, ಮಲ್ಲಿಕಾರ್ಜುನ, ಸುಲ್ತಾನ, ಅಶೋಕ, ಅನೀಲ, ಶಶಿಕಾಂತ, ಮಹೇಶ, ಶಶಿಕಾಂತ ಮೋಸಿನ್ ಪಟೇಲ್ ಭಾಗಿಯಾಗಿ ಆರೋಪಿಗಳನ್ನು ಬಂಧಿಸಿದ್ದಕ್ಕೆ ಶ್ಲಾಘಿಸಿದರು.
ಡಿಸಿಪಿ ಪ್ರವಿಣ ನಾಯ್ಕ್, ಎಸಿಪಿ ಬಸವೇಶ್ವರ ಹೀರಾ ಇತರರಿದ್ದರು.