ಕಲಬುರಗಿ

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಬೆಳಗ್ಗೆ 10ಕ್ಕೆ ಶೇ.13 ಮತದಾನ, ಶಿಕ್ಷಕರ ಉತ್ಸಾಹ

ಕಲಬುರಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಬೆಳಗ್ಗೆ 1೦ ಗಂಟೆಗೆ ವೇಳೆ ಶೇಕಡಾ 13.51 ಮತದಾನ 34,784 ಮತದಾರರಲ್ಲಿ 4799 ಶಿಕ್ಷಕರು ಮತದಾನ ಮಾಡಿದ್ದಾರೆ.

ಕ್ಷೇತ್ರದಾದ್ಯಂತ ಬೆಳಿಗ್ಗೆ 10 ಗಂಟೆ ವರೆಗೆ 34,784 ಮತದಾರರ ಪೈಕಿ 2,960 ಪುರುಷ ಮತ್ತು 1,740 ಮಹಿಳೆ ಸೇರಿ ಒಟ್ಟು 4,700 (ಶೇ.13.51) ಮತದಾರರು ಮತದ ಹಕ್ಕು ಚಲಾಯಿಸಿದ್ದಾರೆ.

ಕಲಬುರಗಿ 1588 ಶಿಕ್ಷಕರು, ರಾಯಚೂರು 727, ಕೊಪ್ಪಳ 334, ಬಳ್ಳಾರಿ 409, ವಿಜಯನಗರ 472, ಬೀದರ್ 872, ಯಾದಗಿರಿ 295 ಶಿಕ್ಷಕರು ಮತ ಚಲಾಯಿಸಿದರು.

ಶಿಕ್ಷಕರು ಮತದಾನ ಮಾಡಿದ್ದು, ಎಲ್ಲೆಡೆ ಬಿರುಸಿನ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ, ಮಧ್ಯಾಹ್ನ ವೇಳೆಗೆ ಮತದಾನ ಪ್ರಕ್ರಿಯೆ ಇನ್ನಷ್ಟು ಚುರುಕು ಪಡೆದುಕೊಳ್ಳಲಿದೆ.

ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಮತಗಟ್ಟೆಗಳ ಬಳಿ ಅಂತಿಮ ಹಂತದ ಮನವೊಲಿಕೆ ಪ್ರಯತ್ನ ನಡೆಸಿದರು.